ಬಿಜೆಪಿ ನಾಯಕರು ಶೆಟ್ಟರ್ ದುಂಬಾಲು ಬಿದ್ದಿರೋದು ಆ ಪಕ್ಷ ದುರ್ಬಲಗೊಂಡಿರುವುದಕ್ಕೆ ಸಾಕ್ಷಿ: ಡಿಕೆ ಶಿವಕುಮಾರ್
ಬಿಜೆಪಿಯನ್ನು ಅಧಿಕಾರದಿಂದ ದೂರವಿಡಬೇಕು ಎಂಬ ಒಂದೇ ಕಾರಣದಿಂದ ತಮ್ಮ ಪಕ್ಷ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡು ಹೆಚ್ ಡಿ ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡಿತ್ತು. ಆದರೆ, ಕುಮಾರಸ್ವಾಮಿಯವರೇ ಈಗ ಬಿಜೆಪಿಯನ್ನು ತಬ್ಬಿಕೊಂಡಿರೋದು ಎರಡೂ ಪಕ್ಷಗಳಲ್ಲಿ ನಾಯಕತ್ವದ ಕೊರತೆಯನ್ನು ಸೂಚಿಸುತ್ತದೆ ಎಂದು ಶಿವಕುಮಾರ್ ಹೇಳಿದರು.
ಮಡಿಕೇರಿ: ಬಿಜೆಪಿ ಮತ್ತು ಜೆಡಿಎಸ್ ಎರಡೂ ಪಕ್ಷಗಳಲ್ಲಿ ನಾಯಕತ್ವದ ಕೊರತೆ ಉಂಟಾಗಿದೆ ಮತ್ತು ರಾಜ್ಯದಲ್ಲಿ ಬಿಜೆಪಿ ದುರ್ಬಲಗೊಂಡಿದೆ ಎಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಹೇಳಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah), ಹೆಚ್ ಸಿ ಮಹಾದೇವಪ್ಪ (HC Mahadevappa) ಮತ್ತು ಬೇರೆ ಕೆಲ ನಾಯಕರೊಂದಿಗೆ ಇವತ್ತು ಮಡಿಕೇರಿಯಲ್ಲಿದ್ದ ಶಿವಕುಮಾರ್; ಜಗದೀಶ್ ಶೆಟ್ಟರ್ ಈಗ ಕಾಂಗ್ರೆಸ್ ಪಕ್ಷದಲ್ಲಿದ್ದಾರೆ, ಆದರೆ ಅವರನ್ನು ಬಿಜೆಪಿಗೆ ವಾಪಸ್ಸು ಕರೆದೊಯ್ಯಲು ಆ ಪಕ್ಷದ ನಾಯಕರು ಕಸರತ್ತು ನಡೆಸಿದ್ದಾರೆ, ಬಿಜೆಪಿಯ ಹಲವಾರು ನಾಯಕರು ಶೆಟ್ಟರ್ ಅವರನ್ನು ಭೇಟಿಯಾಗತ್ತಿರುವ ವಿಷಯ ತಮಗೆ ಗೊತ್ತಿದೆ ಎಂದು ಹೇಳಿ ಇದರಿಂದ ಬಿಜೆಪಿ ಎಷ್ಟು ದುರ್ಬಲಗೊಂಡಿದೆ ಅನ್ನೋದು ಗೊತ್ತಾಗುತ್ತದೆ ಎಂದರು. ಬಿಜೆಪಿಯನ್ನು ಅಧಿಕಾರದಿಂದ ದೂರವಿಡಬೇಕು ಎಂಬ ಒಂದೇ ಕಾರಣದಿಂದ ತಮ್ಮ ಪಕ್ಷ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡು ಹೆಚ್ ಡಿ ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡಿತ್ತು. ಆದರೆ, ಕುಮಾರಸ್ವಾಮಿಯವರೇ ಈಗ ಹೋಗಿ ಬಿಜೆಪಿಯನ್ನು ತಬ್ಬಿಕೊಂಡಿದ್ದಾರೆ, ಇದರರ್ಥ ಎರಡೂ ಪಕ್ಷಗಳಲ್ಲಿ ನಾಯಕತ್ವದ ಕೊರತೆ ಇದೆ ಮತ್ತು ಚುನಾವಣೆ ಎದುರಿಸಲು ಬೇಕಿರುವ ಆತ್ಮವಿಶ್ವಾಸ ಅವರಲ್ಲಿಲ್ಲ ಎಂದು ಶಿವಕುಮಾರ್ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ