ಕುಷ್ಟಗಿ: ಎಲ್ಲರ ಮೆಚ್ಚುಗೆಗೆ ಪಾತ್ರವಾಯ್ತು ವೃದ್ದೆಯೊಬ್ಬರ ಸಾಮಾಜಿಕ ಕಳಕಳಿ

| Updated By: ಸಾಧು ಶ್ರೀನಾಥ್​

Updated on: Nov 24, 2023 | 9:47 AM

ಕೊಪ್ಪಳ ಜಿಲ್ಲೆಯ ಕುಷ್ಟಗಿ ಪಟ್ಟಣದಲ್ಲಿ ವೃದ್ದೆಯೊಬ್ಬರ ಸಾಮಾಜಿಕ ಕಳಕಳಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. 70 ವರ್ಷದ ವೃದ್ದೆಯೊಬ್ಬರು ಅನೇಕ ವರ್ಷಗಳಿಂದ ಪಟ್ಟಣದ ಅನೇಕ ಬೀದಿಗಳನ್ನು ತಾವೇ ಸ್ವಚ್ಚಗೊಳಿಸುತ್ತಿದ್ದಾರೆ.

ಕೊಪ್ಪಳ ಜಿಲ್ಲೆಯ ಕುಷ್ಟಗಿ (Koppal, Kushtagi) ಪಟ್ಟಣದಲ್ಲಿ ವೃದ್ದೆಯೊಬ್ಬರ ಸಾಮಾಜಿಕ ಕಳಕಳಿ (social work) ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಹೌದು ಕುಷ್ಟಗಿ ಪಟ್ಟಣದಲ್ಲಿ 70 ವರ್ಷದ ವೃದ್ದೆಯೊಬ್ಬರು (old lady) ಅನೇಕ ವರ್ಷಗಳಿಂದ ಪಟ್ಟಣದ ಪ್ರಮುಖ ಬೀದಿಗಳನ್ನು ತಾವೇ ಸ್ವಚ್ಚಗೊಳಿಸುತ್ತಿದ್ದಾರೆ. ರಸ್ತೆಯಲ್ಲಿರುವ ಮಣ್ಣನ್ನು ತಗೆದು ಹಾಕುವುದು, ರಸ್ತೆಯಲ್ಲಿರುವ ಕಸಕಡ್ಡಿಗಳನ್ನು ತಗೆಯುವ ಕೆಲಸ ಮಾಡುತ್ತಿದ್ದಾರೆ. ಇನ್ನು ವೃದ್ದೆ ಅನಾಥಳಾಗಿದ್ದು, ಸ್ವತಃ ಆಕೆಗೆ ತನ್ನ ಬಗ್ಗೆ ಯಾವುದೇ ಮಾಹಿತಿಯಿಲ್ಲ. ಹೀಗಾಗಿ ಪಟ್ಟಣದಲ್ಲಿ ಅಲ್ಲಲ್ಲಿ ವಾಸ ಮಾಡೋ ವೃದ್ದೆ, ಅವರಿವರು ಕೊಟ್ಟಿರುವ ಆಹಾರವನ್ನು ತಿಂದು ಜೀವನ ನಡೆಸುತ್ತಿದ್ದಾಳೆ. ವೃದ್ದೆಯ ವಿಡಿಯೋ ಎಲ್ಲೆಡೆ ವೈರಲ್ ( video viral) ಆಗಿದ್ದು, ಸಾರ್ವಜನಿಕರು ವೃದ್ದೆಯ ಸಾಮಾಜಿಕ ಕಳಕಳಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Nov 23, 2023 06:06 PM