AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಿಎಂ ಸಿದ್ದರಾಮಯ್ಯ ಯಾವುದೇ ಹೆಸರಿನಿಂದ ಸಂಬೋಧಿಸಿದರೂ ಅದನ್ನು ಆಶೀರ್ವಾದವಾಗಿ ಸ್ವೀಕರಿಸುವೆ: ತೇಜಸ್ವೀ ಸೂರ್ಯ, ಸಂಸದ

ಸಿಎಂ ಸಿದ್ದರಾಮಯ್ಯ ಯಾವುದೇ ಹೆಸರಿನಿಂದ ಸಂಬೋಧಿಸಿದರೂ ಅದನ್ನು ಆಶೀರ್ವಾದವಾಗಿ ಸ್ವೀಕರಿಸುವೆ: ತೇಜಸ್ವೀ ಸೂರ್ಯ, ಸಂಸದ

ಅರುಣ್​ ಕುಮಾರ್​ ಬೆಳ್ಳಿ
|

Updated on: Apr 08, 2024 | 1:27 PM

ತನ್ನ ತಂದೆ ಅಧಿಕಾರಿಯಾಗಿ ಸಿದ್ದರಾಮಯ್ಯನವರ ಜೊತೆ ಕೆಲಸ ಮಾಡಿದ್ದಾರೆ ಮತ್ತು ಅವರೊಬ್ಬ ಒಳ್ಳೆಯ ಮುಖ್ಯಮಂತ್ರಿ ಮತ್ತು ವೈಯಕ್ತಿಕವಾಗಿ ಪ್ರಾಮಾಣಿಕರು ಅಂತ ಹೇಳಿರುತ್ತಾರೆ. ಸಿದ್ದರಾಮಯ್ಯನವರು ವಯಸ್ಸಿನಲ್ಲಿ ಬಹಳ ಹಿರಿಯರು, ತನ್ನ ತಾತನ ಪ್ರಾಯದವರು ಎಂದು ಸೂರ್ಯ ಹೇಳಿದರು.

ಬೆಂಗಳೂರು: ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರ ಕಾರ್ಯ ರಂಗೇರುತ್ತಿದೆ. ನಿನ್ನೆ ರಾತ್ರಿ ಕ್ಷೇತ್ರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಕಾಂಗ್ರೆಸ್ ಅಭ್ಯರ್ಥಿ ಸೌಮ್ಯರೆಡ್ಡಿ (Sowmya Reddy) ಪರ ರೋಡ್ ಶೋ ನಡೆಸಿದರು. ಇಂದು ಬೆಳಗ್ಗೆಯಿಂದ ಬಿಜೆಪಿ ಅಭ್ಯರ್ಥಿ ತೇಜಸ್ವೀ ಸೂರ್ಯ (Tejasvi Surya) ಅವರು ಪಕ್ಷದ ಕಾರ್ಯಕರ್ತರೊಂದಿಗೆ ಮತಬೇಟೆ ಶುರುಮಾಡಿದ್ದಾರೆ. ಈ ಸಂದರ್ಭದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಸೂರ್ಯ, ಮುಖ್ಯಮಂತ್ರಿ ಸಿದ್ದರಾಮಯ್ಯ ತನ್ನನ್ನು ಅಮವಾಸ್ಯೆ ಅಥವಾ ಬೇರೆ ಯಾವುದೇ ಹೆಸರಿನಿಂದ ಕರೆದರೂ ಅದನ್ನು ಆಶೀರ್ವಾದ ಅಂತ ಸ್ವೀಕರಿಸುವುದಾಗಿ ಹೇಳಿದರು. ತನ್ನ ತಂದೆ ಅಧಿಕಾರಿಯಾಗಿ ಸಿದ್ದರಾಮಯ್ಯನವರ ಜೊತೆ ಕೆಲಸ ಮಾಡಿದ್ದಾರೆ ಮತ್ತು ಅವರೊಬ್ಬ ಒಳ್ಳೆಯ ಮುಖ್ಯಮಂತ್ರಿ ಮತ್ತು ವೈಯಕ್ತಿಕವಾಗಿ ಪ್ರಾಮಾಣಿಕರು ಅಂತ ಹೇಳಿರುತ್ತಾರೆ. ಸಿದ್ದರಾಮಯ್ಯನವರು ವಯಸ್ಸಿನಲ್ಲಿ ಬಹಳ ಹಿರಿಯರು, ತನ್ನ ತಾತನ ಪ್ರಾಯದವರು. ಹಾಗಾಗಿ ಅವರು ಯಾವ ಹೆಸರಿನಿಂದ ಕರೆದರೂ ಬೇಜಾರಿಲ್ಲ, ಅದನ್ನೆಲ್ಲ ಆಶೀರ್ವಾದ ಅಂತಲೇ ಭಾವಿಸುವೆ ಎಂದು ತೇಜಸ್ವೀ ಸೂರ್ಯ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   ಬೆಂಗಳೂರಲ್ಲಿ ನೀರಿನ ಬವಣೆ ತಪ್ಪಿಸಲು ಬಿಬಿಎಂಪಿ ಆಯುಕ್ತರೊಂದಿಗೆ ಮಾರ್ಗೋಪಾಯಗಳನ್ನು ಚರ್ಚಿಸಿದ ಸಂಸದ ತೇಜಸ್ವೀ ಸೂರ್ಯ