ಬೆಂಗಳೂರಿನ ಪೈಲಟ್ ನಗರದ ಜನತೆಗೆ ಗಣರಾಜ್ಯೋತ್ಸವದ ಶುಭಾಶಯ ಹೇಳಿದ ರೀತಿ ರೋಮಾಂಚನ ಹುಟ್ಟಿಸುತ್ತದೆ!

ಬೆಂಗಳೂರಿನ ಪೈಲಟ್ ನಗರದ ಜನತೆಗೆ ಗಣರಾಜ್ಯೋತ್ಸವದ ಶುಭಾಶಯ ಹೇಳಿದ ರೀತಿ ರೋಮಾಂಚನ ಹುಟ್ಟಿಸುತ್ತದೆ!

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Jan 26, 2022 | 7:43 PM

ತರಬೇತಿಗಾಗಿ ಉಪಯೋಗಿಸುವ ಒಂದು ಚಿಕ್ಕ ಗಾತ್ರದ ವಿಮಾನವನ್ನು ಹಾರಿಸಿಕೊಂಡು ಬರುವ ಪೈಲಟ್ ಜಕ್ಕೂರು ಏರೋಡ್ರಮ್ ನಲ್ಲಿ ಕೆಳಮಟ್ಟದಲ್ಲಿ ಹಾರುತ್ತಾ ಬಂದು ಭೂಮಿ ಮೇಲಿಂದ ಏನನ್ನೋ ಎತ್ತಿಕೊಂಡಂತೆ ಕಾಣುತ್ತದೆ. ವಿಮಾನ ಪುನಃ ಮೇಲಕ್ಕೆ ಹಾರುವಾಗ ಅದರ ಹಿಂಭಾಗದಲ್ಲಿ ಒಂದು ಬ್ಯಾನರ್ ಬಿಚ್ಚಿಕೊಳ್ಳುತ್ತದೆ.

ಗಣರಾಜ್ಯೋತ್ಸವ ದಿನದಂದು ಭಾರತೀಯ ವಾಯುದಳ (India Air Force), ಸೇನೆ (Army), ನೌಕಾದಳ (Navy), ಗಡಿ ಸುರಕ್ಷಾ ದಳ (BSF) ಪಡೆಗಳ ಯೋಧರು ಮೈನವರೇಳಿಸುವ ಬಗೆಬಗೆಯ ಸಾಹಸಗಳನ್ನು ಆಕಾಶದಲ್ಲಿ, ನೆಲದ ಮೇಲೆ, ವಾಹನಗಳ ಮೇಲೆ ಪ್ರದರ್ಶಿಸುತ್ತಾರೆ. ಅವರು ಮಾಡುವ ಸಾಹಸಗಳು ರೋಮಾಂಚನದ ಜೊತೆಗೆ ಭೀತಿಯನ್ನೂ ಮೂಡಿಸುತ್ತವೆ. ಯಾಕೆಂದರೆ, ಸಾಹಸ ಮಾಡುವವರು ಕೊಂಚವೇ ಯಾಮಾರಿದರೂ ಅಪಾಯ ತಪ್ಪಿದ್ದಲ್ಲ. ಬುಧವಾರ ಭಾರತೀಯರೆಲ್ಲ ಟಿವಿಯಲ್ಲಿ ಯೋಧರ ಸಾಹಸಗಳನ್ನು ನೋಡಿದ್ದಾರೆ. ನಾವು ನಿಮಗೆ ಬೆಂಗಳೂರಿನ ಜಕ್ಕೂರಿನ ಏರೋಡ್ರಮ್ ನಿಂದ ಶುರುವಾಗಿ ಮಾಣಿಕ್ ಶಾ ಪರೇಡ್ ಮತ್ತು ಅಲ್ಲಿಂದ ವಾಪಸ್ಸು ಜಕ್ಕೂರು ಏರೋಡ್ರಮ್ವರೆಗೆ ಒಬ್ಬ ಪೈಲಟ್ ನಡೆಸಿದ ಸಾಹಸದ ಒಂದು ದೃಶ್ಯ ತೋರಿಸುತ್ತಿದ್ದೇವೆ.

ತರಬೇತಿಗಾಗಿ ಉಪಯೋಗಿಸುವ ಒಂದು ಚಿಕ್ಕ ಗಾತ್ರದ ವಿಮಾನವನ್ನು ಹಾರಿಸಿಕೊಂಡು ಬರುವ ಪೈಲಟ್ ಜಕ್ಕೂರು ಏರೋಡ್ರಮ್ ನಲ್ಲಿ ಕೆಳಮಟ್ಟದಲ್ಲಿ ಹಾರುತ್ತಾ ಬಂದು ಭೂಮಿ ಮೇಲಿಂದ ಏನನ್ನೋ ಎತ್ತಿಕೊಂಡಂತೆ ಕಾಣುತ್ತದೆ. ವಿಮಾನ ಪುನಃ ಮೇಲಕ್ಕೆ ಹಾರುವಾಗ ಅದರ ಹಿಂಭಾಗದಲ್ಲಿ ಒಂದು ಬ್ಯಾನರ್ ಬಿಚ್ಚಿಕೊಳ್ಳುತ್ತದೆ. ನೀವು ಅದನ್ನು ಸ್ಪಷ್ಟವಾಗಿ ಓದಬಹುದು: HAPPY REPUBLIC DAY!

ಬ್ಯಾನರ್ ಹೊತ್ತ ವಿಮಾನ ಬೆಂಗಳೂರು ನಗರದೆಲ್ಲೆಡೆ ಹಾರುತ್ತಿರುವುದು ಸಹ ವಿಡಿಯೋನಲ್ಲಿ ಕಾಣುತ್ತದೆ. ಬ್ಯಾನರ್ ಎತ್ತಿಕೊಳ್ಳುವಾಗ ಈ ಸಾಹಸ ಅಪಾಯಕಾರಿ ಅನಿಸಿದ್ದು ನಿಜ ಮಾರಾಯ್ರೇ. ಯಾಕೆಂದರೆ ನೋಡುವವರಿಗೆ ವಿಮಾನ ಲ್ಯಾಂಡ್ ಆಗುತ್ತಿದೆಯೆನೋ ಅಂತ ಭಾಸವಾಗುತ್ತದೆ. ಅದರೆ ಬ್ಯಾನರ್ ಎತ್ತಿಕೊಂಡು ಅದು ಮೇಲಕ್ಕೆ ಹೋಗುವುದು ಮತ್ತು ಬ್ಯಾನರ್ ಬಿಚ್ಚಿಕೊಳ್ಳುವುದು ರೋಮಾಂಚನ ಹುಟ್ಟಿಸುತ್ತದೆ.

ಹ್ಯಾಟ್ಸಾಫ್ ಟು ಪೈಲಟ್!

ಇದನ್ನೂ ಓದಿ:   ಸಿನಿಮಾ ಶೂಟಿಂಗ್​ನಲ್ಲಿ ನಟಿ ರಮೋಲಾ ಬ್ಯುಸಿ; ವೈರಲ್​ ಆಗುತ್ತಿದೆ ಸಾಂಗ್​ ಶೂಟ್​ ವಿಡಿಯೋ