ಚಿಕ್ಕಮಗಳೂರು: ಮರದಲ್ಲಿ ಅವಿತಿದ್ದ 12 ಅಡಿ ಉದ್ದದ ಕಾಳಿಂಗ ಸರ್ಪ ಸೆರೆಗೆ ಹರಸಾಹಸ

ಚಿಕ್ಕಮಗಳೂರು: ಮರದಲ್ಲಿ ಅವಿತಿದ್ದ 12 ಅಡಿ ಉದ್ದದ ಕಾಳಿಂಗ ಸರ್ಪ ಸೆರೆಗೆ ಹರಸಾಹಸ

ಅಶ್ವಿತ್ ಮಾವಿನಗುಣಿ, ಚಿಕ್ಕಮಗಳೂರು
| Updated By: ಗಂಗಾಧರ​ ಬ. ಸಾಬೋಜಿ

Updated on:Nov 23, 2023 | 4:52 PM

King cobra: ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಕಾರ್ಗದ್ದೆ ಗ್ರಾಮದ ಕಾಫಿತೋಟದ ಮರದಲ್ಲಿ ಅವಿತಿದ್ದ 12 ಅಡಿ ಉದ್ದದ ಕಾಳಿಂಗ ಸರ್ಪವನ್ನು ಕೋಲಿನ ಸಹಾಯ ಪಡೆದು ಉರುಗ ತಜ್ಞ ಸ್ನೇಕ್ ರಿಜ್ವಾನ್​ ಸೆರೆಹಿಡಿದಿದ್ದಾರೆ. ಮರದ ಮೇಲಿದ್ದ ಕಾಳಿಂಗ ಸರ್ಪ ಕಂಡು ಕಾಫಿ ತೋಟದ ಕಾರ್ಮಿಕರು ಆತಂಕಗೊಂಡಿದ್ದರು.

ಚಿಕ್ಕಮಗಳೂರು, ನವೆಂಬರ್​​​ 23: ಜಿಲ್ಲೆಯ ಕಳಸ ತಾಲೂಕಿನ ಕಾರ್ಗದ್ದೆ ಗ್ರಾಮದಲ್ಲಿ ಮರದ ಮೇಲೆ ಅವಿತಿದ್ದ 12 ಅಡಿ ಉದ್ದದ ಕಾಳಿಂಗ ಸರ್ಪ (King cobra) ವನ್ನು ಸೆರೆ ಹಿಡಿಯಲಾಗಿದೆ. ಕಾಫಿತೋಟದ ಮರದಲ್ಲಿ ಅವಿತಿದ್ದ ಕಾಳಿಂಗ ಸರ್ಪವನ್ನು ಕೋಲಿನ ಸಹಾಯ ಪಡೆದು ಉರುಗ ತಜ್ಞ ರಿಜ್ವಾನ್ ಸೆರೆಹಿಡಿದಿದ್ದಾರೆ. ಮರದ ಮೇಲಿದ್ದ ಕಾಳಿಂಗ ಕಂಡು ಕಾಫಿ ತೋಟದ ಕಾರ್ಮಿಕರು ಆತಂಕಗೊಂಡಿದ್ದರು. ಉರುಗ ತಜ್ಞ ರಿಜ್ವಾನ್ ಕಾಳಿಂಗ ಸರ್ಪವನ್ನು ಸೆರೆ ಹಿಡಿಯುವುದನ್ನು ಸ್ಥಳೀಯರು ವಿಡಿಯೋ ಮಾಡಿದ್ದಾರೆ. ವಿಡಿಯೋ ನೋಡಿ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.  

Published on: Nov 23, 2023 04:51 PM