Assembly Polls: ಸಿದ್ದರಾಮಯ್ಯ ಹಾಗೂ ಯತೀಂದ್ರರ ಗುಣಗಾನ ಮಾಡಿದ ಡಿಕೆ ಶಿವಕುಮಾರ್

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Feb 21, 2023 | 1:05 PM

ಯತೀಂದ್ರ ಬಗ್ಗೆ ಮಾತಾಡುತ್ತಾ ಅತ್ಯಂತ ಸರಳ ಸ್ವಭಾವದ ಶಾಸಕ ಸಿಕ್ಕಿರುವುದು ವರುಣಾ ಕ್ಷೇತ್ರದ ಸೌಭಾಗ್ಯ, ಅವರನ್ನು ಈ ಬಾರಿ 50,000 ಕ್ಕಿಂತ ಹೆಚ್ಚಿನ ಮತಗಳ ಅಂತರದಿಂದ ಗೆಲ್ಲಿಸಬೇಕು ಎಂದು ಹೇಳಿದರು.

ಮೈಸೂರು: ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar) ಮತ್ತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ (Siddaramaiah) ನಡುವೆ ಕಂಡುಬರುತ್ತಿರುವ ಸಾಮರಸ್ಯ, ಹೊಂದಾಣಿಕೆ ಮತ್ತು ಸಮನ್ವಯತೆ ಬಗ್ಗೆ ನಾವು ಹೇಳುತ್ತಲೇ ಇದ್ದೇವೆ. ಜಿಲ್ಲೆಯ ವರುಣಾ ಕ್ಷೇತ್ರದ ಮೇಗಳಾಪುರದಲ್ಲಿಂದು ಮಾತಾಡಿದ ಶಿವಕುಮಾರ, ಸಿದ್ದರಾಮಯ್ಯನವರ ಪುತ್ರ ಮತ್ತು ವರುಣಾ ಶಾಸಕ ಯತೀಂದ್ರ ಸಿದ್ದರಾಮಯ್ಯ (Yathindra Siddaramaiah) ಅವರನ್ನು ಹಾಡಿ ಹೊಗಳಿದರು ಮತ್ತು ಮಾಜಿ ಮುಖ್ಯಮಂತ್ರಿಗಳನ್ನು ಕರ್ನಾಟಕ ಕಂಡ ಒಬ್ಬ ಶ್ರೇಷ್ಠ ನಾಯಕ ಎಂದು ಹೇಳಿದರು. ಯತೀಂದ್ರ ಬಗ್ಗೆ ಮಾತಾಡುತ್ತಾ ಅತ್ಯಂತ ಸರಳ ಸ್ವಭಾವದ ಶಾಸಕ ಸಿಕ್ಕಿರುವುದು ವರುಣಾ ಕ್ಷೇತ್ರದ ಸೌಭಾಗ್ಯ, ಅವರನ್ನು ಈ ಬಾರಿ 50,000 ಕ್ಕಿಂತ ಹೆಚ್ಚಿನ ಮತಗಳ ಅಂತರದಿಂದ ಗೆಲ್ಲಿಸಬೇಕು ಎಂದು ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Feb 21, 2023 01:05 PM