ಪ್ರತಿಭಟನೆ, ಹಿಂಸಾಚಾರದ ಹಿಂದೆ ವಿದೇಶಿ ಶಕ್ತಿಗಳ ಪಿತೂರಿ; ಲಡಾಖ್ ಲೆಫ್ಟಿನೆಂಟ್ ಗವರ್ನರ್ ಬೇಸರ
ಲಡಾಖ್ ಪೊಲೀಸರು ಹಿಂಸಾಚಾರದ ವಿರುದ್ಧ ದೊಡ್ಡ ಕ್ರಮ ಕೈಗೊಂಡಿದ್ದಾರೆ. ಈಗಾಗಲೇ 50 ಜನರನ್ನು ಬಂಧಿಸಿದ್ದಾರೆ. ಆದರೆ ಆರೋಪ ಎದುರಿಸುತ್ತಿರುವ ಕಾಂಗ್ರೆಸ್ ಕೌನ್ಸಿಲರ್ ತ್ಸೆಪಾಗ್ ಬಂಧಿತರಲ್ಲಿ ಒಬ್ಬರಾಗಿದ್ದಾರೆಯೇ ಎಂಬುದು ಸ್ಪಷ್ಟವಾಗಿಲ್ಲ. ಲಡಾಖ್ ಶಾಂತಿಯುತ, ಧಾರ್ಮಿಕ ಮತ್ತು ಧರ್ಮನಿಷ್ಠ ವಾತಾವರಣ. ಕೆಲವು ಜನರು ಇಲ್ಲಿಗೆ ಬಂದು ಪ್ರಚೋದನೆ ಮಾಡುತ್ತಾರೆ. ಅಂತಹ ಯಾವ ವ್ಯಕ್ತಿ ಎಷ್ಟೇ ದೊಡ್ಡವನಾಗಿದ್ದರೂ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಎಚ್ಚರಿಕೆ ನೀಡಿದ್ದಾರೆ.
ಲಡಾಖ್, ಸೆಪ್ಟೆಂಬರ್ 25: ನಿನ್ನೆ ಲಡಾಖ್ನಲ್ಲಿ (Ladakh Violence) ನಡೆದ ಹಿಂಸಾಚಾರದಲ್ಲಿ 4 ಜನ ಪ್ರಾಣ ಕಳೆದುಕೊಂಡಿದ್ದಾರೆ. ಇದು ಕೂಡ “ಪಿತೂರಿ”ಯ ಪರಿಣಾಮವಾಗಿದೆ ಎಂದು ಲಡಾಖ್ ಲೆಫ್ಟಿನೆಂಟ್ ಗವರ್ನರ್ ಕವಿಂದರ್ ಗುಪ್ತಾ ಅಭಿಪ್ರಾಯಪಟ್ಟಿದ್ದಾರೆ. ಈ ಘಟನೆ ಮತ್ತು ಸಾವುಗಳ ಬಗ್ಗೆ ಅವರು ದುಃಖ ವ್ಯಕ್ತಪಡಿಸಿದ್ದಾರೆ. “ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಭಟನೆ ನಡೆಸುವುದು ಕೂಡ ಎಲ್ಲರ ಹಕ್ಕು. ಆದರೆ ಅದನ್ನು ಶಾಂತಿಯುತ ರೀತಿಯಲ್ಲಿ ಮಾಡಬೇಕು. ಕಳೆದ ಎರಡು ದಿನಗಳಿಂದ, ಲಡಾಖ್ ಜನರನ್ನು ಪ್ರಚೋದಿಸಲು ಪ್ರಯತ್ನಗಳು ನಡೆದಿವೆ. ಇಲ್ಲಿ ನಡೆಯುತ್ತಿರುವ ಪ್ರತಿಭಟನೆಯನ್ನು ಬಾಂಗ್ಲಾದೇಶ ಮತ್ತು ನೇಪಾಳದಲ್ಲಿ ನಡೆಯುತ್ತಿರುವ ಪ್ರತಿಭಟನೆಗಳಿಗೆ ಹೋಲಿಸಲಾಗಿದೆ. ಇದು ಪಿತೂರಿಯ ಭಾಗದಂತಿದೆ” ಎಂದಿದ್ದಾರೆ.
ಫೆಡರಲ್ ಸರ್ಕಾರವು ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿ ರಾಜ್ಯವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸಿದ ನಂತರ, 2019 ರಲ್ಲಿ ಲಡಾಖ್ ಕೇಂದ್ರಾಡಳಿತ ಪ್ರದೇಶದ ರಚನೆಯನ್ನು ಲಡಾಖ್ ಜನರು ಸ್ವಾಗತಿಸಿದ್ದರು ಎಂದು ಲೆಫ್ಟಿನೆಂಟ್ ಗವರ್ನರ್ ಹೇಳಿದ್ದಾರೆ.
ಲಡಾಖ್ ಶಾಂತಿಯುತ, ಧಾರ್ಮಿಕ ಮತ್ತು ಧರ್ಮನಿಷ್ಠ ವಾತಾವರಣ. ಕೆಲವು ಜನರು ಇಲ್ಲಿಗೆ ಬಂದು ಪ್ರಚೋದನೆ ಮಾಡುತ್ತಾರೆ. ಅಂತಹ ಯಾವ ವ್ಯಕ್ತಿ ಎಷ್ಟೇ ದೊಡ್ಡವನಾಗಿದ್ದರೂ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಎಚ್ಚರಿಕೆ ನೀಡಿದ್ದಾರೆ. ಲಡಾಖಿ ಕಾರ್ಯಕರ್ತ ಸೋನಮ್ ವಾಂಗ್‌ಚುಕ್ ಹಿಂಸಾಚಾರಕ್ಕೆ ಕಾರಣ ಎಂದು ಆರೋಪಿಸಿದ ನಂತರ ಈ ಹೇಳಿಕೆಗಳು ಬಂದಿವೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್ಪೋರ್ಟ್ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!

