ಸಿಎಂ ಸಿದ್ದರಾಮಯ್ಯ ಸಾಬ್ ಕೋ ಗುಸ್ಸಾ ಕ್ಯೋಂ ಆತಾ ಹೈ? ವಿಡಿಯೋ ನೋಡಿ ಗೊತ್ತಾಗುತ್ತೆ!

ಸಿಎಂ ಸಿದ್ದರಾಮಯ್ಯ ಸಾಬ್ ಕೋ ಗುಸ್ಸಾ ಕ್ಯೋಂ ಆತಾ ಹೈ? ವಿಡಿಯೋ ನೋಡಿ ಗೊತ್ತಾಗುತ್ತೆ!

ಅರುಣ್​ ಕುಮಾರ್​ ಬೆಳ್ಳಿ
|

Updated on: Jan 24, 2024 | 5:59 PM

ಪ್ರಾಯಶಃ ಕೆಲವರು ಊಟ ಹಾಕಿಸಿಕೊಂಡ ತಟ್ಟೆಗಳನ್ನು ಕೈಯಲ್ಲಿ ಹಿಡಿದು ಭಾಷಣ ಕೇಳಲು ನಿಂತಿರಬಹುದು ಇಲ್ಲವೇ ಕುರ್ಚಿಗಳಲ್ಲಿ ಕೂತಿರಬಹುದು. ಹಾಗಾಗೇ, ಮುಖ್ಯಮಂತ್ರಿಯವರು, ‘ಕೂತ್ಕೋಳ್ಳಂಗಿದ್ರೆ ಕೂತ್ಕೊಳ್ಳಿ ಇಲ್ಲಾಂದ್ರೆ ಎದ್ಹೋಗಿ, ಸ್ವಲ್ಪಾನೂ ತಾಳ್ಮೆ ಇಲ್ಲ,’ ಅಂತ ಗದರುತ್ತಾರೆ.

ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಇಂದು ಸಾರ್ವಜನಿಕ ಸಭೆಯೊಂದರಲ್ಲಿ ಸಭಿಕರು ಮತ್ತು ಪಕ್ಷದ ಕಾರ್ಯಕರ್ತರ (party workers) ಮೇಲೆ ರೇಗಿದ ಪ್ರಸಂಗ ನಡೆಯಿತು. ಇದು ನಡೆದಿದ್ದು, ಜಿಲ್ಲೆಯ ಪಿರಿಯಾಪಟ್ಟಣ ತಾಲ್ಲೂಕಿನ ಕೊಪ್ಪ ಗ್ರಾಮದಲ್ಲಿ (Koppa village). ವಿಡಿಯೋ ನೋಡಿ ನಾವು ಅರ್ಥಮಾಡಿಕೊಳ್ಳಬಹುದಾದ ಸಂಗತಿಯೇನೆಂದರೆ, ಕಾರ್ಯಕ್ರಮದಲ್ಲಿ ಭಾಗವಹಿಸಲು ಬಂದವರಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು. ಆದರೆ, ಮುಖ್ಯಮಂತ್ರಿ ಸಿದ್ದರಾಮಯ್ಯನವರ ಭಾಷಣ ಮುಗಿಯುವ ಮೊದಲೇ ಜನ ಊಟಕ್ಕೆ ಮುಗಿಬಿದ್ದರು ಅನಿಸುತ್ತೆ. ಗಲಾಟೆಯಂಥ ಸ್ಥಿತಿ ನಿರ್ಮಾಣವಾದಾಗ ಮತ್ತು ತಮ್ಮ ಮಾತು ಕೇಳುವ ಬದಲು ಜನ ಊಟದ ಕೌಂಟರ್ ಗಳ ಕಡೆ ಹೋದಾಗ ಸಹಜವಾಗೇ ಮುಖ್ಯಮಂತ್ರಿಯವರಿಗೆ ಕೋಪ ಬಂದಿದೆ. ಪ್ರಾಯಶಃ ಕೆಲವರು ಊಟ ಹಾಕಿಸಿಕೊಂಡ ತಟ್ಟೆಗಳನ್ನು ಕೈಯಲ್ಲಿ ಹಿಡಿದು ಭಾಷಣ ಕೇಳಲು ನಿಂತಿರಬಹುದು ಇಲ್ಲವೇ ಕುರ್ಚಿಗಳಲ್ಲಿ ಕೂತಿರಬಹುದು. ಹಾಗಾಗೇ, ಮುಖ್ಯಮಂತ್ರಿಯವರು, ‘ಕೂತ್ಕೋಳ್ಳಂಗಿದ್ರೆ ಕೂತ್ಕೊಳ್ಳಿ ಇಲ್ಲಾಂದ್ರೆ ಎದ್ಹೋಗಿ, ಸ್ವಲ್ಪಾನೂ ತಾಳ್ಮೆ ಇಲ್ಲ,’ ಅಂತ ಗದರುತ್ತಾರೆ. ಬಳಿಕ ಊಟ ಬಡಿಸುತ್ತಿದ್ದವರ ಕಡೆ ತಿರುಗಿ,‘ಊಟ ಕೊಡೋದನ್ನ ನಿಲ್ಸಿ, ಎಲ್ರೂ ಈ ಕಡೆ ಬನ್ನಿ’, ಅನ್ನುತ್ತಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ