ಶೋಭಾ ಕರಂದ್ಲಾಜೆ ಭಾಷಣದ ವೇಳೆ ಗಡದ್ ನಿದ್ದೆಗೆ ಜಾರಿದ ಸಂಸದ ಜಿಎಸ್ ಬಸವರಾಜ್
ತುಮಕೂರಿನ(Tumakuru) ಎಪಿಎಮ್ಸಿ ಆವರಣದಲ್ಲಿ ಹಮ್ಮಿಕೊಂಡಿದ್ದ ಕೊಬ್ಬರಿ ಉಂಡೆ ಖರೀದಿ ಕೇಂದ್ರ ವೇದಿಕೆ ಕಾರ್ಯಕ್ರಮದಲ್ಲಿ ಸಚಿವೆ ಶೋಭಾ ಕರಂದ್ಲಾಜೆ ಭಾಷಣ ಮಾಡುತ್ತಿದ್ದ ವೇಳೆ ಸಂಸದ ಜಿಎಸ್ ಬಸವರಾಜ್(GS Basavaraj) ಅವರು ಗಡದ್ ನಿದ್ದೆಗೆ ಜಾರಿದ ಘಟನೆ ನಡೆದಿದೆ.
ತುಮಕೂರು, ಜ.24: ತುಮಕೂರಿನ(Tumakuru) ಎಪಿಎಮ್ಸಿ ಆವರಣದಲ್ಲಿ ಹಮ್ಮಿಕೊಂಡಿದ್ದ ಕೊಬ್ಬರಿ ಉಂಡೆ ಖರೀದಿ ಕೇಂದ್ರ ವೇದಿಕೆ ಕಾರ್ಯಕ್ರಮದಲ್ಲಿ ಸಚಿವೆ ಶೋಭಾ ಕರಂದ್ಲಾಜೆ ಭಾಷಣ ಮಾಡುತ್ತಿದ್ದ ವೇಳೆ ಸಂಸದ ಜಿಎಸ್ ಬಸವರಾಜ್(GS Basavaraj) ಅವರು ಗಡದ್ ನಿದ್ದೆಗೆ ಜಾರಿದ ಘಟನೆ ನಡೆದಿದೆ. ಕಾರ್ಯಕ್ರಮದಲ್ಲಿ ರೈತರಿಗೆ ನಿರಂತರವಾಗಿ ಸಮಸ್ಯೆ ಇದೆ. ಸರಿಯಾದ ಸಮಯದಲ್ಲಿ ಮಳೆ ಬೆಳೆ ಬರಲ್ಲ, ಇದನ್ನ ಶತಮಾನಗಳಿಂದ ರೈತರು ಅನುಭವಿಸಿಕೊಂಡು ಬಂದಿದ್ದಾರೆ. ಸಣ್ಣ- ಮಧ್ಯಮ ರೈತರು ದೇಶದಲ್ಲಿ 80% ಹೆಚ್ಚು ಇದ್ದಾರೆ. ಜೊತೆಗೆ ನಮ್ಮದು ಮಳೆಯಾಧಾರಿತ ದೇಶ, ನಮಗೆ ಇನ್ನೂ ನೀರಾವರಿ ನೀಡಲು ಆಗ್ತಿಲ್ಲ. ಆ ನೀರನ್ನ ಸದುಪಯೋಗ ಕೂಡ ಮಾಡಿಕೊಂಡಿಲ್ಲ ಎಂದು ರೈತರ ಸಮಸ್ಯೆ ಕುರಿತು ಮಾತನಾಡುತ್ತಿದ್ದರು. ಈ ವೇಳೆ ಘಟನೆ ನಡೆದಿದೆ.
ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ
