Cancer Horoscope: ಅಂಗಾರಕ ಯೋಗ ಸಂಯೋಗ; ಕರ್ಕಾಟಕ ರಾಶಿಗೆ ಗುರುಬಲ
ಮೇ 15 ರಿಂದ ಜೂನ್ 1 ರವರೆಗೆ ಕುಜ ಮತ್ತು ರಾಹು ಎರಡು ಗ್ರಹಗಳು ಮೀನ ರಾಶಿಯಲ್ಲಿ ಸಂಚಾರ ನಡೆಸಲಿದೆ. ರಾಹು- ಕುಜನ ಸಂಯೋಗವನ್ನು ಅಂಗಾರಕ ಯೋಗ ಎಂದು ಕರೆಯಲಾಗುತ್ತದೆ. ಅಂಗಾರಕ ಯೋಗದ ಪ್ರಭಾವವು ಕರ್ಕಾಟಕ ರಾಶಿಯ ಮೇಲೆ ಹೇಗೆ ಪ್ರಭಾವ ಬೀರಲಿದೆ, ಶುಭ, ಅಶುಭ? ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಮಾಹಿತಿ ಇಲ್ಲಿದೆ.
ಈ ವರ್ಷ (2024) ಮೇ ತಿಂಗಳ ಪೂರ್ತಿ ಕುಜ ಮತ್ತು ರಾಹು ಎರಡು ಗ್ರಹಗಳು ಮೀನ ರಾಶಿಯಲ್ಲಿ ಸಂಚಾರ ಮಾಡುತ್ತಿವೆ. ರಾಹು ಕುಜನ ಸಂಯೋಗವನ್ನು ಅಂಗಾರಕ ಯೋಗ ಎಂದು ಕರೆಯಲಾಗುತ್ತದೆ. ಮೇ 15 ರಿಂದ ಜೂನ್ 1 ರವರೆಗೆ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ?. ಈ ಅಂಗಾರಕ ಯೋಗ ಒಂದು ತಿಂಗಳ ವರೆಗೆ ದ್ವಾದಶ ರಾಶಿಗಳ ಮೇಲೆ ಹೇಗೆ ಪ್ರಭಾವ ಬೀರಲಿದೆ ಎಂಬ ಬಗ್ಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ ಬಸವರಾಜ ಗುರೂಜಿ ಮಾಹಿತಿ ನೀಡಿದ್ದಾರೆ. ಅಂಗಾರಕ ಯೋಗದ ಪ್ರಭಾವವು ಕರ್ಕಾಟಕ ರಾಶಿಯ ಮೇಲೆ ಹೇಗೆ ಪ್ರಭಾವ ಬೀರಲಿದೆ ಎಂದು ನೋಡುವುದಾದರೆ ವಿದೇಶ ಪ್ರಯಾಣ, ಹೆಚ್ಚು ಸುತ್ತಾಟ ಇರಲಿದೆ. ಗುರುಬಲ ಇರುವುದರಿಂದ ಅಣ್ಣ ತಮ್ಮಂದಿರ ಜೊತೆ ಒಳ್ಳೆ ಬಾಂಧವ್ಯ ಇರಲಿದೆ. ಉದ್ಯೋಗದಲ್ಲಿ ಶುಭ ಫಲ. ಕೈಗೆ ಕೆಂಪು ದಾರ ಕಟ್ಟುವುದು ಒಳ್ಳೆಯದು. ಇದರೊಂದಿಗೆ ಲಲಿತ ಸಹಸ್ರನಾಮ ಜಪಿಸುವುದರಿಂದ ಶುಭ ಫಲ ದೊರೆಯಲಿದೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: Health Care Tips in Kannada : ಮೊಣಕಾಲುಗಳ ನಡುವೆ ದಿಂಬು ಇಟ್ಟು ಮಲಗ್ತೀರಾ?ಆರೋಗ್ಯ ಲಾಭಗಳನ್ನು ತಿಳಿದುಕೊಳ್ಳಿ