Health Care Tips in Kannada : ಮೊಣಕಾಲುಗಳ ನಡುವೆ ದಿಂಬು ಇಟ್ಟು ಮಲಗ್ತೀರಾ?ಆರೋಗ್ಯ ಲಾಭಗಳನ್ನು ತಿಳಿದುಕೊಳ್ಳಿ
ಇತ್ತೀಚೆಗಿನ ದಿನ ಗಳಲ್ಲಿ ಜೀವನ ಶೈಲಿ, ಆಹಾರ ಪದ್ಧತಿ ಹಾಗೂ ಒತ್ತಡದ ಜೀವನದಿಂದ ನಿದ್ರಾಹೀನತೆ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಆದರೆ ದೈಹಿಕ ಹಾಗೂ ಮಾನಸಿಕ ಆರೋಗ್ಯವಂತರಾಗಿರಬೇಕಾದ್ರೆ ಕನಿಷ್ಠ ದಿನಕ್ಕೆ ಏಳರಿಂದ ಎಂಟು ಗಂಟೆ ನಿದ್ದೆ ಅವಶ್ಯಕವಾಗಿ ಮಾಡಬೇಕಾಗುತ್ತದೆ. ಕೆಲವರು ಹಾಸಿಗೆ ಬಿದ್ದ ಕೂಡಲೇ ಕಣ್ಣಿಗೆ ನಿದ್ದೆ ಹತ್ತಲು ವಿವಿಧ ಭಂಗಿಯಲ್ಲಿ ಮಲಗುತ್ತಾರೆ. ಹೆಚ್ಚಿನವರಿಗೆ ಮೊಣಕಾಲಿನ ನಡುವೆ ತಲೆದಿಂಬು ಇಟ್ಟು ಮಲಗುವ ಅಭ್ಯಾಸವಿರುತ್ತದೆ. ಹೀಗೆ ಮಲಗುವುದರಿಂದ ಹಲವು ಆರೋಗ್ಯ ಸಮಸ್ಯೆಗಳಿಂದ ಪಾರಾಗಬಹುದು.
ಒಬ್ಬರಿಗಿಂತ ಮತ್ತೊಬ್ಬರ ನಿದ್ದೆ ಮಾಡುವ ಭಂಗಿಯು ಭಿನ್ನವಾಗಿರುತ್ತದೆ. ಹಾಸಿಗೆ ನೋಡಿದ ಕೂಡಲೇ ಕೆಲವರಿಗೆ ನಿದ್ದೆ ಬಂದು ಬಿಡುತ್ತದೆ. ಆದರೆ, ಈ ನಿದ್ದೆ ಮಾಡುವ ಭಂಗಿಯು ಹಲವಾರು ಆರೋಗ್ಯ ಸಮಸ್ಯೆಗಳನ್ನು ತಂದೊಡ್ಡಬಲ್ಲದು. ಕೆಲವು ನಿದ್ದೆಯ ಭಂಗಿಯಿಂದ ಸಮಸ್ಯೆಗಳು ದೂರ ಹೋಗುತ್ತವೆ. ಕೆಲವರಿಗೆ ಮೊಣಕಾಲುಗಳ ನಡುವೆ ದಿಂಬನ್ನು ಇಟ್ಟುಕೊಂಡು ಮಲಗುವ ಅಭ್ಯಾಸವಿರುತ್ತದೆ. ಹೀಗೆ ಮಲಗಿದರೆ ನಿಮಗೂ ನಿದ್ದೆ ಬರುತ್ತದೆ. ಆದರೆ ಇದು ಒಳ್ಳೆಯ ಅಭ್ಯಾಸವಲ್ಲ ಎಂದು ಕೆಲವರು ಹೇಳುತ್ತಾರೆ. ಆದರೆ ಇದರಿಂದ ಹಲವಾರು ಆರೋಗ್ಯ ಲಾಭಗಳಿವೆ.
ಮೊಣಕಾಲುಗಳ ನಡುವೆ ದಿಂಬು ಇಟ್ಟು ಮಲಗುವುದರಿಂದ ಆಗುವ ಪ್ರಯೋಜನಗಳು:
- ಮಂಡಿಗಳ ನಡುವೆ ತಲೆ ಇಟ್ಟು ಮಲಗುವುದರಿಂದ ಸ್ನಾಯು ಸೆಳೆತ ಕಡಿಮೆಯಾಗುತ್ತದೆ. ದೇಹದ ಎಲ್ಲಾ ಭಾಗಗಳಿಗೂ ರಕ್ತ ಸಂಚಾರವಾಗುತ್ತದೆ.
- ಮೊಣಕಾಲುಗಳ ನಡುವೆ ತಲೆದಿಂಬು ಇಟ್ಟುಕೊಂಡು ಮಲಗಿದರೆ ಆರಾಮವಾಗಿ ನಿದ್ರಿಸಲು ಸಾಧ್ಯ. ಹೀಗೆ ಮಲಗುವುದರಿಂದ ನಿದ್ರಾಹೀನತೆ ಸಮಸ್ಯೆಯಿಂದ ಹೊರ ಬರಲು ಸಾಧ್ಯ.
- ಮೊಣಕಾಲುಗಳ ನಡುವೆ ತಲೆದಿಂಬು ಇಟ್ಟುಕೊಂಡು ಮಲಗುವುದರಿಂದ ನರಗಳ ಸಮಸ್ಯೆಯೂ ದೂರವಾಗುತ್ತದೆ.
- ಗರ್ಭಿಣಿಯರು ಎಡಬದಿಯಲ್ಲಿ ಮಲಗುವುದು ಹಾಗೂ ಮೊಣಕಾಲುಗಳ ನಡುವೆ ತಲೆದಿಂಬು ಇಟ್ಟು ಮಲಗುವ ಅಭ್ಯಾಸವು ಹುಟ್ಟುವ ಮಗುವಿಗೆ ತುಂಬಾ ಒಳ್ಳೆಯದಂತೆ. ರಕ್ತ ಪರಿಚಲನೆಯು ಸರಿಯಾಗಿಯಾದರೆ ನೋವುಗಳು ಇದ್ದಲ್ಲಿ ಕಡಿಮೆಯಾಗುತ್ತವೆ. ಬೆನ್ನುಮೂಳೆಯ ಸಮಸ್ಯೆಯು ಕಾಡುವುದಿಲ್ಲ.
ಮತ್ತಷ್ಟು ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 2:37 pm, Tue, 14 May 24