ರೈತರಿಂದ ಹಾಲು ಖರೀದಿ ದರ 1 ರೂ. ಇಳಿಕೆ: ಕೋಚಿಮುಲ್ ಅಧ್ಯಕ್ಷ ಕೆವೈ ನಂಜೇಗೌಡ

ರೈತರಿಂದ ಹಾಲು ಖರೀದಿ ದರ 1 ರೂ. ಇಳಿಕೆ: ಕೋಚಿಮುಲ್ ಅಧ್ಯಕ್ಷ ಕೆವೈ ನಂಜೇಗೌಡ

ರಾಜೇಂದ್ರ ಸಿಂಹ ಬಿ.ಎಲ್. ಕೋಲಾರ
| Updated By: ಗಂಗಾಧರ​ ಬ. ಸಾಬೋಜಿ

Updated on: Dec 02, 2023 | 9:29 PM

ಕೋಲಾರ ಹಾಲು ಒಕ್ಕೂಟದಿಂದ ರೈತರಿಂದ ಹಾಲು ಖರೀದಿ ದರವನ್ನು ಒಂದು ರೂಪಾಯಿ ಇಳಿಕೆ ಮಾಡಿರುವ ವಿಚಾರವಾಗಿ ಮಾಲೂರು ಶಾಸಕ ಹಾಗೂ ಕೋಚಿಮುಲ್ ಅಧ್ಯಕ್ಷ ಕೆ.ವೈ. ನಂಜೇಗೌಡ ಪ್ರತಿಕ್ರಿಯಿಸಿದ್ದು, ಮೊದಲಿನಿಂದಲೂ ಹಾಲಿನ ದರ ಇಳಿಕೆ‌ ಮಾಡುವುದು ಸಂಪ್ರದಾಯ ಅದರಂತೆಯೇ ಒಂದು ರೂಪಾಯಿಯಷ್ಟೇ ಇಳಿಕೆ ಮಾಡಲಾಗಿದೆ ಎಂದಿದ್ದಾರೆ.

ಕೋಲಾರ, ಡಿಸೆಂಬರ್​​​ 02: ಬೇರೆ ಒಕ್ಕೂಟಕ್ಕೆ ಹೋಲಿಸಿದರೆ ನಮ್ಮಲ್ಲಿನ ಹಾಲಿನ ದರ ಹೆಚ್ಚಾಗಿದೆ ಎಂದು ಮಾಲೂರು ಶಾಸಕ, ಕೋಚಿಮುಲ್ ಅಧ್ಯಕ್ಷ ಕೆ.ವೈ.ನಂಜೇಗೌಡ (KY Nanjegowda) ಹೇಳಿದ್ದಾರೆ. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮೊದಲಿಂದಲೂ ಹಾಲಿನ ದರ ಇಳಿಕೆ ಮಾಡುವುದು ಸಂಪ್ರದಾಯ. ಒಂದು ರೂಪಾಯಿಯಷ್ಟೇ ಇಳಿಕೆ ಮಾಡಲಾಗಿದೆ. 3 ತಿಂಗಳಿಂದ ಬೆಂಗಳೂರು ಒಕ್ಕೂಟ ಲೀಟರ್​ಗೆ 5 ರೂ. ಇಳಿಸಿದೆ. ನಮ್ಮಲ್ಲಿ 400 ಕೋಟಿ‌ ರೂ. ಯೋಜನೆಗಳು ನಡೆಯುತ್ತಿವೆ. ಅದು ಸರ್ಕಾರದ ಪ್ರಾಜೆಕ್ಟ್‌ ಅಲ್ಲ, ಒಕ್ಕೂಟದಿಂದ ಮಾಡಲಾಗುತ್ತಿರುವ ಯೋಜನೆ, ಎಂ.ವಿ.ಕೆ ಗೋಲ್ಡೆನ್ ಡೈರಿ, ಐಸ್ ಕ್ರೀಂ ಪ್ಲಾಂಟ್, ಸೋಲಾರ್ ಪ್ಲಾಂಟ್ ಮಡಲಾಗುತ್ತಿದೆ, ಒಕ್ಕೂಟ ಲಾಭದಾಯಕವಾಗಿದೆ. ಆದರೆ ಒಕ್ಕೂಟದ ಅಭಿವೃದ್ದಿಗೆ ಹಣ ಬೇಕಾಗಿದೆ. ಲಾಭದಾಯಕವಾಗಿ ಒಕ್ಕೂಟ ನಡೆಸಿಕೊಂಡು ಹೋಗುತ್ತಿದ್ದೇವೆ, ಎಲ್ಲಾ ಒಕ್ಕೂಟಗಳಿಗಿಂತ ಹೆಚ್ಚಿಗೆ ಹಣ ಕೊಡುತ್ತಿದ್ದೇವೆ. ಹಾಲಿನ ದರ ಏರಿಕೆ ಮಾಡುವುದು ನಮ್ಮ ಸಂಪ್ರದಾಯ.
ಇಂದು ಹಾಲು ಉತ್ಪಾದಕರಿಗೆ ಎಲ್ಲೂ ತೊಂದರೆಯಾಗಿಲ್ಲ. ಒಕ್ಕೂಟ ಹಾಗೂ ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ ತೊಂದರೆಯಾಗದಂತೆ ನಡೆಸಿಕೊಂಡು ಹೋಗಲಾಗುತ್ತಿದೆ ಎಂದರು.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.