World Family Day 2024 : ವಿಶ್ವ ಕುಟುಂಬ ದಿನ; ತುಂಬಿದ ಮನೆ ಸ್ವರ್ಗಕ್ಕಿಂತಲೂ ಮಿಗಿಲು

ಪ್ರತಿವರ್ಷ ಮೇ 15 ರಂದು ವಿಶ್ವ ಕುಟುಂಬ ದಿನವಾಗಿ ಆಚರಿಸಲಾಗುತ್ತದೆ. ತಮ್ಮ ಅಸ್ತಿತ್ವವನ್ನು ತಿಳಿಸಿಕೊಡುವ ಕುಟುಂಬವನ್ನು ಪ್ರೀತಿಸಬೇಕು. ಕುಟುಂಬಗಳ ಮೌಲ್ಯದ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಅಭಿವೃದ್ಧಿಯಲ್ಲಿ ಅಂತರಾಷ್ಟ್ರೀಯ ಸಮುದಾಯದ ಪಾತ್ರವನ್ನು ಎತ್ತಿತೋರಿಸುವ ಉದ್ದೇಶವು ಈ ದಿನವು ಹೊಂದಿದೆ. ಹಾಗಾದ್ರೆ ಈ ದಿನವು ಆರಂಭವಾಗಿದ್ದು ಯಾವಾಗ ಎನ್ನುವುದರ ಸಂಪೂರ್ಣ ಮಾಹಿತಿ ಇಲ್ಲಿದೆ.

World Family Day  2024 : ವಿಶ್ವ ಕುಟುಂಬ ದಿನ; ತುಂಬಿದ ಮನೆ ಸ್ವರ್ಗಕ್ಕಿಂತಲೂ ಮಿಗಿಲು
World Family Day 2024
Follow us
ಸಾಯಿನಂದಾ
| Updated By: ಅಕ್ಷತಾ ವರ್ಕಾಡಿ

Updated on: May 14, 2024 | 4:34 PM

‘ವಸುಧೈವ ಕುಟುಂಬಕಂ’ ಎನ್ನುವ ಮಾತಿನಂತೆ ಇಡೀ ವಿಶ್ವವೇ ನಮ್ಮ ಕುಟುಂಬ.ಈ ಕುಟುಂಬದ ಮಹತ್ವವನ್ನು ಸಾರುತ್ತದೆ. ಅದಲ್ಲದೇ, ಮನೆಯೇ ಮೊದಲ ಪಾಠ ಶಾಲೆ ಎನ್ನುವ ಮಾತಿದೆ. ಕುಟುಂಬದಿಂದಲೇ ಒಬ್ಬ ವ್ಯಕ್ತಿಯು ಸಂಸ್ಕಾರ, ಪ್ರೀತಿ, ಹೊಂದಾಣಿಕೆಯನ್ನು ಕಲಿಯುತ್ತಾನೆ. ಶಿಕ್ಷಣಕ್ಕಿಂತ ಈ ಕೆಲವು ಪಾಠಗಳು ವ್ಯಕ್ತಿಯ ಸುತ್ತಮುತ್ತಲಿನ ಸಂಬಂಧಗಳಿಂದ ಆರಂಭವಾಗುತ್ತದೆ. ಈ ಸಂಬಂಧಗಳ ಜೊತೆಯಲ್ಲಿ ಒಂದೇ ಸೂರಿನಲ್ಲಿ ಬಾಳುವ ಖುಷಿಯೇ ಬೇರೆ. ಇಲ್ಲಿ ನೋವಿರಲಿ, ನಲಿವಿರಲಿ ಕುಟುಂಬದ ಸದಸ್ಯರು ಸದಾ ಜೊತೆಗೆ ಇರುತ್ತಾರೆ. ಆದರೆ ಕಳೆದ ಕೆಲವು ವರ್ಷಗಳಿಂದ ಅವಿಭಕ್ತ ಕುಟುಂಬವನ್ನು ಕಾಣುವುದೇ ಅಪರೂಪ ಎನ್ನುವಂತಾಗಿದೆ. ವಿಭಿಕ್ತ ಕುಟುಂಬಗಳ ಸಂಖ್ಯೆಯು ಹೆಚ್ಚಾಗುತ್ತಿದೆ. ಆದರೆ ಇಡೀ ವಿಶ್ವವೇ ಒಂದು ಕುಟುಂಬ, ಎಲ್ಲರನ್ನು ಒಂದೇ ಭಾವಿಸುತ್ತಾ ಕೂಡಿಕೊಂಡು ಬಾಳಬೇಕು ಎನ್ನುವ ಸದ್ದುದ್ದೇಶವನ್ನು ಈ ದಿನವು ಹೊಂದಿದೆ.

ವಿಶ್ವ ಕುಟುಂಬ ದಿನದ ಇತಿಹಾಸ:

ಪ್ರಪಂಚದಾದಂತ್ಯ ಮೇ 15 ರಂದು ವಿಶ್ವ ಕುಟುಂಬ ದಿನವನ್ನಾಗಿ ಆಚರಿಸಲಾಗುತ್ತದೆ. ವಿಶ್ವ ಸಂಸ್ಥೆ 1993 ರ ಮೇ 15ರಂದು ಜನರಲ್ ಅಸೆಂಬ್ಲಿಯಲ್ಲಿ ಅಂತರಾಷ್ಟ್ರೀಯ ಕುಟುಂಬ ದಿನಾಚರಣೆಯನ್ನು ಆಚರಿಸುವ ಒಂದು ಮಹತ್ವದ ನಿರ್ಧಾರ ತೆಗೆದುಕೊಂಡಿತು. ಅಂದಿನಿಂದ ವಿಶ್ವವಿಡೀ ಪ್ರತಿ ವರ್ಷ ಮೇ 15ನ್ನು ಅಂತರಾಷ್ಟ್ರೀಯ ಕುಟುಂಬ ದಿನಾಚರಣೆಯನ್ನಾಗಿ ಆಚರಿಸುತ್ತ ಬರಲಾಗುತ್ತಿದೆ.

ಇದನ್ನೂ ಓದಿ: ಆವಾಸ ಸ್ಥಾನಗಳ ನಾಶ, ಕಣ್ಮರೆಯತ್ತ ವಲಸೆ ಹಕ್ಕಿಗಳು

ವಿಶ್ವ ಕುಟುಂಬ ದಿನದ ಮಹತ್ವ:

ಕುಟುಂಬದ ಪ್ರೀತಿಯನ್ನು ಅರಿತು, ಇಡೀ ವಿಶ್ವವೇ ನಮ್ಮ ಕುಟುಂಬ ಎಂದು ಭಾವಿಸಬೇಕು. ಕುಟುಂಬಗಳ ಮೌಲ್ಯ ಹಾಗೂ ಮಹತ್ವವನ್ನು ಸಾರುವ ಉದ್ದೇಶವನ್ನು ಈ ದಿನವು ಹೊಂದಿದೆ. ಈ ದಿನದಂದು ಕಾರ್ಯಾಗಾರಗಳು, ವಿಚಾರಗೋಷ್ಠಿಗಳು ಮತ್ತು ಪ್ರದರ್ಶನಗಳನ್ನು ಆಯೋಜಿಸಲಾಗುತ್ತದೆ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ