ಕೊಪ್ಪಳ: ಕುರುಬರ ಸಮಾವೇಶದಲ್ಲಿ ಮುಂದಿನ ಸಿಎಂ ಸಿದ್ದರಾಮಯ್ಯ ಎಂದಿದ್ದಕ್ಕೆ ಕೆಲವರಿಂದ ವಿರೋಧ, ಗೆಟ್ ಔಟ್ ಎಂದ ಭೈರತಿ
ಯಲಬುರ್ಗಾದಲ್ಲಿ ನಡೆಯುತ್ತಿರುವ ಕುರುಬ ಸಮುದಾಯದ ಸಮಾವೇಶದಲ್ಲಿ ಮುಂದಿನ ಸಿಎಂ ಸಿದ್ದರಾಮಯ್ಯ ಎಂಬ ಕೂಗು ಕೇಳಿಬಂದ ಬೆನ್ನಲ್ಲೇ ಕೆಲವರು ಅದನ್ನ ವಿರೋಧಿಸಿದ್ದಾರೆ. ಅಂತಹವರು ಮೊದಲು ಸಮಾವೇಶದಿಂದ ಹೊರ ಹೋಗಿ ಎಂದು ಶಾಸಕ ಭೈರತಿ ಸುರೇಶ್ ಹೇಳಿದರು.
ಕೊಪ್ಪಳ: ಜಿಲ್ಲೆಯ ಯಲಬುರ್ಗಾದಲ್ಲಿ ನಡೆಯುತ್ತಿರುವ ಕುರುಬ ಸಮುದಾಯದ ಸಮಾವೇಶದಲ್ಲಿ ಮುಂದಿನ ಸಿಎಂ ಸಿದ್ದರಾಮಯ್ಯ ಎಂಬ ಕೂಗು ಕೇಳಿಬಂದಿದೆ. ಹೌದು ಹೆಬ್ಬಾಳ ಕ್ಷೇತ್ರದ ಶಾಸಕ ಭೈರತಿ ಸುರೇಶ್ ಅವರು ಸಿದ್ದರಾಮಯ್ಯ ಅವರೇ ಮತ್ತೊಮ್ಮೆ ಮುಖ್ಯಮಂತ್ರಿ ಆಗಬೇಕು ಯಾರೇ ವಿರೋಧ ವ್ಯಕ್ತಪಡಿಸಿದ್ರೂ ನಾನು ತಲೆಕೆಡಿಸಿಕೊಳ್ಳಲ್ಲ ಎಂದರು. ಇಲ್ಲಿ 4-5 ಜನರು ನೀವು ಗಲಾಟೆ ಮಾಡಿದ್ರೆ ನಾನೇನು ಕೇಳೋನಲ್ಲ. ನಾನು ಸಿದ್ದರಾಮಯ್ಯರನ್ನು ಹೊಗಳುತ್ತೇನೆ. ಅದನ್ನು ವಿರೋಧಿಸಿದವರನ್ನು ಸಮಾವೇಶದಿಂದ ಮೊದಲು ಹೊರ ಹೋಗಿ ಗೆಟ್ ಔಟ್ ಎಂದು ಭೈರತಿ ಸುರೇಶ್ ಹೇಳಿದ್ದಾರೆ.
ಇನ್ನಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Loading...
Unable to load recommendations.
Follow Us
