ಗದಗ: ಸಾರಿಗೆ ಸಂಸ್ಥೆ ಬಸ್ ಚಾಲಕನ ಕನ್ನಡ ಪ್ರೇಮ; ಇಡೀ ಬಸ್ಸಿಗೆ ಕೆಂಪು, ಹಳದಿ ಹೂವಿನ ಶೃಂಗಾರ

Updated on: Nov 01, 2025 | 3:07 PM

ಗದಗ KSRTC ಡಿಪೋ ಚಾಲಕ ವೀರಣ್ಣ ಮೇಟಿ ಅವರ ಕನ್ನಡ ಪ್ರೇಮ ಅನನ್ಯ. ತಮ್ಮ ಸ್ವಂತ ಖರ್ಚಿನಲ್ಲಿ ಬಸ್ ಅನ್ನು ಸಂಪೂರ್ಣ ಕನ್ನಡಮಯಗೊಳಿಸಿ, ಭುವನೇಶ್ವರಿ ಮೂರ್ತಿ, ಕೆಂಪು-ಹಳದಿ ಹೂವುಗಳಿಂದ ಶೃಂಗರಿಸುತ್ತಾರೆ. ನಿರಂತರವಾಗಿ ಕನ್ನಡ ಗೀತೆಗಳನ್ನು ನುಡಿಸುವ ಮೂಲಕ ಪ್ರಯಾಣಿಕರಿಗೆ ಕನ್ನಡ ಸಂಸ್ಕೃತಿಯ ಪರಿಚಯ ಮಾಡಿಸುತ್ತಾರೆ. ಇವರ ಈ ಕನ್ನಡ ಸೇವೆಗೆ ಪ್ರಯಾಣಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಗದಗ,ನವೆಂಬರ್ 1: ಜಿಲ್ಲೆಯ ಮುಂಡರಗಿ ಮೂಲದ ಕೆಎಸ್‌ಆರ್‌ಟಿಸಿ ಚಾಲಕ ವೀರಣ್ಣ ಮೇಟಿ ಅವರ ಕನ್ನಡ ಪ್ರೇಮ ಎಲ್ಲರ ಗಮನ ಸೆಳೆದಿದೆ. ರಾಜ್ಯೋತ್ಸವದ ಸಂಭ್ರಮದಲ್ಲಿ ತಮ್ಮ ಸರ್ಕಾರಿ ಬಸ್ಸನ್ನು ಸಂಪೂರ್ಣಅಲಂಕರಿಸಿರುವ ಅವರು, ಬಸ್ ಮುಂಭಾಗದಲ್ಲಿ ಭುವನೇಶ್ವರಿ ಮೂರ್ತಿಯನ್ನು ಅಳವಡಿಸಿ, ಕೆಂಪು-ಹಳದಿ ಹೂವುಗಳಿಂದ ಶೃಂಗಾರ ಮಾಡಿದ್ದಾರೆ. ಬಸ್‌ನಲ್ಲಿ ಕನ್ನಡ ಗೀತೆಗಳ ಸದ್ದು, ಪ್ರಯಾಣಿಕರಿಗೆ ವಿಭಿನ್ನ ಅನುಭವ. “ಕನ್ನಡ ಉಳಿಸಲು, ಬೆಳೆಸಲು, ಕನ್ನಡಾಂಬೆಗಾಗಿ ನನ್ನ ಸೇವೆ” ಎಂದು ಹೇಳುವ ಮೇಟಿ, ಸ್ವಂತ ಖರ್ಚಿನಲ್ಲಿ ಹಾಗೂ ಸ್ನೇಹಿತರ ಸಹಕಾರದಿಂದ ವರ್ಷಗಳಿಂದ ಇಂತಹ ಕನ್ನಡ ಸಂಭ್ರಮ ಆಚರಿಸುತ್ತಿದ್ದಾರೆ. ಪ್ರಯಾಣಿಕರು ಅವರ ಕನ್ನಡ ಪ್ರೀತಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.