Viral Video: ಬೆನ್ನಿಗೆ ಬೆಲ್ಟ್, ಮಗನ ಶಿಕ್ಷಣಕ್ಕಾಗಿ ದುಡಿತ, ಇವರೇ ನೋಡಿ ರಿಯಲ್ ಹೀರೋ!
ತಂದೆ ತಾಯಿಯ ತ್ಯಾಗದ ಮುಂದೆ ಮಕ್ಕಳು ವಯಸ್ಸಾದ ಕಾಲದಲ್ಲಿ ಎಷ್ಟು ಚೆನ್ನಾಗಿ ನೋಡಿಕೊಂಡರೂ ಕಡಿಮೆಯೇ. ಕೆಲವು ತಂದೆ ತಾಯಂದಿರು ತಮ್ಮ ಮಕ್ಕಳಿಗೆ ವಯಸ್ಸಾದ ಸಮಯದಲ್ಲಿ ತಾವು ಹೊರೆಯಾಗಬಾರದೆಂದು ದುಡಿದು ತಿನ್ನುತ್ತಾರೆ. ಆದರೆ ಇಲ್ಲೊಬ್ಬ ತಂದೆ ತನ್ನ ಮಗನ ಶಿಕ್ಷಣಕ್ಕಾಗಿ ಬೆನ್ನು ಸ್ವಾಧೀನ ಕಳೆದುಕೊಂಡಿದ್ದರೂ ವಾಹನ ಚಾಲನೆ ಮಾಡಿಕೊಂಡು ಸ್ವಾಭಿಮಾನದಿಂದ ಬದುಕುತ್ತಿರುವುದಕ್ಕೆ ಸಾಕ್ಷಿಯಾಗಿರುವ ವಿಡಿಯೋವೊಂದು ವೈರಲ್ ಆಗಿದ್ದು ನೆಟ್ಟಿಗರ ಗಮನ ಸೆಳೆದಿದೆ.
ಅಮ್ಮ ಒಂಬತ್ತು ತಿಂಗಳು ಹೊತ್ತು ಹೆತ್ತರೆ, ತಂದೆಯು ಜೀವನ ಪರ್ಯಂತ ಮಕ್ಕಳ ಭವಿಷ್ಯಕ್ಕಾಗಿ ದುಡಿಯುತ್ತಾನೆ. ತಾಯಿಯು ಪ್ರೀತಿ, ಮಮತೆಯನ್ನು ಉಣಬಡಿಸಿದರೆ, ತಂದೆಯು ತನ್ನ ಹೆಗಲ ಮೇಲೆ ಕೂರಿಸಿಕೊಂಡು ಪ್ರಪಂಚವನ್ನು ತೋರಿಸುತ್ತಾರೆ. ಆದರೆ ವಾಸ್ತವ ಬದುಕನ್ನು ತೋರಿಸಿದರೂ ಮಕ್ಕಳಿಗೆ ಎಂದಿಗೂ ಕಷ್ಟ ಪಡಬಾರದು ಎಂದು ಬಯಸುತ್ತಾನೆ. ಹೀಗಾಗಿ ರಾತ್ರಿ ಹಗಲೇನ್ನದೆ ತಾನು ದುಡಿದು ಮಕ್ಕಳಿಗೆ ಉತ್ತಮ ಬದುಕನ್ನು ಕಟ್ಟಿಕೊಡುತ್ತಾನೆ. ಮಕ್ಕಳ ಮುಂದೆ ಗಂಭೀರವಾಗಿದ್ದರೂ, ಅಪ್ಪನಿಗೆ ಮಕ್ಕಳ ಮೇಲಿರುವ ಪ್ರೀತಿಯನ್ನು ವಿವರಿಸಲು ಸಾಧ್ಯವಿಲ್ಲ. ಆದರೆ ಇದೀಗ ಅಪ್ಪನ ವಿಶಾಲವಾದ ಮನಸ್ಸು ಹಾಗೂ ಪ್ರೀತಿಯು ಎಂತಹದ್ದು ಎನ್ನುವುದಕ್ಕೆ ಈ ವಿಡಿಯೋವೊಂದು ಸಾಕ್ಷಿಯಾಗಿದೆ.
ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಈ ವಿಡಿಯೋದಲ್ಲಿ ತನ್ನ ಬೆನ್ನೆಲುಬು ಶಕ್ತಿಯನ್ನು ಕಳೆದುಕೊಂಡರೂ ಮಗನ ಶಿಕ್ಷಣಕ್ಕಾಗಿ ರಾತ್ರಿ ಹಗಲೇನ್ನದೆ ವಾಹನ ಚಾಲನೆ ಮಾಡುತ್ತಿರುವುದನ್ನು ನೋಡಬಹುದು. ಈ ವಿಡಿಯೋದಲ್ಲಿ ವ್ಯಕ್ತಿಯನ್ನು ನೋಡಿದರೆ ವಯಸ್ಸಾಗಿರುವುದು ಸ್ಪಷ್ಟವಾಗಿ ಗೊತ್ತಾಗುತ್ತಿದೆ. ಬೆನ್ನಿನ ಭಾಗಕ್ಕೆ ಬೆಲ್ಟ್ ಹಾಕಿಕೊಂಡು ಡ್ರೈವರ್ ಸೀಟ್ ನಲ್ಲಿ ಕುಳಿತುಕೊಂಡಿರುವುದನ್ನು ನೋಡಬಹುದು.
ಇದನ್ನೂ ಓದಿ: ಆಟೋಗೆ ಬಲೂನ್ ಕಟ್ಟಿ ಮಗಳ ಹುಟ್ಟುಹಬ್ಬ ಸಂಭ್ರಮಿಸಿದ ತಂದೆ
ವಿಡಿಯೋ ಮಾಡುತ್ತಿರುವ ವ್ಯಕ್ತಿಯು ಸೆಲ್ಯೂಟ್ ಎನ್ನುತ್ತಿದ್ದಂತೆ ವಯಸ್ಸಾದ ವ್ಯಕ್ತಿಯು ಕೈ ಎತ್ತಿ ಸೆಲ್ಯೂಟ್ ಹೊಡೆದು ಕೈಕುಲುಕಿದ್ದಾರೆ. ಈ ವಿಡಿಯೋವೊಂದು ವೈರಲ್ ಆಗಿದ್ದು ನೆಟ್ಟಿಗರು ಈ ವಿಡಿಯೋವನ್ನು ಮೆಚ್ಚಿಕೊಂಡಿದ್ದಾರೆ. ಈ ವಿಡಿಯೋ ನಲವತ್ತೈದು ಸಾವಿರಕ್ಕೂ ಅಧಿಕ ವೀಕ್ಷಣೆ ಕಂಡಿದ್ದು, ಮೆಚ್ಚುಗೆಯ ಸುರಿಮಳೆಯೇ ಬಂದಿದೆ. ಬಳಕೆದಾರರೊಬ್ಬರು, ‘ಅದ್ಭುತ ಸರ್, ನಿಮ್ಮಂತಹ ತಂದೆಯನ್ನು ಪಡೆದ ಮಕ್ಕಳು ಪುಣ್ಯವಂತರು’ ಎಂದಿದ್ದಾರೆ. ಮತ್ತೊಬ್ಬರು, ‘ ಸೂಪರ್ ಗುರು ನೀನು’ ಎಂದಿದ್ದಾರೆ. ಇನ್ನೊಬ್ಬರು ‘ ದೇವರು ಒಳ್ಳೆಯದು ಮಾಡಲಿ ಎಂದು ಕಾಮೆಂಟ್ ನಲ್ಲಿ ತಿಳಿಸಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ