ಶಿವಮೊಗ್ಗದ ಮೇಘನಾಗೆ ಐಎಎಸ್ ಕ್ರ್ಯಾಕ್ ಮಾಡಲು ಕೆಎಸ್ ಈಶ್ವರಪ್ಪರ ಉತ್ತೇಜನ ಕೂಡ ನೆರವಾಯಿತು

Updated on: Apr 26, 2025 | 6:39 PM

ಬರಬಣಿಗೆ ತನ್ನ ಶಕ್ತಿಯಾಗಿತ್ತು ಎಂದು ಯುಪಿಎಸ್​ಸಿಯಲ್ಲಿ 425 ನೇ ರ‍್ಯಾಂಕ್ ಪಡೆದಿರುವ ಮೇಘನಾ ಹೇಳುತ್ತಾರೆ. ಅವರಿಗೆ ಪ್ರಿಲಿಮ್ಸ್ ಪರೀಕ್ಷೆಗಳು ಸಮಸ್ಯೆಯಾಗಿದ್ದವಂತೆ, ಪ್ರತಿದಿನ ಒಂದು ಗಂಟೆ ಬರೆಯುವುದನ್ನು ರೂಢಿಸಿಕೊಂಡು, ಪ್ರಚಲಿತ ವಿದ್ಯಮಾನಗಳನ್ನು ಓದುತ್ತಾ ಪರೀಕ್ಷೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದೆ ಎಂದು ಅವರು ಹೇಳುತ್ತಾರೆ. ಎನ್​ಸಿಈಆರ್​ಟಿ ಮತ್ತು ರೆಫರೆನ್ಸ್ ಪುಸ್ತಕಗಳಿಂದಾದ ಸಹಾಯವನ್ನೂ ಅವರು ನೆನೆಯುತ್ತಾರೆ.

ಶಿವಮೊಗ್ಗ ಏಪ್ರಿಲ್ 26: ನಗರದ ಯುವತಿ ಮೇಘನಾ ಇಡೀ ಜಿಲ್ಲೆಗೆ ಹಾಗೂ ರಾಜ್ಯಕ್ಕೆ ಹೆಮ್ಮೆ ಮತ್ತು ಮಾದರಿಯಾಗಿದ್ದಾರೆ. ಪ್ರತಿವರ್ಷ ಯೂನಿಯನ್ ಪಬ್ಲಿಕ್ ಸರ್ವಿಸ್ ಕಮೀಶನ್ (Union Public Service Commission) ನಡೆಸುವ ಐಎಎಸ್ ಪರೀಕ್ಷೆ ಪಾಸು ಮಾಡುವುದು ಸುಲಭದ ಮಾತಲ್ಲ, ಮೇಘನಾ ತಮ್ಮ ಐದನೇ ಪ್ರಯತ್ನದಲ್ಲಿ ಯಶ ಕಂಡಿದ್ದಾರೆ. ತನ್ನ ಯಶಸ್ಸಿನ ಹಿಂದೆ ಮಾಜಿ ಸಚಿವ ಕೆ ಎಸ್ ಈಶ್ವರಪ್ಪನವರ ಉತ್ತೇಜನ ಇದೆ ಎಂದು ಮೇಘನಾ ಹೇಳುತ್ತಾರೆ. ಪ್ರತಿಬಾರಿ ತನ್ನ ಪ್ರಯತ್ನ ಅಸಫಲಗೊಂಡಾಗ ಈಶ್ವರಪ್ಪ, ತನ್ನ ಕುಟುಂಬ ಮತ್ತು ಶಿವಮೊಗ್ಗದ ಜನತೆ ತನ್ನನ್ನು ಛಲಬಿಡದಂತೆ ಪ್ರೇರೇಪಿಸುತ್ತಿದ್ದರು, ಇವರಿಗೆಲ್ಲ ತನ್ನ ಮೇಲೆ ಇದ್ದ ನಂಬಿಕೆ ವಿಶ್ವಾಸದಿಂದಲೇ ಐಎಎಸ್ ಪರೀಕ್ಷೆ ಪಾಸು ಮಾಡುವುದು ಸಾಧ್ಯವಾಯಿತು ಎಂದು ಮೇಘನಾ ಹೇಳುತ್ತಾರೆ.

ಇದನ್ನೂ ಓದಿ:  Malavika G Nair: ಹೆರಿಗೆಯಾಗಿ 2 ವಾರವಾಗಿದೆಯಷ್ಟೇ, UPSC ಪರೀಕ್ಷೆ ಬರೆದು 45ನೇ ರ‍್ಯಾಂಕ್ ಪಡೆದ ಮಹಿಳೆ

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ

Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.

Read More