ವಸತಿ ನಿಲಯದ ಮಕ್ಕಳಿಗೆ ಪಾನಿಪುರಿ ತಿನ್ನಿಸಿದ ಕೊಪ್ಪಳದ ಗವಿಸಿದ್ದೇಶ್ವರ ಶ್ರೀ
ಕೊಪ್ಪಳದ ಗವಿಮಠ, ರಾಜ್ಯದ ಸುಪ್ರಸಿದ್ದ ಮಠಗಳ ಸಾಲಿನಲ್ಲಿದ್ದು, ಅನೇಕ ಜನಪರ ಕೆಲಸಗಳ ಮೂಲಕ ಮತ್ತು ವಿಶಿಷ್ಟವಾಗಿ ನಡೆಸುವ ಜಾತ್ರೆಯ ಮೂಲಕ ಜನಮಾನಸದಲ್ಲಿದೆ. ಗವಿಸಿದ್ಧ ಮಠದ ವಸತಿ ನಿಲಯದಲ್ಲಿ ಸಾವಿರಾರು ಮಕ್ಕಳು ವಾಸವಾಗಿದ್ದಾರೆ. ಈ ಮಕ್ಕಳಿಗೆ ರವಿವಾರ ಸಾಯಂಕಾಲ ಮಕ್ಕಳಿಗೆ ಪಾನಿಪುರಿ ನೀಡಲಾಯಿತು.
ಕೊಪ್ಪಳದ ಗವಿಮಠ (Koppal Gavimath), ರಾಜ್ಯದ ಸುಪ್ರಸಿದ್ದ ಮಠಗಳ ಸಾಲಿನಲ್ಲಿದ್ದು, ಅನೇಕ ಜನಪರ ಕೆಲಸಗಳ ಮೂಲಕ ಮತ್ತು ವಿಶಿಷ್ಟವಾಗಿ ನಡೆಸುವ ಜಾತ್ರೆಯ ಮೂಲಕ ಜನಮಾನಸದಲ್ಲಿದೆ. ಅದರಲ್ಲೂ ಸದ್ಯದ ಮಠದ ಪೀಠಾಧಿಪತಿಯಾಗಿರುವ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ (Abhinava Gavisiddeswara Swamiji), ಶಿಕ್ಷಣ ದಾಸೋಹ, ಅನ್ನ ದಾಸೋಹ ಸೇರಿದಂತೆ ಜನರ ಬಾಳಿಗೆ ಬೆಳಕಾಗುವ, ಅವರ ಸಮಸ್ಯೆಗಳಿಗೆ ಪರಿಹಾರಾತ್ಮಕ ಕೆಲಸಗಳ ಮೂಲಕ, ಸರ್ವಧರ್ಮಗಳ ನಡುವೆ ಸಮನ್ವಯತೆಯನ್ನು ಮೂಡಿಸುವ ಕೆಲಸಗಳ ಮೂಲಕ ಹೆಚ್ಚು ಪ್ರಸಿದ್ದಿಯನ್ನು ಪಡೆದಿದ್ದಾರೆ.
ಗವಿಸಿದ್ಧ ಮಠದ ವಸತಿ ನಿಲಯದಲ್ಲಿ ಸಾವಿರಾರು ಮಕ್ಕಳು ವಾಸವಾಗಿದ್ದಾರೆ. ಈ ಮಕ್ಕಳಿಗೆ ಶ್ರೀ ಮಠ ಉಚಿತವಾಗಿ ಶಿಕ್ಷಣ ಮತ್ತು ದಾಸೋಹ ವ್ಯವಸ್ಥೆ ಮಾಡಿದೆ. ರವಿವಾರ ಸಾಯಂಕಾಲ ಮಠದ ವಸತಿ ನಿಲಯದ ಐದು ಸಾವಿರ ಮಕ್ಕಳಿಗೆ ಪಾನಿಪುರಿ (Panipuri) ನೀಡಲಾಯಿತು. ಅಭಿನವ ಗವಿಸಿದ್ದೇಶ್ವರ ಶ್ರೀಗಳು ಸ್ವತಃ ಮಕ್ಕಳಿಗೆ ಪಾನಿಪುರಿ ಬಡಿಸಿದರು. ಬಡಿಸಿತ್ತಾ ಮಕ್ಕಳಿಗೆ ಪಾನಿಪುರಿ ತಿನ್ನಿಸಿದರು.
ಶ್ರೀ ಮಠದಲ್ಲಿ ನಡೆಯುವ ಜಾತ್ರಾಮಹೋತ್ಸವ ದಕ್ಷಿಣ ಭಾರತದ ಕುಂಭಮೇಳವೇಂದೆ ಖ್ಯಾತಿ ಗಳಿಸಿದೆ. ದಾಸೋಹ, ಜಾಗೃತಿ ಮತ್ತು ಸರ್ವಧರ್ಮ ಸಮನ್ವಯದ ಸಮಾಗಮನ, ಧಾರ್ಮಿಕ ಆಚರಣೆಗಳೊಂದಿಗೆ ಪ್ರತಿ ಜಾತ್ರೆಯಲ್ಲಿಯೂ ಭಕ್ತರಲ್ಲಿ ಹಾಗೂ ಜನರಲ್ಲಿ ವಿಶಿಷ್ಟ ರೀತಿಯ ಜಾಗೃತಿ ಮೂಡಿಸಲಾಗುತ್ತಿದೆ. ಜಾತ್ರೆಗೊಂದು ಹೊಸರೂಪ-ಹೊಸ ಮೆರುಗು ನೀಡುವ ಮೂಲಕ ಶ್ರೀ ಮಠವು ದೇಶ, ವಿದೇಶಗಳ ಗಮನ ಸೆಳೆದಿದೆ.
ಇದನ್ನೂ ಓದಿ: ಸ್ವಾಮೀಜಿ ಕಣ್ಣೀರು ಒರೆಸಲು ಬಂದವು ಸಾವಿರಾರು ಕೈಗಳು; ಎರಡೇ ವರ್ಷದಲ್ಲಿ ನಿರ್ಮಾಣವಾಯ್ತು ಬೃಹತ್ ಹಾಸ್ಟೆಲ್
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ