Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕುಜ-ರಾಹು ಸಂಯೋಗ ರಾಶಿಫಲ: ಮಿಥುನ ರಾಶಿಯವರಿಗೆ ಉದ್ಯೋಗದಲ್ಲಿ ಕೆಲ ಮಾರ್ಪಾಟುಗಳು

ಕುಜ-ರಾಹು ಸಂಯೋಗ ರಾಶಿಫಲ: ಮಿಥುನ ರಾಶಿಯವರಿಗೆ ಉದ್ಯೋಗದಲ್ಲಿ ಕೆಲ ಮಾರ್ಪಾಟುಗಳು

ಅರುಣ್​ ಕುಮಾರ್​ ಬೆಳ್ಳಿ
|

Updated on:May 15, 2024 | 1:17 PM

ಕುಜ-ರಾಹು ಸಂಯೋಗ ರಾಶಿಫಲ: ಆತ್ಮಸ್ಥೈರ್ಯ ಕಳೆದುಕೊಂಡು ಕೆಲಸಕ್ಕೆ ರಾಜೀನಾಮೆ ಸಲ್ಲಿಸುವ ದುಸ್ಸಾಹಸ ಬೇಡ. ರೈತರಿಗೆ ಮತ್ತು ವಿದ್ಯಾರ್ಥಿಗಳಿಗೆ ಒಳ್ಳೆಯದಾಗಲಿದೆ. ಮಂಗಳವಾರದಂದು ಸುಬ್ರಹ್ಮಣ್ಯನ ದರ್ಶನ ಮಾಡಿಕೊಳ್ಳುವುದು ಮತ್ತು ಹಳದಿಪುಷ್ಟಗಳಿಂದ ಆರಾಧನೆ ಮಾಡುವುದು ಒಳ್ಳೆಯದು.

ಬೆಂಗಳೂರು: ಕುಜ-ರಾಹು ಸಂಯೋಗ ರಾಶಿಫಲ ಮತ್ತು ನಕ್ಷತ್ರಗಳ ಚಲನೆಯನ್ನು ಆಧರಿಸಿದ್ದು, ಪ್ರತಿಯೊಂದು ರಾಶಿ ತನ್ನದೇ ಆದ ಮಹತ್ವವನ್ನು ಹೊಂದಿದೆ. ಗ್ರಹಗಳು ಮತ್ತು ನಕ್ಷತ್ರಗಳ ಜೊತೆಗೆ ಪಂಚಾಂಗದ ಲೆಕ್ಕಾಚಾರಗಳನ್ನು ಖ್ಯಾತ ಜ್ಯೋತಿಷಿ ಡಾಬಸವರಾಜ ಗುರೂಜಿ ಇಲ್ಲಿ ವಿಶ್ಲೇಷಿಸಿದ್ದಾರೆ. ಮೇ 15 ರಿಂದ ಜೂನ್ 1 ರವರೆಗೆ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಮೊದಲಾದ ಮಾಹಿತಿ ಇಲ್ಲಿದೆ.

ಮಿಥುನ ರಾಶಿ: ಈ ರಾಶಿಯವರಿಗೆ ಉದ್ಯೋಗದಲ್ಲಿ ಕೊಂಚ ಏರುಪೇರಾಗುವ ಸಾಧ್ಯತೆ ಇರುತ್ತದೆ ಮತ್ತು ಉದ್ಯೋಗದಲ್ಲಿ ಕೆಲ ಮಾರ್ಪಾಟುಗಳು ಅಗಬಹುದು. ಆದರೆ ಯಾವ ಕಾರಣಕ್ಕೂ ಆತ್ಮಸ್ಥೈರ್ಯ ಕಳೆದುಕೊಳ್ಳಬಾರದು. ಮನೆ ಕಟ್ಟುವ ಕಾರ್ಯ ವಿಳಂಬಗೊಳ್ಳಲಿದೆ, ತಾಯಿಯ ಆರೋಗ್ಯದಲ್ಲಿ ಕೊಂಚ ಏರುಪೇರಾಗಲಿದೆ ಮಕ್ಕಳ ಜೊತೆ ಕಲಹಗಳೂ ನಡೆಯಬಹುದು. ಆತ್ಮಸ್ಥೈರ್ಯ ಕಳೆದುಕೊಂಡು ಕೆಲಸಕ್ಕೆ ರಾಜೀನಾಮೆ ಸಲ್ಲಿಸುವ ದುಸ್ಸಾಹಸ ಬೇಡ. ರೈತರಿಗೆ ಮತ್ತು ವಿದ್ಯಾರ್ಥಿಗಳಿಗೆ ಒಳ್ಳೆಯದಾಗಲಿದೆ. ಮಂಗಳವಾರದಂದು ಸುಬ್ರಹ್ಮಣ್ಯನ ದರ್ಶನ ಮಾಡಿಕೊಳ್ಳುವುದು ಮತ್ತು ಹಳದಿಪುಷ್ಟಗಳಿಂದ ಆರಾಧನೆ ಮಾಡುವುದು ಒಳ್ಳೆಯದು. ಉಪವಾಸ ವ್ರತ ಅಚರಿಸಿದರೆ ಎಲ್ಲ ಒಳ್ಳೆಯದಾಗುತ್ತದೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   Health Care Tips in Kannada : ಮೊಣಕಾಲುಗಳ ನಡುವೆ ದಿಂಬು ಇಟ್ಟು ಮಲಗ್ತೀರಾ?ಆರೋಗ್ಯ ಲಾಭಗಳನ್ನು ತಿಳಿದುಕೊಳ್ಳಿ

Published on: May 15, 2024 12:12 PM