Assembly Polls: ಸಿದ್ದರಾಮಯ್ಯ ಕೋಲಾರದಿಂದಲೇ ಸ್ಪರ್ಧಿಸಬೇಕೆಂದು ಒತ್ತಾಯಿಸಿ ಅವರ ಬೆಂಗಳೂರು ನಿವಾಸದ ಮುಂದೆ ಬೀಡುಬಿಟ್ಟಿರುವ ಅಭಿಮಾನಿಗಳು

|

Updated on: Mar 21, 2023 | 10:41 AM

ಬೆಂಗಳೂರಿನಲ್ಲಿರುವ ಸಿದ್ದರಾಮಯ್ಯರ ಅಧಿಕೃತ ನಿವಾಸದ ಮುಂದೆ ಬೀಡು ಬಿಟ್ಟಿರುವ ಬೆಂಬಲಿಗರು ಅವರಿಗೆ ಕೋಲಾರದಿಂದಲೇ ಸ್ಪರ್ಧಿಸುವಂತೆ ಹೈಕಮಾಂಡ್ ಹೇಳದ ಹೊರತು ಅಲ್ಲಿಂದ ಕದಲುವುದಿಲ್ಲ ಎನ್ನುತ್ತಿದ್ದಾರೆ.

ಕೋಲಾರ: ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರಿಗೆ (Siddaramaiah) ಒಳ್ಳೇ ಪೀಕಲಾಟಿಕ್ಕಿಟ್ಟುಕೊಡಿದೆ. ಅವರಿಗೆ ಕೋಲಾರ ವಿಧಾನ ಸಭಾ ಕ್ಷೇತ್ರದಿಂದ (Kolar Constituency) ಸ್ಪರ್ಧಿಸುವ ಉತ್ಕಾಟಾಸೆ ಇತ್ತು. ಆದರೆ, ಹೈಕಮಾಂಡ್ ಭಿನ್ನ ರೀತಿಯಲ್ಲಿ ಯೋಚನೆ ಮಾಡುತ್ತಿರುವಂತಿದೆ. ಮೂಲಗಳ ಪ್ರಕಾರ ಸಿದ್ದರಾಮಯ್ಯ ವರುಣಾ ಕ್ಷೇತ್ರದಿಂದಲೇ (Varuna Constituency) ಸ್ಪರ್ಧಿಸಲಿ ಅಂತ ವರಿಷ್ಠರು ಹೇಳಿದ್ದಾರೆ. ಸಿದ್ದರಾಮಯ್ಯ ಈಗಾಗಲೇ 4-5 ಬಾರಿ ಕೋಲಾರಗೆ ಭೇಟಿ ನೀಡಿ ಪ್ರಚಾರ ಕಾರ್ಯವನ್ನೂ ಅರಂಭಿಸಿದ್ದರಿಂದ ಅಭಿಮಾನಿಗಳು ಸಂತೋಷದಲ್ಲಿದ್ದರು. ಆದರೆ, ಹೈಕಮಾಂಡ್ ಫರ್ಮಾನು ಅವರಿಗೆ ಬೇಸರ ತರಸಿದೆ. ಬೆಂಗಳೂರಿನಲ್ಲಿರುವ ಸಿದ್ದರಾಮಯ್ಯರ ಅಧಿಕೃತ ನಿವಾಸದ ಮುಂದೆ ಬೀಡು ಬಿಟ್ಟಿರುವ ಬೆಂಬಲಿಗರು ಅವರಿಗೆ ಕೋಲಾರದಿಂದಲೇ ಸ್ಪರ್ಧಿಸುವಂತೆ ಹೈಕಮಾಂಡ್ ಹೇಳದ ಹೊರತು ಅಲ್ಲಿಂದ ಕದಲುವುದಿಲ್ಲ ಎನ್ನುತ್ತಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ