KSCA Elections: ವೆಂಕಟೇಶ್ ಪ್ರಸಾದ್ ಫಸ್ಟ್​​ ರಿಯಾಕ್ಷನ್​; ಇದು ಹೊಸ ಅಧ್ಯಾಯ ಎಂದ‌ ಮಾಜಿ ಕ್ರಿಕೆಟಿಗ

Updated By: ಗಂಗಾಧರ​ ಬ. ಸಾಬೋಜಿ

Updated on: Dec 07, 2025 | 10:59 PM

ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆ ಅಧ್ಯಕ್ಷ ಚುನಾವಣೆ ಫಲಿತಾಂಶ ಭಾನುವಾರ ಪ್ರಕಟವಾಗಿದೆ. ಮಾಜಿ ಕ್ರಿಕೆಟಿಗ ವೆಂಕಟೇಶ್ ಪ್ರಸಾದ್​ ಅವರು ಗೆಲುವು ಸಾಧಿಸಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಸದಸ್ಯರಿಗೆ ಬದಲಾವಣೆ ಬೇಕು ಅನ್ನೋದು ಗೊತ್ತಿತ್ತು. ಬದಲಾವಣೆ ಬಯಸಿದ್ದರು, ಅದಕ್ಕಾಗಿ ಮತ ನೀಡಿದ್ದಾರೆ ಎಂದು ಹೇಳಿದ್ದಾರೆ.

ಬೆಂಗಳೂರು, ಡಿಸೆಂಬರ್​​ 07: ನೂತನ ಕೆಎಸ್‌ಸಿಎ ಅಧ್ಯಕ್ಷರಾಗಿ ಮಾಜಿ ಕ್ರಿಕೆಟಿಗ ವೆಂಕಟೇಶ್ ಪ್ರಸಾದ್​​ ಅವರು ಆಯ್ಕೆ ಆಗಿದ್ದಾರೆ. ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆ ಅಧ್ಯಕ್ಷ ಚುನಾವಣೆಯಲ್ಲಿ ಗೆಲುವಿನ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಇದು ಕ್ರಿಕೆಟ್ ಗೆಲುವು. ಚಿನ್ನಸ್ವಾಮಿ ಮೈದಾನಕ್ಕೆ ಮರಳಿ ಐಪಿಎಲ್ ತರಬೇಕಿದೆ. ಇದು ಹೊಸ ಅಧ್ಯಾಯ ಎಂದಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Published on: Dec 07, 2025 10:58 PM