ಅನಂತಕುಮಾರ್ ಹೆಗಡೆಗೆ ಮಾನಸಿಕ ಸ್ಥಿಮಿತ ಇಲ್ಲ: ಡಿಸಿಎಂ ಡಿಕೆ ಶಿವಕುಮಾರ್ ವಾಗ್ದಾಳಿ
ಮಾನಸಿಕ ಸ್ಥಿರತೆ ಇರುವವರು ಈ ರೀತಿ ಮಾತನಾಡಲು ಹೋಗಲ್ಲ. ಬಹುಶಃ ಅವರ ನಾಯಕರಿಗೆ ಮಾತನಾಡಿದ್ದು ತಪ್ಪು ಅಂತಾ ಗೊತ್ತಾಗಿದೆ. ಕೂಡಲೇ ಅನಂತಕುಮಾರ್ ಹೆಗಡೆ ಆರೋಗ್ಯದ ಬಗ್ಗೆ ಗಮನ ಕೊಡಲಿ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ.
ಬೆಂಗಳೂರು, ಜನವರಿ 15: ಸಿಎಂ ಸಿದ್ದರಾಮಯ್ಯ ವಿರುದ್ಧ ಏಕವಚನದಲ್ಲೇ ಬಿಜೆಪಿ ಸಂಸದ ಅನಂತಕುಮಾರ್ ಹೆಗಡೆ (Anantkumar Hegde) ವಾಗ್ದಾಳಿ ನಡೆಸಿದ ವಿಚಾರವಾಗಿ ಪ್ರತಿಕ್ರಿಯಿಸಿದ ಡಿಸಿಎಂ ಡಿಕೆ ಶಿವಕುಮಾರ್ (DK Shivakumar), ಹೆಗಡೆ ಅರೋಗ್ಯದ ಬಗ್ಗೆ ಅವರ ಮುಖಂಡರೇ ಕಾಳಜಿ ವಹಿಸಬೇಕು. ಮಾನಸಿಕ ಸ್ಥಿರತೆ ಇರುವವರು ಈ ರೀತಿ ಮಾತನಾಡಲು ಹೋಗಲ್ಲ ಎಂದು ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಬಹುಶಃ ಅವರ ನಾಯಕರಿಗೆ ಮಾತನಾಡಿದ್ದು ತಪ್ಪು ಅಂತಾ ಗೊತ್ತಾಗಿದೆ. ಕೂಡಲೇ ಅನಂತಕುಮಾರ್ ಹೆಗಡೆ ಆರೋಗ್ಯದ ಬಗ್ಗೆ ಗಮನ ಕೊಡಲಿ ಎಂದು ಹೇಳಿದ್ದಾರೆ.
ಲೋಕಸಭೆ ಚುನಾವಣೆ ಸಂಬಂಧ ಜನವರಿ 19ರಂದು ಸಂಜೆ 4ಕ್ಕೆ ಸಭೆ ಕರೆಯಲಾಗಿದೆ. ಅಂದು ಚುನಾವಣಾ ಸಮಿತಿಯ ಸಭೆ ನಡೆಯಲಿದೆ. ಲೋಕಸಭಾ ಅಭ್ಯರ್ಥಿ ಫೈನಲ್ ಸಂಬಂಧಿಸಿದಂತೆ ಸಭೆ ನಡೆಸಲಿದ್ದೇನೆ. ಹಾಗೆಯೇ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾರ್ಯಕರ್ತರ ಸಭೆ ನಡೆಯಲಿದೆ ಎಂದು ಡಿಕೆ ಶಿವಕುಮಾರ್ ತಿಳಿಸಿದ್ದಾರೆ.
ನಿಗಮ ಮಂಡಳಿಗಳಿಗೆ ಅಧ್ಯಕ್ಷರ ನೇಮಕ ಶೀಘ್ರ ಆಗಲಿದೆ. ಒಂದು ವೇಳೆ ಇವತ್ತು ಸಂಜೆ ಒಳಗಡೆ ಆದರೆ ನಿಮ್ಮ ಜೊತೆ ಮಾತನಾಡುತ್ತೇನೆ. ಚುನಾವಣೆ ಸಂದರ್ಭದಲ್ಲಿ ಕೊಟ್ಟ ಮಾತಿನಂತೆ ನಡೆಯುತ್ತೇವೆ ಎಂದು ಅವರು ಹೇಳಿದ್ದಾರೆ.
ಎಲ್ಲಾ ರಾಜಕಾರಣಿಗಳಿಗೂ ಒಂದೇ ಮಾನದಂಡ: ಉಡುಪಿಯಲ್ಲಿ ಕೋಟ ಶ್ರೀನಿವಾಸ ಪೂಜಾರಿ
ಸಿಎಂ ಸಿದ್ದರಾಮಯ್ಯ ವಿರುದ್ಧ ಸಂಸದ ಅನಂತಕುಮಾರ್ ಹೆಗಡೆ ಏಕವಚನದಲ್ಲಿ ನಿಂದಿಸಿದ ಬಗ್ಗೆ ಉಡುಪಿಯಲ್ಲಿ ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಪ್ರತಿಕ್ರಿಯಿಸಿದ್ದು, ಎಲ್ಲಾ ರಾಜಕಾರಣಿಗಳಿಗೂ ಒಂದೇ ಮಾನದಂಡ ಎಂದು ಹೇಳಿದ್ದಾರೆ. ಸಿಎಂ ಸಿದ್ದರಾಮಯ್ಯ ಪ್ರಧಾನಿ ಪ್ರಧಾನಿ ಮೋದಿ ಅವರನ್ನು ಎಷ್ಟು ಬಾರಿ ಏಕವಚನದಲ್ಲಿ ಬೈದಿಲ್ಲ? ಹಾಗಾದರೆ ಮೋದಿಯನ್ನು ಸಿದ್ದರಾಮಯ್ಯ ಏಕವಚನದಲ್ಲಿ ಬೈದದ್ದು ತಪ್ಪಲ್ವಾ? ಕಾಂಗ್ರೆಸ್ ಮುಖಂಡರೇ ಚರ್ಚೆ ಏಕಮುಖವಾಗಿ ಸಾಗಬಾರದು ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಅನಂತಕುಮಾರ್ ಹೆಗಡೆ ವಿವಾದಾತ್ಮಕ ಹೇಳಿಕೆ: ಪೊಲೀಸರು ಕ್ರಮ ಕೈಗೊಳ್ಳಲಿದ್ದಾರೆ ಎಂದ ಪರಮೇಶ್ವರ್
ಕಾಂಗ್ರೆಸ್ ನಾಯಕರು ಏಕಮುಖವಾಗಿ ಮಾತನಾಡಬಾರದು. ಏಕವಚನದಲ್ಲಿ ಯಾರನ್ನೂ ಬೈಯ್ಯಬಾರದು ಎಂಬುದು ಸಾರ್ವತ್ರಿಕ ನಿಲುವು. ಮೋದಿಯನ್ನು ಏಕವಚನದಲ್ಲಿ ಬೈದ ಸಿದ್ದರಾಮಯ್ಯ ನಿಲುವನ್ನೂ ಅವರು ಖಂಡಿಸಬೇಕು. ಆಗ ಅವರು ಮಾಡಿದ ಖಂಡನೆಗಳಿಗೆ ಅರ್ಥ ಬರುತ್ತದೆ. ಸರ್ಜಿಕಲ್ ಸ್ಟ್ರೈಕ್ ಸಂದರ್ಭ ‘ಇವ ಗನ್ ತೆಗೆದುಕೊಂಡು ಹೋಗಿದ್ನಾ’ ಎಂದು ಸಿದ್ದರಾಮಯ್ಯ ಏಕವಚನದಲ್ಲಿ ನಿಂದಿಸಿದ್ದರು ಎಂದು ಕೋಟ ಹೇಳಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ