ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವ ನಿರ್ಧಾರದಿಂದ ಹಿಂತೆಗೆಯುವ ಮಾತೇ ಇಲ್ಲ: ಕೆಎಸ್ ಈಶ್ವರಪ್ಪ, ಬಿಜೆಪಿ ನಾಯಕ

|

Updated on: Mar 18, 2024 | 12:57 PM

ಎಲ್ಲರೂ ಹಿಂದೂತ್ವ ಉಳಿಯಬೇಕಾದರೆ ನೀನು ಸ್ಪರ್ಧಿಸಲೇ ಬೇಕು ಅನ್ನುತ್ತಿದ್ದಾರೆ. ಶಿವಮೊಗ್ಗ ಕ್ಷೇತ್ರದಿಂದ ತಾನೇ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡೋದು, ಮಗ ಕಾಂತೇಶ್ ಗೆ ಹಾವೇರಿ ಟಿಕೆಟ್ ಕೇಳಿದ್ದೆ, ಆದರೆ ಅಲ್ಲಿ ತನಗೆ ಮೋಸವಾಯಿತು, ಕ್ಷೇತ್ರದಲ್ಲಿ ಓಡಾಡುವಾಗಲೇ ತನಗೆ ಯಡಿಯೂರಪ್ಪ ವೈರಿಗಳು ಸಾಕಷ್ಟು ಸಂಖ್ಯೆಯಲ್ಲಿರುವುದು ಗೊತ್ತಾಗಿದೆ ಎಂದು ಈಶ್ವರಪ್ಪ ಹೇಳಿದರು.

ಶಿವಮೊಗ್ಗ: ಹಿರಿಯ ಬಿಜೆಪಿ ನಾಯಕ ಕೆಎಸ್ ಈಶ್ವರಪ್ಪ (KS Eshwarappa) ಹಟಕ್ಕೆ ಬಿದ್ದಿದ್ದಾರೆ, ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಅವರು ಪಕ್ಷೇತರ ಅಭ್ಯರ್ಥಿಯಾಗಿ ನಿಲ್ಲುವ ಛಲ ತೊಟ್ಟಿದ್ದು ಇವತ್ತು ನಗರಕ್ಕೆ ಆಗಮಿಸಲಿರುವ ಪ್ರಧಾನಿ ಮಂತ್ರಿ ನರೇಂದ್ರ ಮೋದಿಯವರ (PM Narendra Modi) ಕಾರ್ಯಕ್ರಮದಲ್ಲೂ ಅವರು ಭಾಗವಹಿಸಲು ತಯಾರಿಲ್ಲ. ಈಶ್ವರಪ್ಪ ಇವತ್ತು ಬೀಳಗಿ ಮಠಕ್ಕೆ ತಮ್ಮ ಬೆಂಬಲಿಗರೊಡನೆ ಭೇಟಿ ನೀಡಿದ್ದಾಗ ಸಂಘಪರಿವಾರದ ಪ್ರಮುಖರಾಗಿರುವ ಗೋಪಾಲ್ ಅವರು (Gopal) ಅಯೋಧ್ಯೆಯಿಂದ ಫೋನ್ ಮಾಡಿದ್ದರು. ಅವರೊಂದಿಗೆ ಮಾತಾಡಿದ ಈಶ್ವರಪ್ಪ ಮಠಾಧೀಶರ ಆಶೀರ್ವಾದ ಪಡೆಯಲು ಓಡಾಡುತ್ತಿದ್ದೇನೆ, ಎಲ್ಲರೂ ಹಿಂದೂತ್ವ ಉಳಿಯಬೇಕಾದರೆ ನೀನು ಸ್ಪರ್ಧಿಸಲೇ ಬೇಕು ಅನ್ನುತ್ತಿದ್ದಾರೆ. ಶಿವಮೊಗ್ಗ ಕ್ಷೇತ್ರದಿಂದ ತಾನೇ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡೋದು, ಮಗ ಕಾಂತೇಶ್ ಗೆ ಹಾವೇರಿ ಟಿಕೆಟ್ ಕೇಳಿದ್ದೆ, ಆದರೆ ಅಲ್ಲಿ ತನಗೆ ಮೋಸವಾಯಿತು, ಕ್ಷೇತ್ರದಲ್ಲಿ ಓಡಾಡುವಾಗಲೇ ತನಗೆ ಯಡಿಯೂರಪ್ಪ ವೈರಿಗಳು ಸಾಕಷ್ಟು ಸಂಖ್ಯೆಯಲ್ಲಿರುವುದು ಗೊತ್ತಾಗಿದೆ ಎಂದು ಈಶ್ವರಪ್ಪ ಹೇಳಿದರು.

ಪ್ರಧಾನ ಮಂತ್ರಿಯವರು ರಾಘವೇಂದ್ರನ ಪರ ವೋಟು ಕೇಳುವುದರಿಂದ ತನಗೆ ಅಲ್ಲೇನೂ ಕೆಲಸವಿಲ್ಲ, ಅವರ ಮುಂದೆ ಮಾತಾಡುವಷ್ಟು ದೊಡ್ಡವ ತಾನಲ್ಲ, ಆದರೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆದ್ದು, ಅಯೋಧ್ಯೆಗೆ ಬಂದು ಶ್ರೀರಾಮನ ದರ್ಶನ ಪಡೆಯುತ್ತೇನೆ ಎಂದು ಈಶ್ವರಪ್ಪ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: ಯಡಿಯೂರಪ್ಪ ಕುತ್ತಿಗೆ ಹಿಸುಕಿದ್ದಾರೋ, ಎತ್ತರಕ್ಕೆ ಬೆಳೆಸಿದ್ದಾರೋ ಚುನಾವಣೆ ಮುಗಿದ ಮೇಲೆ ಗೊತ್ತಾಗಲಿದೆ: ಈಶ್ವರಪ್ಪಗೆ ವಿಜಯೇಂದ್ರ ಟಾಂಗ್​

Follow us on