ಪತ್ನಿಗೆ ಸಮೀಕ್ಷೆ ಕೆಲಸ; ಹೆಂಡ್ತಿ ಜೊತೆ ಬಂದ ಮಗುವಿನ ಆರೈಕೆ ಮಾಡ್ತಿರೋ ಪತಿ

Updated on: Sep 25, 2025 | 3:22 PM

ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ (ಜಾತಿ ಗಣತಿ) ಕಾರ್ಯವನ್ನು ಆರಂಭಿಸಿದೆ. ಈ ಗಣತಿಗಾಗಿ ಶಿಕ್ಷಕರನ್ನು ನೇಮಿಸಲಾಗಿದೆ. ಶಿಕ್ಷಕರು ಮನೆ ಮನೆಗಳಿಗೆ ಹೋಗಿ ಸಮೀಕ್ಷೆ ನಡೆಸುತ್ತಿದ್ದಾರೆ. ಈ ನಡುವೆ ಇಲ್ಲೊಬ್ಬರು ವ್ಯಕ್ತಿ ಮಗುವಿನ ಆರೈಕೆಯ ಸಲುವಾಗಿ ಜಾತಿ ಗಣತಿ ಸರ್ವೆ ನಡೆಸ್ತಿರೋ ಹೆಂಡತಿ ಜೊತೆ ಬಂದಿದ್ದಾರೆ.

ಕೊಪ್ಪಳ, ಸೆಪ್ಟೆಂಬರ್‌ 25: ಕರ್ನಾಟಕದಲ್ಲಿ ಈಗಾಗಲೇ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ (Karnataka caste census) ಆರಂಭಗೊಂಡಿದೆ. ಗಣತಿಗಾಗಿ ನೇಮಕ ಮಾಡಿರುವಂತಹ ಶಿಕ್ಷಕರೆಲ್ಲರೂ ಮನೆ ಮನೆಗಳಿಗೆ ಹೋಗಿ ಸಮೀಕ್ಷೆ ನಡೆಸುತ್ತಿದ್ದಾರೆ. ಇಲ್ಲೊಬ್ರು ಶಿಕ್ಷಕಿ ಜೊತೆ ಅವರ ಗಂಡ ಕೂಡ ಸಮೀಕ್ಷೆಗೆ ಹಾಜಾರಾಗಿದ್ದಾರೆ. ಕೊಪ್ಪಳ ತಾಲೂಕಿನ ಅಬ್ಬಿಗೇರಿ ಶಾಲೆ ಶಿಕ್ಷಕಿ ನಾಗವೇಣಿ ಜೊತೆ ಮಗುವಿನ ಆರೈಕೆಗಾಗಿ ಪತಿ ಶಿವರಾಜ್‌ ಕೂಡ ಬಂದಿದ್ದಾರೆ. ಮಗು ಸಣ್ಣದು, 2.5 ವರ್ಷ ಅಷ್ಟೆ. ಮಗು ತಾಯಿಯನ್ನು ಬಿಟ್ಟಿರಲ್ಲ ಆ ಕಾರಣಕ್ಕಾಗಿ ಹೆಂಡ್ತಿ ಜೊತೆ ಸಮೀಕ್ಷೆ  ನಾನು ಕೂಡ ಬರಲೇಬೇಕಾಯಿತು. ಒಂದುವರೆ ವರ್ಷ ಮೇಲ್ಪಟ್ಟ ಮಕ್ಕಳಿದ್ದರೆ ಅವರಿಗೆ ವಿನಾಯಿತಿ ಇಲ್ಲ ಹೇಳಿದ್ರು, ಅದಕ್ಕೆ ಅನಿವಾರ್ಯದಿಂದ ನಾವು ಮಗುವನ್ನು ಹಿಡಿದುಕೊಂಡು ಸಮೀಕ್ಷೆ ನಡೆಸಲು ಬರಬೇಕಾಯಿತು ಎಂದು ಶಿವರಾಜ್‌ ಹೇಳಿಕೊಂಡಿದ್ದಾರೆ.

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ