ಸುದ್ದಿಗೋಷ್ಟಿ ಜಾರಿಯಲ್ಲಿರುವಾಗಲೇ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ ತಮ್ಮ ಕಾರ್ಯಕರ್ತರನ್ನು ಗದರಿದರು!

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Jan 26, 2022 | 9:49 PM

ಗಲಾಟೆ ಕಮ್ಮಿಯಾಗುವ ಲಕ್ಷಣ ಕಾಣಿದಿದ್ದಾಗ ಶಿವಕುಮಾರ ಅವರ ಸಹನೆಯ ಕಟ್ಟೊಯೊಡೆಯುತ್ತದೆ. ಅಗಲೇ ಅವರು ಮಾಧ್ಯಮದವರೆದುರೇ, ಗಲಾಟೆ ಮಾಡುತ್ತಿರುವವರನ್ನು ಹೊರ ಹಾಕಿ ಅಂತ ಜೋರಾಗಿ ಕೂಗುತ್ತಾರೆ!

ಹೈಕೋರ್ಟ್ ನಿಂದ ಛೀಮಾರಿ ಹಾಕಿಸಿಕೊಂಡು ಮೇಕೆದಾಟು ಯೋಜನೆ ಶೀಃಘ್ರ ಅನುಷ್ಠಾನ ಆಗ್ರಹಿಸಿ ನಡೆಸುತ್ತಿದ್ದ ಪಾದಯಾತ್ರೆಯನ್ನು ಅರ್ಧಕ್ಕೆ ಮೊಟಕುಗೊಳಿಸಿದ ಬಳಿಕ ಕರ್ನಾಟಕ ಪ್ರದೇಶ ಕಾಂಗ್ರೆಸ್ ಕಮಿಟಿಯ ಅಧ್ಯಕ್ಷ ಡಿಕೆ ಶಿವಕುಮಾರ (DK Shivakumar) ಅವರು ಸ್ವಲ್ಪ ವಿಚಲಿತರಾದಂತೆ ಕಾಣುತ್ತಿದೆ. ಬೆಂಗಳೂರಲ್ಲಿ ಬುಧವಾರ ನಡೆದ ಒಂದು ಸುದ್ದಿಗೋಷ್ಟಿಯಲ್ಲಿ (press meet) ಅವರ ಅಸಹನೆ ವಿದಿತವಾಯಿತು. ಇಲ್ಲಿನ ಸೀಕ್ವೆನ್ಸ್ ಆಫ್ ಈವೆಂಟ್ಸ್ (sequence of events) ನೀವು ಗಮನಿಸಿ. ಅವರೇ ಹೇಳುತ್ತಿರುವ ಹಾಗೆ ಅವರು ಒಂದು ಪ್ರೆಸ್ ಮೀಟ್ ನಿಂದ ಅರ್ಧಕ್ಕೆ ಎದ್ದಿದ್ದಾರೆ. ಯಾರೋ ಒಂದಿಬ್ಬರು ಪತ್ರಕರ್ತರು ಅನಾವಶ್ಯಕ ಪ್ರಶ್ನೆಗಳನ್ನು ಕೇಳುತ್ತಿದ್ದರು, ಹಾಗಾಗಿ ಎದ್ದು ಬಂದೆ ಅಂತ ಅವರು ಹೇಳುತ್ತಾರೆ. ಪ್ರಾಯಶಃ ರಾಮಲಿಂಗಾ ರೆಡ್ಡಿ ಅವರಂಥ ಹಿರಿಯ ನಾಯಕರು ಹಾಗೆ ಮಾಡುವುದು ಸರಿಯಲ್ಲ ಅಂತ ತಮ್ಮ ಅಧ್ಯಕ್ಷರಿಗೆ ಹೇಳಿರಬೇಕು. ಹಾಗಾಗಿ, ಮಾಧ್ಯಮದವರ ಜೊತೆ ಮತ್ತೊಮ್ಮೆ ಮಾತಾಡಲು ಮುಂದಾಗುತ್ತಾರೆ.

ಅದೇ ಸಮರ್ಥನೆಯೊಂದಿಗೆ ಮಾಧ್ಯಮದವರ ಡಿಕೆಶಿ ಮುಂದೆ ಕೂರುತ್ತಾರೆ. ಅವರ ಪಕ್ಕ ರೆಡ್ಡಿ ಮತ್ತು ಸಲೀಂ ಅಹ್ಮದ್ ಇದ್ದಾರೆ. ಅವರು ಮಾತಿಗಾರಂಭಿಸಿದರೂ ಕಾರ್ಯಕರ್ತರು ಜೋರಾಗಿ ಮಾತಾಡುವುದು ಅವರಲ್ಲಿ ಕಿರಿಕಿರಿಯನ್ನಂಟು ಮಾಡುತ್ತದೆ. ಅವರ ಸುತ್ತ ನೆರೆದಿರುವ ಕಾರ್ಯಕರ್ತರ ಪೈಕಿ ಒಂದಿಬ್ಬರಿಗೆ ಗಲಾಟೆ ಮಾಡುತ್ತಿರುವವರನ್ನು ಸುಮ್ಮನಾಗಿಸಿ ಅಂತ ಹೇಳುತ್ತಾರೆ. ಹಾಗೆ ಹೇಳುವಾಗ ಅವರ ಮುಖದಲ್ಲಿ ಅಸಹನೆ ಎದ್ದು ಕಾಣುತ್ತದೆ.

ಗಲಾಟೆ ಕಮ್ಮಿಯಾಗುವ ಲಕ್ಷಣ ಕಾಣಿದಿದ್ದಾಗ ಅವರ ಸಹನೆಯ ಕಟ್ಟೊಯೊಡೆಯುತ್ತದೆ. ಅಗಲೇ ಅವರು ಮಾಧ್ಯಮದವರೆದುರೇ, ಗಲಾಟೆ ಮಾಡುತ್ತಿರುವವರನ್ನು ಹೊರ ಹಾಕಿ ಅಂತ ಜೋರಾಗಿ ಕೂಗುತ್ತಾರೆ!

ರಾಷ್ಟ್ರೀಯ ಪಕ್ಷವೊಂದರ ರಾಜ್ಯಾಧ್ಯಕ್ಷ ತಾನು ಎಂಬ ಅಂಶವನ್ನು ಡಿಕೆ ಶಿವಕುಮಾರ ಮರೆಯುತ್ತಾರೆ.

ಇದನ್ನೂ ಓದಿ:  Shikhar Dhawan: ಟೀ ಚೆಲ್ಲಿದ್ದಕ್ಕೆ ಶಿಖರ್ ಧವನ್​ಗೆ ಕಪಾಳಮೋಕ್ಷ! ಹೊಡೆದವರ್ಯಾರು ಗೊತ್ತಾ? ವಿಡಿಯೋ ನೋಡಿ

Published on: Jan 26, 2022 09:48 PM