ಕೆಪಿಎಸ್​​ಸಿ ನೇಮಕಾತಿ ಹಗರಣ: ಬ್ಯಾಂಕ್​ನಲ್ಲಿದ್ದ 1.5 ಕೋಟಿ ಹಣ ಸೇರಿ 22 ಲಕ್ಷ ಮೌಲ್ಯದ ಚಿನ್ನಾಭರಣ ಜಪ್ತಿ

Edited By:

Updated on: Sep 21, 2026 | 11:06 PM

ಕೆಪಿಎಸ್ಸಿ ಪಶುವೈದ್ಯಾಧಿಕಾರಿಗಳ ನೇಮಕಾತಿ ಹಗರಣದ ಸಿಐಡಿ ವರದಿ ಟಿವಿ9ಗೆ ಲಭ್ಯವಾಗಿದೆ. ಇದುವರೆಗೆ 1.5 ಕೋಟಿ ಹಣ ಮತ್ತು 22 ಲಕ್ಷ ಮೌಲ್ಯದ ಚಿನ್ನಾಭರಣ ಜಪ್ತಿ ಮಾಡಲಾಗಿದೆ. ಬಸವರಾಜ್ ಕನ್ನಾಳೆ ಮತ್ತು IAS ಅಧಿಕಾರಿ ಜ್ಞಾನೇಂದ್ರ ಕುಮಾರ್ ಹಗರಣದಲ್ಲಿ ಭಾಗಿಯಾಗಿದ್ದು, ಅಭ್ಯರ್ಥಿಗಳಿಂದ ಲಕ್ಷಾಂತರ ರೂ ಪಡೆದಿರುವುದು, ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ತರಬೇತಿ ಶಿಬಿರಗಳು ನಡೆದಿರುವುದು ತನಿಖೆಯಿಂದ ಬಯಲಾಗಿದೆ.

ಬೆಂಗಳೂರು, ಸೆಪ್ಟೆಂಬರ್​​​ 21: ಕರ್ನಾಟಕ ಲೋಕಸೇವಾ ಆಯೋಗದ ಪಶುವೈದ್ಯಾಧಿಕಾರಿಗಳ ನೇಮಕಾತಿಯಲ್ಲಿ ನಡೆದ ಹಗರಣಕ್ಕೆ ಸಂಬಂಧಿಸಿದಂತೆ ಮಹತ್ವದ ವಿವರಗಳು ಬಹಿರಂಗವಾಗಿವೆ. ಟಿವಿ9ಗೆ ಲಭ್ಯವಾಗಿರುವ ಸಿಐಡಿ ವರದಿಯ ಪ್ರಕಾರ, ಇಲ್ಲಿಯವರೆಗೆ 1.5 ಕೋಟಿಗೂ ಹೆಚ್ಚು ಹಣ ಮತ್ತು 22 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ಜಪ್ತಿ ಮಾಡಲಾಗಿದೆ. ಹಗರಣದ ಪ್ರಮುಖ ಆರೋಪಿ ಬಸವರಾಜ್ ಕನ್ನಾಳೆ ವಿವಿಧ ಅಭ್ಯರ್ಥಿಗಳಿಂದ ಲಕ್ಷಾಂತರ ರೂ ಪಡೆದಿದ್ದಾನೆ. ಓಂ ಲಕ್ಷ್ಮಿ ಸೌಹಾರ್ದ ಸಹಕಾರಿ ಬ್ಯಾಂಕ್‌ನಲ್ಲಿ 64 ಲಕ್ಷ ರೂ, ಕೋಟಕ್ ಮಹೀಂದ್ರಾ ಬ್ಯಾಂಕ್‌ನಲ್ಲಿ 5.2 ಲಕ್ಷ ರೂ ಮತ್ತು ಕನ್ನಾಳೆಯ ಪತ್ನಿಯ ಖಾತೆಯಲ್ಲಿ 71 ಲಕ್ಷ ರೂ ಹಣ ಪತ್ತೆಯಾಗಿದೆ. IAS ಅಧಿಕಾರಿ ಜ್ಞಾನೇಂದ್ರ ಕುಮಾರ್ ಸಹ ಹಗರಣದಲ್ಲಿ ಭಾಗಿಯಾಗಿದ್ದು, 20 ಲಕ್ಷ ರೂ ಮೌಲ್ಯದ ಚಿನ್ನಾಭರಣ ತಮ್ಮ ಗೆಳತಿಗೆ ಕೊಡಿಸಿದ್ದು ತನಿಖೆಯಿಂದ ತಿಳಿದುಬಂದಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Loading...
Unable to load recommendations.
Follow Us