ಕೊಪ್ಪಳ: ಗೃಹ ಲಕ್ಷ್ಮಿ ಹಣ ಕೂಡಿಟ್ಟು ಬೋರವೆಲ್ ಕೊರೆಸಿದ ಅಜ್ಜಿ

Edited By: ವಿವೇಕ ಬಿರಾದಾರ

Updated on: May 07, 2025 | 4:18 PM

ಕೊಪ್ಪಳ ತಾಲೂಕಿನ ಹಟ್ಟಿ ಗ್ರಾಮದ ವೃದ್ಧೆ ಹನುಮವ್ವ ಅವರು ರಾಜ್ಯ ಸರ್ಕಾರದ ಗೃಹಲಕ್ಷ್ಮೀ ಯೋಜನೆಯ ₹2000 ಹಣವನ್ನು ಬಳಸಿ ತಮ್ಮ ಜಮೀನಿನಲ್ಲಿ ಬೋರ್‌ವೆಲ್ ಕೊರೆಸಿದ್ದಾರೆ. ಶಾಸಕ ರಾಘವೇಂದ್ರ ಹಿಟ್ನಾಳ ಅವರು ಈ ಬೋರ್‌ವೆಲ್‌ಗೆ ಚಾಲನೆ ನೀಡಿದ್ದು, ಮೂರು ಇಂಚು ನೀರು ಚಿಮ್ಮಿದೆ. ವೃದ್ಧೆಯ ಸಂತೋಷಕ್ಕೆ ಕಾರಣವಾಗಿದೆ ಈ ಬೋರ್‌ವೆಲ್.

ಕೊಪ್ಪಳ, ಮೇ 07: ರಾಜ್ಯ ಸರ್ಕಾರ ಗೃಹ ಲಕ್ಷ್ಮೀ ಯೋಜನೆ ಹೆಸರಿನಲ್ಲಿ ಮನೆಯ ಒಡತಿಯರಿಗೆ ಎರಡು ಸಾವಿರ ರೂಪಾಯಿ ನೀಡುತ್ತಿದೆ. ಕೊಪ್ಪಳ ತಾಲೂಕಿನ ಹಟ್ಟಿ ಗ್ರಾಮದ ವೃದ್ಧೆ ಹನುಮವ್ವ ಎಂಬುವರು ಗೃಹ ಲಕ್ಷ್ಮಿ ಹಣ ಕೂಡಿಟ್ಟು, ತಮ್ಮ ಜಮೀನಿನಲ್ಲಿ ಈ ಹಣದಲ್ಲಿ ಬೋರವೆಲ್ ಕೊರೆಸಿದ್ದಾರೆ. ಬೊರವೆಲ್​ಗೆ ಶಾಸಕ ರಾಘವೇಂದ್ರ ಹಿಟ್ನಾಳ ಚಾಲನೆ ನೀಡಿದ್ದಾರೆ. ಬೋರವೆಲ್​ನಲ್ಲಿ ಮೂರು ಇಂಚಿನಷ್ಟು ನೀರು‌ ಚಿಮ್ಮಿದೆ. ವೃದ್ಧೆ ಹನುಮವ್ವ ತಳವಾರ‌ ಸಂತಸಗೊಂಡಿದ್ದಾರೆ.

Loading...
Unable to load recommendations.
Follow Us
ಶಿವಕುಮಾರ್ ಪತ್ತಾರ್

ಶಿವಕುಮಾರ್ ಎಸ್ ಪತ್ತಾರ.. ಹುಟ್ಟಿದ್ದು ಗದಗ ಜಿಲ್ಲೆಯ ನರಗುಂದ ತಾಲೂಕಿನ ಕೊಣ್ಣೂರ. ಪತ್ರಿಕೋದ್ಯಮ ದಲ್ಲಿ ಕರ್ನಾಟಕ ವಿವಿಯಿಂದ ಸ್ನಾತಕೋತ್ತರ ಪದವಿ ಪಡೆದಿದ್ದೇನೆ.‌ಕಳೆದ 10 ವರ್ಷಗಳಿಂದ ಟಿವಿ9 ಕನ್ನಡ ಸುದ್ದಿವಾಹಿನಿಯಲ್ಲಿ ಹಿರಿಯ ವರದಿಗಾರನಾಗಿ ಕೆಲಸ ನಿರ್ವಹಿಸುತ್ತಿದ್ದೇನೆ.ಕೊಪ್ಪಳದಿಂದ ಆರಂಭವಾಗಿರೋ ವೃತ್ತಿ ಬದುಕು ‌ಸದ್ಯ ಹುಬ್ಬಳ್ಳಿಗೆ ಬಂದು ನಿಂತಿದೆ.ಈ ಮದ್ಯೆ ರಾಯಚೂರು,ಬಳ್ಳಾರಿ,ವರದಿಗಾರನಾಗಿ ಕೆಲಸ ಮಾಡಿದ್ದೇನೆ.ರಹಸ್ಯ ಕಾರ್ಯಾಚರಣೆ ನನಗಿಷ್ಟ.ಟಿವಿ9 ನಲ್ಲಿ ಕೆಲ ರಹಸ್ಯ ಕಾರ್ಯಾಚರಣೆಗಳ ವರದಿಯನ್ನು ಮಾಡಿದ್ದೇನೆ.ಕ್ರೈಮ್, ಜನರ ಬದುಕು ಬವಣೆಯ ಸುದ್ದಿಗಳನ್ನೇ ಮಾಡಿದ್ದೇ ಹೆಚ್ಚು.

Read More