Beauty Tips in Kannada : ನಿಮ್ಮ ಹುಬ್ಬುಗಳು ಆಕರ್ಷಕವಾಗಿ ಕಾಣಬೇಕೇ? ಇಲ್ಲಿದೆ ಸರಳ ಮನೆಮದ್ದು
ಈ ಹುಬ್ಬುಗಳ ಸ್ವಚ್ಛತೆಯ ಜೊತೆಗೆ ಅವುಗಳ ಆರೈಕೆಯನ್ನು ಮಾಡಿದರೆ ನಿಮ್ಮ ಮುಖದ ಸೌಂದರ್ಯವು ಹುಬ್ಬುಗಳಿಂದ ದುಪ್ಪಟ್ಟಾಗುತ್ತದೆ. ಹೀಗಾಗಿ ಈ ಕೆಲವು ಸಲಹೆಗಳನ್ನು ಅನುಸರಿಸಿದರೆ ಹುಬ್ಬುಗಳನ್ನು ಕಾಪಾಡಿಕೊಳ್ಳಬಹುದು.
ಎಲ್ಲರ ಹುಬ್ಬುಗಳು ಒಂದೇ ರೀತಿ ಇರುವುದಿಲ್ಲ. ಕೆಲವರು ದಟ್ಟವಾದ ಹುಬ್ಬನ್ನು ಹೊಂದಿದ್ದರೆ, ಇನ್ನು ಕೆಲವರು ತೆಳುವಾದ ಹುಬ್ಬನ್ನು ಹೊಂದಿರುತ್ತಾರೆ. ಆದರೆ ಹೆಚ್ಚಿನ ಮಹಿಳೆಯರು ದಟ್ಟವಾದ ಹುಬ್ಬು ಇರಬೇಕು ಎಂದು ಬಯಸುತ್ತಾರೆ. ಹೀಗಾಗಿ ಮಾರುಕಟ್ಟೆಯಲ್ಲಿ ಸಿಗುವ ಹಲವಾರು ಉತ್ಪನ್ನಗಳನ್ನು ಬಳಸುತ್ತಾರೆ. ಆದರೆ ಮನೆಯಲ್ಲಿರುವ ನೈಸರ್ಗಿಕವಾಗಿರುವ ವಸ್ತುಗಳಿಂದ ಕಣ್ಣು ರೆಪ್ಪೆ ಹಾಗೂ ಹುಬ್ಬಿನ ಅಂದವನ್ನು ಹೆಚ್ಚಿಸಬಹುದು.
ಮುಖದ ಸೌಂದರ್ಯಕ್ಕೆ ಗಮನ ಕೊಡುವಷ್ಟು ಹುಬ್ಬುಗಳ ಬಗ್ಗೆ ಗಮನ ಹರಿಸುವುದೇ ಇಲ್ಲ. ಕೆಲವರ ಹುಬ್ಬುಗಳು ದಟ್ಟವಾಗಿ ಬೆಳೆದು ಮುಖದ ಅಂದವನ್ನು ಹಾಳು ಮಾಡುತ್ತವೆ. ಈ ಹುಬ್ಬುಗಳ ಸ್ವಚ್ಛತೆಯ ಜೊತೆಗೆ ಅವುಗಳ ಆರೈಕೆಯನ್ನು ಮಾಡಿದರೆ ನಿಮ್ಮ ಮುಖದ ಸೌಂದರ್ಯವು ಹುಬ್ಬುಗಳಿಂದ ದುಪ್ಪಟ್ಟಾಗುತ್ತದೆ. ಹೀಗಾಗಿ ಈ ಕೆಲವು ಸಲಹೆಗಳನ್ನು ಅನುಸರಿಸಿದರೆ ಹುಬ್ಬುಗಳನ್ನು ಕಾಪಾಡಿಕೊಳ್ಳಬಹುದು.
- ಹತ್ತಿಯ ಸಹಾಯದಿಂದ ಹುಬ್ಬುಗಳನ್ನು ಹಸಿ ಹಾಲಿನಿಂದ ಸ್ವಚ್ಛಗೊಳಿಸಿ. ನಂತರದಲ್ಲಿ ತಣ್ಣನೆಯ ನೀರಿನಿಂದ ಮುಖವನ್ನು ತೊಳೆಯುವುದು ಹುಬ್ಬುಗಳು ಸ್ವಚ್ಛವಾಗುತ್ತವೆ.
- ದಿನನಿತ್ಯ ಹುಬ್ಬುಗಳ ಮೇಲೆ ಹರಳೆಣ್ಣೆಯನ್ನು ಹಚ್ಚುತ್ತಾ ಬರುವುದರಿಂದ ದಟ್ಟವಾಗಿ ಬೆಳೆಯುತ್ತವೆ.
- ಮೊಟ್ಟೆಯ ಹಳದಿ ಭಾಗವನ್ನು ಹುಬ್ಬುಗಳಿಗೆ ಹಚ್ಚಿ 20 ನಿಮಿಷಗಳ ಬಳಿಕ ಉಗುರು ಬೆಚ್ಚಗಿನ ನೀರಿನಿಂದ ತೊಳೆಯಬೇಕು.
- ಮೆಂತೆ ಬೀಜಗಳನ್ನು ಪುಡಿ ಮಾಡಿ ಪೇಸ್ಟ್ ತಯಾರಿಸಿ ಹುಬ್ಬುಗಳ ಮೇಲೆ ಹಚ್ಚಿ ಅರ್ಧ ಗಂಟೆ ಬಳಿಕ ಸ್ವಚ್ಛವಾದ ನೀರಿನಿಂದ ತೊಳೆಯುವುದರಿಂದ ಹುಬ್ಬು ದಟ್ಟವಾಗಿ ಬೆಳೆಯುತ್ತದೆ.
- ದಿನಾಲೂ ತೆಂಗಿನ ಎಣ್ಣೆಯನ್ನು ಹಚ್ಚಿಕೊಳ್ಳುವುದರಿಂದಲೂ ಹುಬ್ಬಿನ ಆರೈಕೆ ಮಾಡಬಹುದು.
ಮತ್ತಷ್ಟು ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ