ಮೈತ್ರಿ ಮಾತುಕತೆ ನಡೆಸಲು ಹೆಚ್ ಡಿ ಕುಮಾರಸ್ವಾಮಿ ನಿವಾಸಕ್ಕೆ ಆಗಮಿಸಿದ ಕೆಎಸ್ ಈಶ್ವರಪ್ಪ

|

Updated on: Sep 13, 2023 | 11:46 AM

ಅಸಲಿಗೆ ಮೈತ್ರಿ ಬೆಳೆಸಲು ಬಿಜೆಪಿಗೆ ಹೈ ಕಮಾಂಡ್ ನಿಂದ ಇದುವರೆಗೆ ಯಾವುದೇ ನಿರ್ದೇಶನ ಸಿಕ್ಕಿಲ್ಲ. ಬಿಜೆಪಿ ಚುನಾವಣಾ ಸಮಿತಿ ಸಭೆಯಲ್ಲಿ ಭಾಗವಹಿಸಲು ದೆಹಲಿಗೆ ಹೋಗಿರುವ ಪಕ್ಷದ ಹಿರಿಯ ಬಿಎಸ್ ಯಡಿಯೂರಪ್ಪ ಇಂದು ವರಿಷ್ಠರೊಂದಿಗೆ ಮೈತ್ರಿಯ ಬಗ್ಗೆ ಮಾತುಕತೆ ನಡೆಸಲಿದ್ದಾರೆ.

ಬೆಂಗಳೂರು: ಅತ್ತ ಮೈಸೂರು ಮತ್ತು ಮಂಡ್ಯ ಭಾಗಗಳಲ್ಲಿ ರೈತರು ಕಾವೇರಿ ನೀರಿಗಾಗಿ ಹೋರಾಟ ಮಾಡುತ್ತಿದ್ದರೆ ಇಲ್ಲಿ ಬೆಂಗಳೂರಲ್ಲಿ ಬಿಜೆಪಿ ಮತ್ತು ಜೆಡಿಎಸ್ ನಾಯಕರು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ವಿರುದ್ಧ ಹೋರಾಡುವುದಕ್ಕೆ ಸ್ನೇಹ ಬೆಳೆಸಲು ಕಸರತ್ತು ನಡೆಸಿದ್ದಾರೆ. ಬಿಜೆಪಿ ಹಿರಿಯ ನಾಯಕ ಮತ್ತು ಮಾಜಿ ಶಾಸಕ ಕೆಎಸ್ ಈಶ್ವರಪ್ಪ (KS Eshwarappa), ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಹೆಚ್ ಡಿ ಕುಮಾರಸ್ವಾಮಿ (HD Kumaraswamy) ಅವರೊಂದಿಗೆ ಮಾತುಕತೆ ನಡೆಸಲು ಜೆಪಿ ನಗರದಲ್ಲಿರುವ ಅವರ ನಿವಾಸಕ್ಕೆ ಆಗಮಿಸಿದರು. ಬಿಜೆಪಿ ನಾಯಕನೊಂದಿಗೆ ಸಾ ರಾ ಮಹೇಶ್ (S R Mahesh) ಆಗಮಿಸುತ್ತರುವುದನ್ನು ವಿಡಿಯೋದಲ್ಲಿ ಕಾಣಬಹುದು. ಕಳೆದೊಂದು ವಾರದಿಂದ ಬಿಜೆಪಿ ಮತ್ತು ಜೆಡಿಎಸ್ ನಾಯಕರು ಮಾತುಕತೆ ನಡೆಸುತ್ತಿರುವರಾದರೂ ಮೈತ್ರಿಯ ಬಗ್ಗೆ ಒಂದು ಚಿತ್ರಣ ಇದುವರೆಗೆ ಸಿಕ್ಕಿಲ್ಲ. ಅಸಲಿಗೆ ಮೈತ್ರಿ ಬೆಳೆಸಲು ಬಿಜೆಪಿಗೆ ಹೈ ಕಮಾಂಡ್ ನಿಂದ ಇದುವರೆಗೆ ಯಾವುದೇ ನಿರ್ದೇಶನ ಸಿಕ್ಕಿಲ್ಲ. ಬಿಜೆಪಿ ಚುನಾವಣಾ ಸಮಿತಿ ಸಭೆಯಲ್ಲಿ ಭಾಗವಹಿಸಲು ದೆಹಲಿಗೆ ಹೋಗಿರುವ ಪಕ್ಷದ ಹಿರಿಯ ಬಿಎಸ್ ಯಡಿಯೂರಪ್ಪ ಇಂದು ವರಿಷ್ಠರೊಂದಿಗೆ ಮೈತ್ರಿಯ ಬಗ್ಗೆ ಮಾತುಕತೆ ನಡೆಸಲಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ