ಅಧಿಕ ಮಾಸದ ಹುಣ್ಣಿಮೆ ಹಿನ್ನೆಲೆ ಕೊಪ್ಪಳದ ಹುಲಿಗೆಮ್ಮ ದೇವಸ್ಥಾನಕ್ಕೆ ಹರಿದು ಬಂದ ಭಕ್ತಸಾಗರ

ಅಧಿಕ ಮಾಸದ ಹುಣ್ಣಿಮೆ ಹಿನ್ನೆಲೆ ಕೊಪ್ಪಳದ ಹುಲಿಗೆಮ್ಮ ದೇವಸ್ಥಾನಕ್ಕೆ ಹರಿದು ಬಂದ ಭಕ್ತಸಾಗರ

ದತ್ತಾತ್ರೇಯ ಪಾಟೀಲ, ಕಲಬುರಗಿ
| Updated By: ಆಯೇಷಾ ಬಾನು

Updated on: Aug 01, 2023 | 9:45 AM

ಅಧಿಕ ಮಾಸದ ಹುಣ್ಣಿಮೆ ಹಾಗೂ ದೇವಿ ವಾರ ಹಿನ್ನೆಲೆ ಕೊಪ್ಪಳದ ಹುಲಿಗೆಮ್ಮ ದೇವಸ್ಥಾನಕ್ಕೆ ಭಕ್ತರು ಆಗಮಿಸಿ ತಾಯಿಯ ದರ್ಶನ ಪಡೆದಿದ್ದಾರೆ. ಸಾಲುಗಟ್ಟಿ ನಿಂತು ದೇವಿಯ ದರ್ಶನ ಮಾಡಿದ್ದಾರೆ.

ಕೊಪ್ಪಳ, ಆ.01: ಉತ್ತರ ಕರ್ನಾಟಕದ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಕೊಪ್ಪಳ ತಾಲೂಕಿನ ಹುಲಗಿಯಲ್ಲಿರೋ ಹುಲಿಗೆಮ್ಮ ದೇವಿ ದೇವಸ್ಥಾನಕ್ಕೆ ಭಕ್ತ ಸಾಗರವೇ ಹರಿದು ಬರುತ್ತಿದೆ. ಇಲ್ಲಿ ಭಕ್ತರ ಆಸೆಗಳನ್ನು ಈಡೇರಿಸಲು ರೇಣುಕಾಂಬ ದೇವಿಯೇ ಹುಲಿಗೆಮ್ಮಳಾಗಿ ನೆಲೆಸಿದ್ದಾಳೆ. ಇಂದು ಮಂಗಳವಾರ ಅಧಿಕ ಮಾಸದ ಹುಣ್ಣಿಮೆ ಹಾಗೂ ದೇವಿ ವಾರ ಹಿನ್ನೆಲೆ ಹುಲಿಗೆಮ್ಮ ದೇವಸ್ಥಾನಕ್ಕೆ ಭಕ್ತರು ಆಗಮಿಸಿ ತಾಯಿಯ ದರ್ಶನ ಪಡೆದಿದ್ದಾರೆ. ಸಾಲುಗಟ್ಟಿ ನಿಂತು ದೇವಿಯ ದರ್ಶನ ಮಾಡಿದ್ದಾರೆ. ಕರ್ನಾಟಕ, ಆಂಧ್ರ, ತೆಲಂಗಾಣ ಹಾಗೂ ಮಹಾರಾಷ್ಟ್ರದಿಂದ ಭಕ್ತರು ಆಗಮಿಸಿದ್ದಾರೆ. ಪ್ರತಿ ಹುಣ್ಣಿಮೆ ದಿನ ಹಾಗೂ ಮಂಗಳವಾರ, ಶುಕ್ರವಾರ ಹುಲಗಿ ದೇವಸ್ಥಾನಕ್ಕೆ ಲಕ್ಷಾಂತರ ಜನ ಭಕ್ತರು ಆಗಮಿಸುತ್ತಾರೆ.