ಕಾಂಗ್ರೆಸ್​​ನಿಂದಾಗಿ ಬೆಂಗಳೂರಲ್ಲಿ ರಿಯಲ್ ಎಸ್ಟೇಟ್ ಕುಸಿದಿದೆ, ತೆಲಂಗಾಣದಲ್ಲೂ ಹಾಗೆ ಆಗಲು ಬಿಡಬೇಡಿ - ಸಚಿವ ಕೆಟಿಆರ್ ತಾಕೀತು

ಕಾಂಗ್ರೆಸ್​​ನಿಂದಾಗಿ ಬೆಂಗಳೂರಲ್ಲಿ ರಿಯಲ್ ಎಸ್ಟೇಟ್ ಕುಸಿದಿದೆ, ತೆಲಂಗಾಣದಲ್ಲೂ ಹಾಗೆ ಆಗಲು ಬಿಡಬೇಡಿ – ಸಚಿವ ಕೆಟಿಆರ್ ತಾಕೀತು

ಸಾಧು ಶ್ರೀನಾಥ್​
|

Updated on:Nov 23, 2023 | 2:14 PM

ತೆಲಂಗಾಣದಲ್ಲಿ ಅಸೆಂಬ್ಲಿ ಚುನಾವಣೆ ರಂಗೇರುತ್ತಿದೆ. ರಾಜಕೀಯ ಪಕ್ಷಗಳ ಜಿದ್ದಾಜಿದ್ದಿ ಜೋರಾಗಿದೆ. ಈ ಮಧ್ಯೆ ರಾಜ್ಯದ ಸದ್ಯದ ಪರಿಸ್ಥಿತಿಯನ್ನು ಮುಂದಿಟ್ಟುಕೊಂಡು ಅಭ್ಯರ್ಥಿಗಳು ತಮ್ಮ ವಾದ- ಪ್ರತಿವಾದಗಳನ್ನು ಮಂಡಿಸುತ್ತಿದ್ದಾರೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ತೆಲಂಗಾಣದಲ್ಲಿ ರಿಯಲ್ ಎಸ್ಟೇಟ್ ಉದ್ಯಮ ಕುಸಿಯಲಿದೆ ಎಂದು KT Rama Rao ವ್ಯಾಖ್ಯಾನಿಸಿದ್ದಾರೆ.

ತೆಲಂಗಾಣದಲ್ಲಿ ಅಸೆಂಬ್ಲಿ ಚುನಾವಣೆ (Telangana assembly Elections) ರಂಗೇರುತ್ತಿದೆ. ರಾಜಕೀಯ ಪಕ್ಷಗಳ ಜಿದ್ದಾಜಿದ್ದಿ ಜೋರಾಗಿದೆ. ಈ ಮಧ್ಯೆ ರಾಜ್ಯದ ಸದ್ಯದ ಪರಿಸ್ಥಿತಿಯನ್ನು ಮುಂದಿಟ್ಟುಕೊಂಡು ಅಭ್ಯರ್ಥಿಗಳು ತಮ್ಮ ವಾದ- ಪ್ರತಿವಾದಗಳನ್ನು ಮಂಡಿಸುತ್ತಿದ್ದಾರೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ತೆಲಂಗಾಣದಲ್ಲಿ ರಿಯಲ್ ಎಸ್ಟೇಟ್ ಉದ್ಯಮ ಕುಸಿಯಲಿದೆ. ಕಾಂಗ್ರೆಸ್ ಆಡಳಿತದಲ್ಲಿ ಆರು ತಿಂಗಳಿಗೊಮ್ಮೆ ಸಿಎಂ ಬದಲಾಯಿಸುತ್ತಲೇ ಇರುತ್ತಾರೆ. ಈ ಪರಿಸ್ಥಿತಿಯಲ್ಲಿ, ಸ್ಥಿರ ಸರ್ಕಾರ ಇರುವುದಿಲ್ಲ ಮತ್ತು ಸರ್ಕಾರದಿಂದ ಯಾವುದೇ ತ್ವರಿತ ನೀತಿ ನಿರ್ಧಾರಗಳು ಇರುವುದಿಲ್ಲ. ಕರ್ನಾಟಕದಲ್ಲಿ ಕಾಂಗ್ರೆಸ್ (Karnataka Congress) ಅಧಿಕಾರಕ್ಕೆ ಬಂದ ನಂತರ ಬೆಂಗಳೂರಿನಲ್ಲಿ ರಿಯಲ್ ಎಸ್ಟೇಟ್ ಉದ್ಯಮ ಕುಸಿತ ಕಂಡಿದೆ. ಏತನ್ಮಧ್ಯೆ, ಹೈದರಾಬಾದ್‌ನಲ್ಲಿ ರಿಯಲ್ ಎಸ್ಟೇಟ್ ಗ್ರಾಫ್ ಬೆಳೆಯುತ್ತಿದೆ ಎಂದು ಕೆಟಿಆರ್ ಎಂದೇ ಖ್ಯಾತರಾಗಿರುವ, ತೆಲಂಗಾಣದ ಪ್ರಭಾವೀ ಸಚಿವ ಕಲ್ವಕುಂಟ್ಲ ತಾರಕ ರಾಮರಾವ್ ಅವರು (KT Rama Rao) ವ್ಯಾಖ್ಯಾನಿಸಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Nov 23, 2023 02:09 PM