ಕೋಲಾರ ನಗರಸಭಾ ಸದಸ್ಯ ಕೊಲೆ ಆರೋಪಿ ಪೊಲೀಸರ ಮೇಲೆ ಹಲ್ಲೆ ನಡೆಸಿದ್ದರಿಂದ ಕಾಲಿಗೆ ಗುಂಡು ಹಾರಿಸಿ ಬಂಧಿಸಲಾಯಿತು

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Jun 24, 2022 | 2:39 PM

ಮುಳುಬಾಗಿಲು ಪಿ ಎಸ್ ಐ ಲಕ್ಷ್ಮಿಕಾಂತ್ ಫೈರಿಂಗ್ ಮಾಡಿದರೆಂದು ಪೊಲೀಸ್ ಮೂಲಗಳು ತಿಳಿಸಿವೆ. ಬಾಲಾಜಿಯನ್ನು ಚಿಕಿತ್ಸೆಗಾಗಿ ಕೋಲಾರ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ನೀಲಿ ಶರ್ಟ್ ಧರಿಸಿರುವ ಬಾಲಾಜಿಯನ್ನು ವಿಡಿಯೋನಲ್ಲಿ ನೋಡಬಹುದು.

ಕೋಲಾರ ನಗರಸಭೆ ಸದಸ್ಯರ (corporator) ಕೊಲೆ ಪ್ರಕರಣದಲ್ಲಿ ಅರೋಪಿಯಾಗಿರುವ ಬಾಲಾಜಿ ಸಿಂಗ್ ನನ್ನು (Balaji Singh) ಪೊಲೀಸರು ತಮ್ಮ ವಶಕ್ಕೆ ತೆಗೆದುಕೊಳ್ಳುವ ಮೊದಲು ಅವನ ಕಾಲಿಗೆ ಗುಂಡು ಹಾರಿಸಿ ಗಾಯಗೊಳಿಸಿದ್ದಾರೆ. ಬಂಧಿಸಲು ಹೋದಾಗ ಬಾಲಾಜಿ ಪೊಲೀಸರ ಮೇಲೆ ಹಲ್ಲೆ ನಡೆಸಿದ್ದರಿಂದ ಆತ್ಮರಕ್ಷಣೆಗಾಗಿ ಗುಂಡು ಹಾರಿಸುವ ಅನಿವಾರ್ಯತೆ ಎದುರಾಗಿದೆ. ಮುಳುಬಾಗಿಲು ಪಿ ಎಸ್ ಐ ಲಕ್ಷ್ಮಿಕಾಂತ್ (PSI Laxmikanth) ಅವರು ಫೈರಿಂಗ್ ಮಾಡಿದರೆಂದು ಪೊಲೀಸ್ ಮೂಲಗಳು ತಿಳಿಸಿವೆ. ಬಾಲಾಜಿಯನ್ನು ಚಿಕಿತ್ಸೆಗಾಗಿ ಕೋಲಾರ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ನೀಲಿ ಶರ್ಟ್ ಧರಿಸಿರುವ ಬಾಲಾಜಿಯನ್ನು ವಿಡಿಯೋನಲ್ಲಿ ನೋಡಬಹುದು.

ಇದನ್ನೂ ಓದಿ: