ಕೆಪಿಎಸ್​​ಸಿ ಹಗರಣ: ಪರೀಕ್ಷೆ ಬರೆದ ಅಭ್ಯರ್ಥಿಗಳ ಕಳ್ಳಾಟದ ಬ್ರಹ್ಮಾಂಡ ಸೀಕ್ರೆಟ್ ಬಯಲು

Edited By:

Updated on: Oct 16, 2026 | 2:51 PM

ಕೆಪಿಎಸ್​ಸಿ ನೇಮಕಾತಿಯಲ್ಲಿ ನಡೆದ ಅಕ್ರಮ ಬಗೆದಷ್ಟು ಬಯಲಾಗುತ್ತಿದೆ. ಪ್ರಕರಣ ಸಂಬಂಧ ಇಡಿ ನಡೆಸಿದ ತನಿಖೆಯಲ್ಲಿ ಅಕ್ರಮದಲ್ಲಿ ಶಾಮೀಲಾದ ಅಭ್ಯರ್ಥಿಗಳ ಎಕ್ಸಾಂ ಸೀಕ್ರೆಟ್ ಬಯಲಾಗಿದೆ. ಕೆಪಿಎಸ್​​ಸಿಯ ಕೆಲ ಸದಸ್ಯರೇ ಅಭ್ಯರ್ಥಿಗಳಿಗೆ ಫೈವ್ ಸ್ಟಾರ್ ಹೋಟೆಲ್​ನಲ್ಲಿ ಪರೀಕ್ಷೆ ಬರೆಯಿಸಿರುವ ಮಾಹಿತಿ ಇಡಿಗೆ ಲಭ್ಯವಾಗಿದೆ. ಪರೀಕ್ಷೆಗೂ ಮುನ್ನವೇ ಅಭ್ಯರ್ಥಿಗಳಿಗೆ ಒಂದು ಚೀಟಿಯಲ್ಲಿ ಉತ್ತರ ಬರೆದು ನೀಡಲಾಗಿತ್ತು. ಆದ್ರೂ ಅದನ್ನೂ ಬರೆಯಲು ಸಾಧ್ಯವಾಗದವರಿಗೆ ವಿಶೇಷ ಪ್ಲ್ಯಾನ್ ಮಾಡಿದ್ದರು. ಖುದ್ದು ತಾವೇ ಪ್ರಶ್ನೆ ಪತ್ರಿಕೆ ಮತ್ತು ಒಎಂಆರ್​​ ಕೊಟ್ಟು ಫೈವ್ ಸ್ಟಾರ್ ಹೋಟೆಲ್​ನಲ್ಲಿ ಪರೀಕ್ಷೆ ಬರೆಸಿದ್ದಾರೆ. ನಂತರ ಒಎಂಆರ್​ ಶೀಟ್​ಗಳನ್ನು ಆಯ್ಕೆ ಪಟ್ಟಿಯಲ್ಲಿ ಸೇರಿಸಿದ್ದರು. OMR​ ಶೀಟ್​ಗಳು ಯಾರಿಗೂ ಅನುಮಾನ ಬಾರದಂತೆ ಮೌಲ್ಯಮಾಪನ ಮಾಡಲಾಗಿತ್ತು

ಬೆಂಗಳೂರು, (ಅಕ್ಟೊಬರ್ 16): ಕೆಪಿಎಸ್​ಸಿ ನೇಮಕಾತಿಯಲ್ಲಿ ನಡೆದ ಅಕ್ರಮ ಬಗೆದಷ್ಟು ಬಯಲಾಗುತ್ತಿದೆ.
ಪ್ರಕರಣ ಸಂಬಂಧ ಇಡಿ ನಡೆಸಿದ ತನಿಖೆಯಲ್ಲಿ ಅಕ್ರಮದಲ್ಲಿ ಶಾಮೀಲಾದ ಅಭ್ಯರ್ಥಿಗಳ ಎಕ್ಸಾಂ ಸೀಕ್ರೆಟ್ ಬಯಲಾಗಿದೆ. ಕೆಪಿಎಸ್​​ಸಿಯ ಕೆಲ ಸದಸ್ಯರೇ ಅಭ್ಯರ್ಥಿಗಳಿಗೆ ಫೈವ್ ಸ್ಟಾರ್ ಹೋಟೆಲ್​ನಲ್ಲಿ ಪರೀಕ್ಷೆ ಬರೆಯಿಸಿರುವ ಮಾಹಿತಿ ಇಡಿಗೆ ಲಭ್ಯವಾಗಿದೆ. ಪರೀಕ್ಷೆಗೂ ಮುನ್ನವೇ ಅಭ್ಯರ್ಥಿಗಳಿಗೆ ಒಂದು ಚೀಟಿಯಲ್ಲಿ ಉತ್ತರ ಬರೆದು ನೀಡಲಾಗಿತ್ತು. ಆದ್ರೂ ಅದನ್ನೂ ಬರೆಯಲು ಸಾಧ್ಯವಾಗದವರಿಗೆ ವಿಶೇಷ ಪ್ಲ್ಯಾನ್ ಮಾಡಿದ್ದರು. ಖುದ್ದು ತಾವೇ ಪ್ರಶ್ನೆ ಪತ್ರಿಕೆ ಮತ್ತು ಒಎಂಆರ್​​ ಕೊಟ್ಟು ಫೈವ್ ಸ್ಟಾರ್ ಹೋಟೆಲ್​ನಲ್ಲಿ ಪರೀಕ್ಷೆ ಬರೆಸಿದ್ದಾರೆ. ನಂತರ ಒಎಂಆರ್​ ಶೀಟ್​ಗಳನ್ನು ಆಯ್ಕೆ ಪಟ್ಟಿಯಲ್ಲಿ ಸೇರಿಸಿದ್ದರು. OMR​ ಶೀಟ್​ಗಳು ಯಾರಿಗೂ ಅನುಮಾನ ಬಾರದಂತೆ ಮೌಲ್ಯಮಾಪನ ಮಾಡಲಾಗಿತ್ತು

ಸದ್ಯ ಇಡಿ ವಿಚಾರಣೆ ವೇಳೆ ಪರೀಕ್ಷೆ ಬರೆಸುವಲ್ಲಿ ಭಾಗಿಯಾಗಿರುವುದು ಪತ್ತೆಯಾಗಿದ್ದು, ಅಭ್ಯರ್ಥಿಗಳಿಗೆ ಪರೀಕ್ಷೆ ಬರೆಸಿದ್ದ ಹೋಟೆಲ್ ಬಳಿ ಮಾಹಿತಿ ಸಂಗ್ರಹಿಸಿದ್ದಾರೆ. ಇಂಗ್ಲಿಷ್​ನಲ್ಲಿ ಹೆಸರು, ಅಡ್ರೆಸ್ ಬರೆಯಲು ಬಾರದ ವ್ಯಕ್ತಿಗಳು ಸಹ ಸರ್ಕಾರಿ ಉದ್ಯೋಗ ಪಡೆಯುವಂತೆ ಮಾಡಿರೋದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಇಡಿ ಪರಿಶೀಲನೆ ವೇಳೆ ಅಭ್ಯರ್ಥಿಯೋರ್ವ ತನ್ನ ಹೆಸರು ಮತ್ತು ವಿಳಾಸವನ್ನು ಇಂಗ್ಲಿಷ್​ನಲ್ಲಿ ಬರೆಯಲು ಬರದಿರುವುದು ಪತ್ತೆಯಾಗಿದ್ದು, ಈ ಬಗ್ಗೆ ಇಡಿ ತನಿಖೆ ಚುರುಕುಗೊಳಿಸಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us
ಪ್ರಜ್ವಲ್​ ಕುಮಾರ್ ಎನ್​ ವೈ

2017 ಜೂನ್​ನಿಂದ ಟಿವಿ9 ಕನ್ನಡ ವಾಹಿನಿಯಲ್ಲಿ ಕ್ರೈಮ್ ವರದಿಗಾರನಾಗಿ ವೃತ್ತಿ. ಬೆಂಗಳೂರು ನಗರದಲ್ಲಿ ನಡೆಯುವ ಅಪರಾಧ ಕೃತ್ಯಗಳ ಬಗ್ಗೆ ನಿರಂತರ ವರದಿ ಮಾಡುತಿದ್ದೇನೆ. ಮೂಲತಃ ಹಾಸನ ಜಿಲ್ಲೆ ಬೇಲೂರು ತಾಲ್ಲೂಕಿನವನಾಗಿದ್ದು ಹಾಸನ ಮತ್ತು ತುಮಕೂರಿನಲ್ಲಿ ವಿದ್ಯಾಭ್ಯಾಸ ಮುಗಿಸಿದ ನಂತರ ಒಂದು ವರ್ಷ ಜನಶ್ರೀ ಸುದ್ದಿ ವಾಹಿನಿಯಲ್ಲಿ ಕ್ರೈಮ್ ರಿಪೋರ್ಟರ್ ಆಗಿ ಕೆಲಸ ಮಾಡಿ ನಂತರ 2017 ರಿಂದ ಇಲ್ಲಿಯವರೆಗೆ ಟಿವಿ9 ನಲ್ಲಿ ಕೆಲಸ ಮಾಡುತಿದ್ದೇನೆ.

Read More