ಬರ ಪರಿಹಾರ ನಿಧಿ ಬಿಡುಗಡೆ ವಿಳಂಬ; ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ನೀಡಿದ ಸೂಚನೆ ಬಗ್ಗೆ ಕೃಷ್ಣ ಭೈರೇಗೌಡ ವಿವರಣೆ

|

Updated on: Apr 08, 2024 | 2:55 PM

ರಾಜ್ಯದ ಪರವಾಗಿ ವಾದಿಸಿದ ಕಪಿಲ್ ಸಿಬಲ್, ರೈತ ಸಂಘನೆಗಳ ಪರ ವಾದ ಮಾಡಿದ ಪ್ರಶಾಂತ ಭೂಷಣ್, ರಾಜ್ಯದ ಆಟಾರ್ನಿ ಜನರಲ್ ಶಶಿಕಿರಣ್ ಮತ್ತು ಇತರ ಅಧಿಕಾರಿಗಳ ಸಂಯುಕ್ತ ಪ್ರಯತ್ನದಿಂದ ರಾಜ್ಯಕ್ಕೆ ನೆರವಾಗುವ ಸನ್ನಿವೇಶ ನಿರ್ಮಾಣವಾಗಿದೆ ಎಂದು ಸಚಿವ ಕೃಷ್ಣ ಭೈರೇಗೌಡ ಹೇಳಿದರು.

ದೆಹಲಿ: ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಬರ ಪರಿಹಾರ ನಿಧಿ (drought relief fund) ಬಿಡುಗಡೆಯಾಗದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್ ಮೊರೆಹೊಕ್ಕ ಸಂಗತಿಯನ್ನು ನಾವು ವರದಿ ಮಾಡಿದ್ದೇವೆ. ಇಂದು ಸರ್ವೋಚ್ಛ ನ್ಯಾಯಾಲಯ ವಿಚಾರಣೆ ನಡೆಸಿದ್ದು, ರಾಜ್ಯ ಮತ್ತು ಕೇಂದ್ರ ಸರ್ಕಾರ ನಡುವೆ ಇತ್ಯರ್ಥಗೊಳ್ಳಬೇಕಾದ ವಿಚಾರಗಳು ಸುಪ್ರೀಂ ಕೋರ್ಟ್ ಯಾಕೆ ಬರುತ್ತಿವೆ ಎಂದು ಅಸಮಾಧಾನ ಹೊರಹಾಕಿದೆ. ರಾಜ್ಯದ ಪರವಾಗಿ ಕೋರ್ಟ್ ನಲ್ಲಿ ಹಾಜರಿದ್ದ ಕಂದಾಯ ಸಚಿವ ಕೃಷ್ಣ ಭೈರೇಗೌಡ (Krishna Byre Gowda) ಟಿವಿ9 ದೆಹಲಿ ವರದಿಗಾರನೊಂದಿಗೆ ವಿಸ್ತಾರವಾಗಿ ಮಾತಾಡಿದ್ದಾರೆ. ಎಲ್ಲಕ್ಕೂ ಮೊದಲು ಅವರು ಸುಪ್ರೀಂ ಕೋರ್ಟ್ ಗೆ ರಾಜ್ಯದ ಜನತೆ ಪರವಾಗಿ ಕೃತಜ್ಞತೆ (gratitude) ಸಲ್ಲಿಸಿದರು. ರಾಜ್ಯದ ಪರವಾಗಿ ವಾದಿಸಿದ ಕಪಿಲ್ ಸಿಬಲ್, ರೈತ ಸಂಘನೆಗಳ ಪರ ವಾದ ಮಾಡಿದ ಪ್ರಶಾಂತ ಭೂಷಣ್, ರಾಜ್ಯದ ಆಟಾರ್ನಿ ಜನರಲ್ ಶಶಿಕಿರಣ್ ಮತ್ತು ಇತರ ಅಧಿಕಾರಿಗಳ ಸಂಯುಕ್ತ ಪ್ರಯತ್ನದಿಂದ ರಾಜ್ಯಕ್ಕೆ ನೆರವಾಗುವ ಸನ್ನಿವೇಶ ನಿರ್ಮಾಣವಾಗಿದೆ ಎಂದು ಸಚಿವ ಹೇಳಿದರು.

ಕೇಂದ್ರ ಸರ್ಕಾರದ ಪರ ಹಾಜರಿದ್ದ ಸಾಲಿಸಿಟರ್ ಜನರಲ್ ಮತ್ತು ಅಟಾರ್ನಿ ಜನರಲ್ ಅವರು ನ್ಯಾಯಾಲಯದಿಂದ ಎರಡು ವಾರಗಳ ಸಮಯ ಕೇಳಿದ್ದು, ವಿಷಯವನ್ನು ಚರ್ಚಿಸಿ ಕೇಂದ್ರ ಸರ್ಕಾರದ ಹೇಳಿಕೆಯನ್ನು ನ್ಯಾಯಾಲದ ಮುಂದೆ ಹಾಜರುಪಡಿಸುವುದಾಗಿ ಹೇಳಿದ್ದಾರೆ ಎಂದು ಕೃಷ್ಣ ಭೈರೇಗೌಡ ತಿಳಿಸಿದರು. ಅವರ ಮಾತುಗಳನ್ನು ಪೂರ್ತಿಯಾಗಿ ಕೇಳಿಸಿಕೊಳ್ಳಿ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   ಗೊಂದಲದ ಗೂಡಾಗಿರುವ ಬಿಜೆಪಿಗೆ ಜೆಡಿಎಸ್ ಜೊತೆಯ ಮೈತ್ರಿ ಅದನ್ನು ಇನ್ನಷ್ಟು ಹೆಚ್ಚಿಸಿದೆ: ಕೃಷ್ಣ ಭೈರೇಗೌಡ, ಸಚಿವ