ಯಾವ ಜೈಲಿಗೂ ಬೇಡವಾದ ಕೈದಿ ಬಾಂಬೆ ಸಲೀಂ, ದೊಡ್ಡ ತಲೆನೋವಾದ ಮೋಸ್ಟ್ ವಾಂಟೆಡ್ ಕ್ರಿಮಿನಲ್
ವಿಚಾರಣಾಧೀನ ಕೈದಿ ಬಾಂಬೆ ಸಲೀಂ ಯಾವ ಜೈಲಿಗೂ ಬೇಡವಾಗಿದ್ದಾನೆ. ಜೈಲಿನಲ್ಲಿ ಗುಂಪುಗಾರಿಕೆ, ಶಾಂತಿ ಕದಡುವ ಯತ್ನ, ಅಧಿಕಾರಿಗಳ ಮೇಲೆ ಹಲ್ಲೆ ಆರೋಪ ಹಿನ್ನೆಲೆಯಲ್ಲಿ ಚಿಕ್ಕಬಳ್ಳಾಪುರ ವಿಚಾರಣಾಧೀನ ಕೈದಿ ಬಾಂಬೆ ಸಲೀಂ ನನ್ನು ಸೇರಿಸಿಕೊಳ್ಳಲು ನಮ್ಮ ಜೈಲಿಗೆ ಬೇಡವೇ ಬೇಡ ಎಂದು ಮೂರು ಜಿಲ್ಲೆಗಳ ಜೈಲಾಧಿಕಾರಿಗಳು ವಾಪಸ್ ಕಳುಹಿಸಿದ್ದಾರೆ.
ಚಿಕ್ಕಬಳ್ಳಾಪುರ, (ಸೆಪ್ಟೆಂಬರ್ 11): ದಕ್ಷಿಣ ಭಾರತದಲ್ಲೇ ಮೋಸ್ಟ್ ವಾಂಟೆಡ್ ಕ್ರಿಮಿನಲ್ ಬಾಂಬೆ ಸಲೀಂ ಯಾವ ಜೈಲಿಗೂ ಬೇಡವಾಗಿದ್ದಾನೆ. ಜೈಲಿನಲ್ಲಿ ಗುಂಪುಗಾರಿಕೆ, ಶಾಂತಿ ಕದಡುವ ಯತ್ನ, ಅಧಿಕಾರಿಗಳ ಮೇಲೆ ಹಲ್ಲೆ ಆರೋಪ ಹಿನ್ನೆಲೆಯಲ್ಲಿ ಚಿಕ್ಕಬಳ್ಳಾಪುರ ವಿಚಾರಣಾಧೀನ ಕೈದಿ ಬಾಂಬೆ ಸಲೀಂ ನನ್ನು ಸೇರಿಸಿಕೊಳ್ಳಲು ನಮ್ಮ ಜೈಲಿಗೆ ಬೇಡವೇ ಬೇಡ ಎಂದು ಮೂರು ಜಿಲ್ಲೆಗಳ ಜೈಲಾಧಿಕಾರಿಗಳು ವಾಪಸ್ ಕಳುಹಿಸಿದ್ದಾರೆ.
ಹೌದು.. ಚಿಕ್ಕಬಳ್ಳಾಪುರ ಜೈಲು ಅಧಿಕಾರಿಗಳ ಮೇಲೆಯೇ ಹಲ್ಲೆ ಸಂಬಂಧ ಬಾಂಬೆ ಸಲೀಂನನ್ನು ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಲು ಕರೆದುಕೊಂಡು ಹೋಗಲಾಗಿತ್ತು. ಆದ್ರೆ, ಅಲ್ಲಿನ ಜೈಲಾಧಿಕಾರಿಗಳು ಸೇರಿಸಿಕೊಳ್ಳಲು ನಿರಾಕರಿಸಿದ್ದಾರೆ. ಬಳಿಕ ಅಲ್ಲಿಂದ ಕೊಪ್ಪಳ ಜೈಲಿಗೆ ಕರೆದೊಯ್ದಿದ್ದಾರೆ. ಅಲ್ಲೂ ಸೇರಿಸಿಕೊಂಡಿಲ್ಲ. ನಂತರ ಚಿತ್ರದುರ್ಗಕ್ಕೂ ಕರೆದುಕೊಂಡು ಹೋಗಲಾಗಿತ್ತು. ಅಲ್ಲೂ ಸಹ ಸೇರಿಸಿಕೊಳ್ಳಲು ನಿರಾಕರಿಸಿದ್ದಾರೆ. ಕೊನೆಗೆ ವಿಧಿಯಿಲ್ಲದೇ ಬಾಂಬೆ ಸಲೀಂನನ್ನು ವಾಪಸ್ ಚಿಕ್ಕಬಳ್ಳಾಪುರ ಜೈಲಿಗೆ ಕರೆತಂದಿದ್ದಾರೆ. ಬಳ್ಳಾರಿ, ಕೊಪ್ಪಳ, ಚಿತ್ರದುರ್ಗ ರೌಂಡ್ಸ್ ಹಾಕಿ ಮರಳಿ ಚಿಕ್ಕಬಳ್ಳಾಪುರಕ್ಕೆ ವಾಪಾಸ್ ಕರೆತರಲಾಗಿದ್ದು, ಇದೀಗ ಸಲೀಂ ಪೊಲೀಸ್ ಹಾಗೂ ಕಾರಾಗೃಹ ಇಲಾಖೆಗೆ ದೊಡ್ಡ ತಲೆನೋವಾಗಿದ್ದಾನೆ.