ಕೆಎಸ್​ ಈಶ್ವರಪ್ಪ ಸಾಲು ಸಾಲು ಆರೋಪ; ಎಲ್ಲದಕ್ಕೂ ಕ್ಷೇತ್ರ, ರಾಜ್ಯದ ಜನ ಉತ್ತರಿಸ್ತಾರೆ ಎಂದ ಬಿವೈ ವಿಜಯೇಂದ್ರ

Edited By: ಕಿರಣ್ ಹನುಮಂತ್​ ಮಾದಾರ್

Updated on: Mar 17, 2024 | 2:45 PM

ಕೆಎಸ್​ ಈಶ್ವರಪ್ಪ(KS Eshwarappa) ಪುತ್ರನಿಗೆ ಲೋಕಸಭಾ ಟಿಕೆಟ್​ ಮಿಸ್​ ಆಗುತ್ತಲೇ ಯಡಿಯೂರಪ್ಪ ಮತ್ತು ವಿಜಯೇಂದ್ರ ವಿರುದ್ಧ ಗುಡುಗಿದ್ದಾರೆ. ಈ ವಿಚಾರ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ,(BY Vijayendra) ಈಶ್ವರಪ್ಪಗೆ ಟಕ್ಕರ್ ಕೊಟ್ಟಿದ್ದಾರೆ.

ಮಂಡ್ಯ, ಮಾ.17: ಕೆಎಸ್​ ಈಶ್ವರಪ್ಪ(KS Eshwarappa) ಪುತ್ರನಿಗೆ ಲೋಕಸಭಾ ಟಿಕೆಟ್​ ಮಿಸ್​ ಆಗುತ್ತಲೇ ಯಡಿಯೂರಪ್ಪ ಮತ್ತು ವಿಜಯೇಂದ್ರ ವಿರುದ್ಧ ಗುಡುಗಿದ್ದಾರೆ. ಈ ವಿಚಾರ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ,(BY Vijayendra) ಈಶ್ವರಪ್ಪಗೆ ಟಕ್ಕರ್ ಕೊಟ್ಟಿದ್ದಾರೆ. ‘ಎಲ್ಲದಕ್ಕೂ ಕ್ಷೇತ್ರದ ಜನ ಮತ್ತು ರಾಜ್ಯದ ಜನ ಉತ್ತರ ಕೊಡುತ್ತಾರೆ. ನಾನು ಹೆಚ್ಚಿಗೆ ಮಾತಾಡಲು ಇಷ್ಟ ಪಡಲ್ಲ. ಈಶ್ವರಪ್ಪ ಅವರು ನಮ್ಮ ಪಕ್ಷದ ಹಿರಿಯರು, ಅವರ ಜೊತೆ ಮಾತಾಡ್ತೇವೆ. ಅವರು ನೋವಿನಲ್ಲಿ ಇದ್ದಾರೆ, ಎಲ್ಲವೂ ಸುಸೂತ್ರವಾಗಿ ಬಗೆಹರಿಯಲಿದೆ ಎಂದರು.

ಎಲ್ಲರ ಒಮ್ಮತದ ತೀರ್ಮಾನದಿಂದ ಅಭ್ಯರ್ಥಿ ಘೋಷಣೆ

ಇನ್ನು ಯಾರೋ ಒಬ್ಬರ ಮಾತು ಕೇಳಿ ನಮ್ಮ ಪಕ್ಷದಲ್ಲಿ ಟಿಕೆಟ್ ಕೊಡಲ್ಲ, ಕೇಂದ್ರದ ವರಿಷ್ಠರು ಎಲ್ಲರೂ ಕೂತು ಚರ್ಚೆ ಮಾಡಿ ಟಿಕೆಟ್ ಕೊಟ್ಟಿದ್ದಾರೆ. ಎಲ್ಲರ ಒಮ್ಮತದ ತೀರ್ಮಾನದಿಂದ ಅಭ್ಯರ್ಥಿ ಘೋಷಣೆ ಆಗಿದೆ. ಒಬ್ಬರ ತೀರ್ಮಾನದಿಂದ ಅಭ್ಯರ್ಥಿಗಳ ಆಯ್ಕೆ ಆಗಿಲ್ಲ ಎಂದು ಈಶ್ವರಪ್ಪ ಆರೋಪಗಳಿಗೆ ಪ್ರತ್ಯುತ್ತರ ನೀಡಿದರು.

ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us