ಚಲಿಸುತ್ತಿದ್ದ ಕೆಎಸ್ಅರ್ಟಿಸಿ ಬಸ್ಸಿನ ಮುಂದಿನ ಚಕ್ರ ಕಿತ್ತುಬಂದರೂ ಚಾಲಕನ ಸಮಯಪ್ರಜ್ಞೆಯಿಂದ ತಪ್ಪಿತು ದುರಂತ!
ಚಾಲಕ ಅದ್ಯಾವ ಯುಕ್ತಿ ಬಳಸಿದನೋ ಗೊತ್ತಿಲ್ಲ, ವಾಹನ ರಸ್ತೆ ಬಿಟ್ಟು ಕೆಳಗಿಳಿಯದಂತೆ ನಿಯಂತ್ರಿಸಿದ್ದಾನೆ. ಬಸ್ಸಿನ ವೇಗ ಮತ್ತು ಭಾರಕ್ಕೆ ಮುಂದಿನ ಎಕ್ಸೆಲ್ ಮುರಿದಿದೆ. ಶಾಲೆಗಳಿಂದ ಮನೆಗೆ ಹೊರಟಿದ್ದ ಮಕ್ಕಳು ಬಸ್ಸಲ್ಲಿದ್ದರು. ಎಲ್ಲರೂ ಅಪಾಯದಿಂದ ಪಾರಾಗಿರುವುದು ಸಂತೋಷದ ಸಂಗತಿ.
ಗದಗ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗೆ (KSRTC bus) ಸೇರಿದ ಈ ಬಸ್ಸಲ್ಲಿ ಪ್ರಯಾಣಿಸುತ್ತಿದ್ದವರು ನಿಜಕ್ಕೂ ಅದೃಷ್ಟವಂತರು. ವಾಹನ ಯಾವುದೇ ಆಗಿರಲಿ ಚಲಿಸುವಾಗ ಮುಂದಿನ ಚಕ್ರ ಪಂಕ್ಚರ್ ಆದರೆ, ಬರ್ಸ್ಟ್ ಆದರೆ ಆ ವಾಹನ ಉರುಳಿ ಬೀಳುವ ಸಾಧ್ಯತೆ ಹೆಚ್ಚಿರುತ್ತದೆ. ಅಂಥ ಹಲವಾರು ಅಪಘಾತಗಳನ್ನು (accidents) ನಾವು ನೋಡಿದ್ದೇವೆ, ಕೇಳಿಸಿಕೊಂಡಿದ್ದೇವೆ. ಅಂಥದರಲ್ಲಿ ಚಲಿಸುತ್ತಿದ್ದ ಭಾರೀ ವಾಹನವೊಂದರ (moving HMV) ಮುಂದಿನ ಚಕ್ರವೇ ಕಿತ್ತುಬಂದರೆ ವಾಹನದ ಸ್ಥಿತಿ ಏನಾಗಬೇಡ? ಜಿಲ್ಲೆಯ ಲಕ್ಷ್ಮೇಶ್ವರ ದಿಂದ ಮಾಗಡಿ ಮಾರ್ಗವಾಗಿ ಶಿರಹಟ್ಟಿಗೆ ಹೊರಟಿದ್ದ ಈ ಬಸ್ಸಿನ ಮುಂದಿನ ಚಕ್ರ ಕಿತ್ತು ಬಂದರೂ ಚಾಲಕನ ಸಮಯ ಪ್ರಜ್ಞೆಯಿಂದ ದೊಡ್ಡ ಅನಾಹುತವೊಂದು ತಪ್ಪಿದೆ. ಬಸ್ಸಿನ ಟೈರ್ ದೂರಕ್ಕೆ ಚಿಮ್ಮಿ ಹೊಲವೊಂದರಲ್ಲಿ ಬಿದ್ದಿರುವುದನ್ನು ವಿಡಿಯೋದಲ್ಲಿ ನೋಡಬಹುದು. ಚಾಲಕ ಅದ್ಯಾವ ಯುಕ್ತಿ ಬಳಸಿದನೋ ಗೊತ್ತಿಲ್ಲ, ವಾಹನ ರಸ್ತೆ ಬಿಟ್ಟು ಕೆಳಗಿಳಿಯದಂತೆ ನಿಯಂತ್ರಿಸಿದ್ದಾನೆ. ಬಸ್ಸಿನ ವೇಗ ಮತ್ತು ಭಾರಕ್ಕೆ ಮುಂದಿನ ಎಕ್ಸೆಲ್ ಮುರಿದಿದೆ. ಶಾಲೆಗಳಿಂದ ಮನೆಗೆ ಹೊರಟಿದ್ದ ಮಕ್ಕಳು ಬಸ್ಸಲ್ಲಿದ್ದರು. ಎಲ್ಲರೂ ಅಪಾಯದಿಂದ ಪಾರಾಗಿರುವುದು ಸಂತೋಷದ ಸಂಗತಿ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ