ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಕೊಪ್ಪಳ ಗವಿಮಠ ರಾಜ್ಯಕ್ಕೆ ಹೆಸರುವಾಸಿಯಾದ ಮಠವಾಗಿದೆ. ಗವಿಮಠದ ಜಾತ್ರಾ ಮಹೋತ್ಸವ ದಕ್ಷಿಣ ಭಾರತದ ಕುಂಭಮೇಳ ಎಂದೇ ಖ್ಯಾತಿ ಪಡೆದಿದೆ. ಗವಿಮಠದ ಜಾತ್ರಾ ಮಹೋತ್ಸವ ಸಂಪನ್ನಗೊಂಡಿದೆ. ಶುಕ್ರವಾರ ನಡೆದ ಜಾತ್ರಾ ಮಹೋತ್ಸವದ ಸಮಾರೋಪ ಸಮಾರಂಭದಲ್ಲಿ ಅಭಿನವ ಗವಿಸಿದ್ದೆಶ್ವರ ಸ್ವಾಮೀಜಿ ಭಾವುಕರಾಗಿ, ಭಕ್ತರಲ್ಲಿ ಮೂರು ವಚನ ಕೇಳಿದರು.
ಕೊಪ್ಪಳ, ಜನವರಿ 18: ಅದ್ದೂರಿಯಾಗಿ, ಭಕ್ತಿಭಾವದಿಂದ ನಡೆದ ಗವಿಮಠದ ಜಾತ್ರಾ ಮಹೋತ್ಸವ (Koppal Gavisiddeshwar Math Jatre) ಸಂಪನ್ನಗೊಂಡಿದೆ. ಶುಕ್ರವಾರ (ಜ.17) ಸಂಜೆ ನಡೆದ ಜಾತ್ರೆಯ ಸಮಾರೋಪ ಸಮಾರಂಭದಲ್ಲಿ ಗವಿಮಠದ ಪೀಠಾಧಿಪತಿ ಅಭಿನವ ಗವಿಸಿದ್ದೆಶ್ವರ ಸ್ವಾಮೀಜಿ (Abhinav Gavisiddeshwar Swamiji) ಭಕ್ತರ ಎದುರು ಭಾವುಕರಾದರು.
ನಮ್ಮ ಮಠವನ್ನು ಬೇರೆ ಮಠಕ್ಕೆ ಹೋಲಿಕೆ ಮಾಡಬೇಡಿ, ನಮ್ಮನ್ನು ಗವಿಮಠದ ಆವರಣ ಬಿಟ್ಟು ಹೊರಕ್ಕೆ ತಗೆದುಕೊಂಡು ಹೋಗಬೇಡಿ. ಯಾವುದೇ ಪ್ರಶಸ್ತಿಗಳು ನಮಗೆ ಬೇಡ. ಈ ಮೂರನ್ನು ಮಾಡಬೇಡಿ ಎಂದು ಭಾವುಕರಾಗಿ ಭಕ್ತರಲ್ಲಿ ಮನವಿ ಮಾಡಬೇಡಿ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published on: Jan 18, 2025 08:28 AM