AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗೊಂದಲದ ಜಾತಿಗಣತಿ: ನೆಟ್‌ವರ್ಕ್, ಆ್ಯಪ್ ಸಮಸ್ಯೆಯಿಂದ ಸಿಬ್ಬಂದಿ ಪರದಾಟ

ಗೊಂದಲದ ಜಾತಿಗಣತಿ: ನೆಟ್‌ವರ್ಕ್, ಆ್ಯಪ್ ಸಮಸ್ಯೆಯಿಂದ ಸಿಬ್ಬಂದಿ ಪರದಾಟ

Ganapathi Sharma
|

Updated on: Sep 25, 2025 | 8:12 AM

Share

ರಾಜ್ಯ ಸರ್ಕಾರದ ಪಾಲಿಗೆ ಈ ಜಾತಿಗಣತಿ ಗಜಪ್ರಸವದಂತಾಗಿದ್ದು, ಆರಂಭಿಸುವ ಮೊದಲೂ ಸಂಕಟ, ಆರಂಭವಾದ ಮೇಲೂ ಮತ್ತೊಂದು ಸಂಕಟ ಎಂಬಂತಾಗಿದೆ. ಜಾತಿಗಣತಿ ನಡೆಯಬೇಕೋ? ಬೇಡ್ವೋ ಎಂಬ ವಾದ, ಪ್ರತಿವಾದ ಹೈಕೋರ್ಟ್‌ನಲ್ಲಿ ನಡೆಯುತ್ತಿದೆ. ಮತ್ತೊಂದೆಡೆ, ಮನೆ ಮನೆಗೆ ಗಣತಿಗೆ ಹೋಗುತ್ತಿರುವ ಶಿಕ್ಷಕರಿಗೆ ಮತ್ತೊಂದು ಪೀಕಲಾಟ ಶುರುವಾಗಿದೆ.

ಬೆಂಗಳೂರು, ಸೆಪ್ಟೆಂಬರ್ 25: ನೆಟ್‌ವರ್ಕ್‌ ಸರಿಯಾಗಿ ಸಿಗುತ್ತಿಲ್ಲ, ಆ್ಯಪ್‌ ಒಮ್ಮೆ ಓಪನ್ ಆದರೆ ಮತ್ತೊಮ್ಮೆ ಓಪನ್‌ ಆಗುತ್ತಿಲ್ಲ.ಆ್ಯಪ್‌ನಲ್ಲಿ ಎಂಟ್ರಿ ಮಾಡಿದರೂ ಮಾಹಿತಿ ಡಿಲೀಟ್‌ ಆಗುತ್ತಿವೆ! ಇದು ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸಮೀಕ್ಷೆ ಮಾಡುತ್ತಿರುವ ಸಿಬ್ಬಂದಿಯ ಅಳಲು. ದಾವಣಗೆರೆ, ಹಾಸನ, ವಿಜಯಪುರ, ದೊಡ್ಡಬಳ್ಳಾಪುರ ಸೇರಿದಂತೆ ರಾಜ್ಯದ ಹಲವೆಡೆ ಶಿಕ್ಷಕರು ಇಂಥದ್ದೇ ಸಮಸ್ಯೆಯಿಂದ ಪರದಾಡಿದ್ದಾರೆ. ಪ್ರತಿಭಟನೆ ಕೂಡ ನಡೆಸಿದ್ದಾರೆ. ಶಿವಮೊಗ್ಗದಲ್ಲಿ ಸಮೀಕ್ಷೆ ಸರಿಯಾಗಿ ಆಗ್ತಿಲ್ಲ ಎಂದು ಸರ್ಕಾರದ ವಿರುದ್ಧ ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ. ಹೈಕೋರ್ಟ್‌ನಲ್ಲಿ ಜಾತಿಗಣತಿ ಪ್ರಶ್ನಿಸಿದ ಅರ್ಜಿಗಳ ವಿಚಾರಣೆ ಇವತ್ತು ಕೂಡ ನಡೆಯಲಿದೆ. ಹಿಂದುಳಿದ ವರ್ಗಗಳ ಆಯೋಗದ ವಾದ ಅಂತ್ಯವಾಗಿದೆ. ಇಂದು ಕೂಡ ವಾದ-ಪ್ರತಿವಾದ ಆಲಿಸಲಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ