ಕುಜ-ರಾಹು ಸಂಯೋಗ ರಾಶಿಫಲ: ವೃಶ್ಚಿಕ ರಾಶಿಯವರು ಚಿಕ್ಕಪುಟ್ಟ ವಿಷಯಗಳಿಗೆ ತಲೆಕೆಡಿಸಿಕೊಳ್ಳದೆ ತಾಳ್ಮೆಯಿಂದಿರಬೇಕು
ಕುಜ-ರಾಹು ಸಂಯೋಗ ರಾಶಿಫಲ: ಅನಿರೀಕ್ಷಿತ ಧನಲಾಭವಾಗುವ ಸಾಧ್ಯತೆ ಇದೆ. ಈ ರಾಶಿಯವರು ಆರೋಗ್ಯದ ಕಡೆ ಹೆಚ್ಚು ಗಮನ ನೀಡಬೇಕು. ಕೆಂಪು ಚಂದನ ಧಾರಣೆ ಮಾಡಿಕೊಳ್ಳುವುದು ಮತ್ತು ಸುಬ್ರಹ್ಮಣ್ಯನ ದರ್ಶನ ಮಾಡಿಕೊಳ್ಳುವುದು ಉತ್ತಮ. ಜೊತೆಗೆ ಓಂ ದುಷ್ಟಾಯ ನಮಃ ಜಪ ಮಾಡಿಕೊಳ್ಳಬೇಕು.
ಬೆಂಗಳೂರು: ಕುಜ-ರಾಹು ಸಂಯೋಗ ರಾಶಿಫಲ ಮತ್ತು ನಕ್ಷತ್ರಗಳ ಚಲನೆಯನ್ನು ಆಧರಿಸಿದ್ದು, ಪ್ರತಿಯೊಂದು ರಾಶಿ ತನ್ನದೇ ಆದ ಮಹತ್ವವನ್ನು ಹೊಂದಿದೆ. ಗ್ರಹಗಳು ಮತ್ತು ನಕ್ಷತ್ರಗಳ ಜೊತೆಗೆ ಪಂಚಾಂಗದ ಲೆಕ್ಕಾಚಾರಗಳನ್ನು ಖ್ಯಾತ ಜ್ಯೋತಿಷಿ ಡಾ ಬಸವರಾಜ ಗುರೂಜಿ ಇಲ್ಲಿ ವಿಶ್ಲೇಷಿಸಿದ್ದಾರೆ. ಮೇ 15 ರಿಂದ ಜೂನ್ 1 ರವರೆಗೆ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಮೊದಲಾದ ಮಾಹಿತಿ ಇಲ್ಲಿದೆ.
ವೃಶ್ಚಿಕ: ಈ ರಾಶಿಯವರಿಗೆ ಚಂಡಾಲಯೋಗ ಇರೋದ್ರಿಂದ ಮಕ್ಕಳ ಜೊತೆ ಕಲಹಗಳು ಏರ್ಪಡಲಿವೆ. ಆದರೆ ಸಣ್ಣಪುಟ್ಟ ವಿಷಯಗಳಿಗೆ ತಲೆಕೆಡಿಸಿಕೊಳ್ಳದೆ ಕೋಪ ಮಾಡಿಕೊಳ್ಳದೆ ತಾಳ್ಮೆಯಿಂದಿರಬೇಕು. ಪ್ರೇಮ ವ್ಯವಹಾರದಲ್ಲಿ ಸಮಸ್ಯೆಗಳು ಎದುರಾಗಲಿವೆ ಮದುವೆಗಳು ಮುಂದೂಡಲ್ಪಡಬಹುದು. ಇನ್ನೂ 15 ದಿನಗಳ ಕಾಲ ಆಸ್ತಿ ಮತ್ತು ವೈವಾಹಿಕ ಸಂಬಂಧಗಳಲ್ಲಿ ತೊಂದರೆ ಕಾಣಬಹುದು, ನಂತರ ಎಲ್ಲ ಸರಿಹೋಗುತ್ತದೆ. ಆತುರದ ನಿರ್ಧಾರಗಳ ಮೇಲೆ ಕಡಿವಾಣವಿರಲಿ, ಹೂಡಿಕೆಯಿಂದ ಲಾಭವಾಗಬಹುದು. ಅನಿರೀಕ್ಷಿತ ಧನಲಾಭವಾಗುವ ಸಾಧ್ಯತೆ ಇದೆ. ಈ ರಾಶಿಯವರು ಆರೋಗ್ಯದ ಕಡೆ ಹೆಚ್ಚು ಗಮನ ನೀಡಬೇಕು. ಕೆಂಪು ಚಂದನ ಧಾರಣೆ ಮಾಡಿಕೊಳ್ಳುವುದು ಮತ್ತು ಸುಬ್ರಹ್ಮಣ್ಯನ ದರ್ಶನ ಮಾಡಿಕೊಳ್ಳುವುದು ಉತ್ತಮ. ಜೊತೆಗೆ ಓಂ ದುಷ್ಟಾಯ ನಮಃ ಜಪ ಮಾಡಿಕೊಳ್ಳಬೇಕು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: Isha Arora: ಕರ್ತವ್ಯ ದಕ್ಷತೆ ಮೆರೆದ ಇಶಾ, ಇವರ ಕೆಲಸಕ್ಕೆ ಮತದಾರರೇ ಫಿದಾ