ಕೊಳ್ಳೇಗಾಲ ತಹಸೀಲ್ದಾರರ ಉಡಾಫೆ ಮನೋಭಾವದ ಬಗ್ಗೆ ಜನ ದೂರಿದಾಗ ಶಾಸಕ ಮಹೇಶ್​ರಿಂದ ಸೂಕ್ತ ಪ್ರತಿಕ್ರಿಯೆ ಬರಲಿಲ್ಲ!

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Jun 25, 2022 | 2:09 PM

ಅವರ ಈ ನಿರ್ಲಕ್ಷ್ಯ ಧೋರಣೆ ಮತ್ತು ಉಡಾಫೆತನದ ಬಗ್ಗೆ ದೂರಲು ಕೆಲ ಯುವಕರು ಕೊಳ್ಳೇಗಾಲದ ಅತಿಥಿ ಗೃಹದಲ್ಲಿ ಸಭೆ ನಡೆಸುತ್ತಿದ್ದ ಶಾಸಕ ಎನ್ ಮಹೇಶ್ ಎದುರು ಶನಿವಾರ ದೂರಿದ್ದಾರೆ. ಶಾಸಕರು ಆಧಿಕಾರಿಯನ್ನು ವಹಿಸಿಕೊಂಡು ಮಾತಾಡುತ್ತಿರುವುದು ದುರದೃಷ್ಟಕರ.

ಕೊಳ್ಳೆಗಾಲದ ಈ ತಹಸೀಲ್ದಾರ್ (Tahsildar) ಹೆಸರು ನಮಗೆ ಇನ್ನೂ ಗೊತ್ತಾಗಿಲ್ಲ. ಆದರೆ ಅವರ ಬಗ್ಗೆ ನಮಗೆ ಗೊತ್ತಾಗಿರುವ ವಿಷಯವೇನೆಂದರೆ ಅವರು ಸಾರ್ವಜನಿಕರು ಸಮಸ್ಯೆ ಹೇಳಿಕೊಳ್ಳಲು ಫೋನ್ ಮಾಡಿದರೆ ಪ್ರತಿಕ್ರಿಯಿಸುವುದಿಲ್ಲ. ಇತ್ತೀಚಿಗೆ ಕೊಳ್ಳೆಗಾಲದಲ್ಲಿ ಡಯಾಲಿಸಿಸ್ ಗೆ ಒಳಗಾಗಬೇಕಿದ್ದ ರೋಗಿಗಳು ಅದರ ವ್ಯವಸ್ಥೆ ಇಲ್ಲದೆ ನರಳಾಡುತ್ತಿದ್ದಾಗ ತಹಸೀಲ್ದದಾರರಿಗೆ ಪೋನ್ ಮಾಡಿದರೆ ಅವರು ಕರೆ ಸ್ವೀಕರಿಸಿಲ್ಲವಂತೆ. ಅವರ ಈ ನಿರ್ಲಕ್ಷ್ಯ ಧೋರಣೆ ಮತ್ತು ಉಡಾಫೆತನದ ಬಗ್ಗೆ ದೂರಲು ಕೆಲ ಯುವಕರು ಕೊಳ್ಳೇಗಾಲದ ಅತಿಥಿ ಗೃಹದಲ್ಲಿ ಸಭೆ ನಡೆಸುತ್ತಿದ್ದ ಶಾಸಕ ಎನ್ ಮಹೇಶ (N Mahesh) ಎದುರು ಶನಿವಾರ ದೂರಿದ್ದಾರೆ. ಶಾಸಕರು ಆಧಿಕಾರಿಯನ್ನು ವಹಿಸಿಕೊಂಡು ಮಾತಾಡುತ್ತಿರುವುದು ದುರದೃಷ್ಟಕರ.

ಇದನ್ನೂ ಓದಿ:    Viral Video: ಮಳೆಯಲ್ಲಿ ‘ಬರ್ಸೋ ರೆ ಮೇಘ ಮೇಘ’ ಹಾಡಿಗೆ ಗ್ರೂಪ್ ಡಾನ್ಸ್ ಮಾಡಿದ ಯುವತಿಯರು! ಏನ್​ ವೈರಲ್ ಗುರು ಈ ವಿಡಿಯೋ