ಬಾಲಿವುಡ್ ನಟಿ, ವಿಶ್ವ ಸುಂದರಿ ಮಾನುಷಿ ಚಿಲ್ಲರ್ ಇನ್ನೂ ಶಿಕ್ಷಣ ಪಡೆಯುತ್ತಿದ್ದಾರೆ; ಯಾವ ಪದವಿ?
ಮಾನುಷಿ ಚಿಲ್ಲರ್ ಜನಿಸಿದ್ದು 1997ರ ಮೇ 14ರಂದು. ಮಾನುಷಿ ಅವರ ಕುಟುಂಬದಲ್ಲಿ ಎಲ್ಲರೂ ಶಿಕ್ಷಿತರು. ಅವರ ತಂದೆ ಮಿತ್ರ ಬಸು ಚಿಲ್ಲರ್ ಅವರು ವಿಜ್ಞಾನಿ. ಅವರ ತಾಯಿ ನೀಲಂ ಚಿಲ್ಲರ್ ಅವರು ವೈದ್ಯೆ. ಮಾನುಷಿ ಅವರು ಆರಂಭಿಕ ವಿದ್ಯಾಭ್ಯಾಸವನ್ನು ದೆಹಲಿಯಲ್ಲಿ ಮಾಡಿದರು. ಅವರು ಸೋನಿಪತ್ನಲ್ಲಿ ಎಂಬಿಬಿಎಸ್ ಓದುತ್ತಿದ್ದಾರೆ!
ಪ್ರಿಯಾಂಕಾ ಚೋಪ್ರಾ (Priyanka Chopra) ಅವರು 2000ನೇ ಇಸ್ವಿಯಲ್ಲಿ ವಿಶ್ವ ಸುಂದರಿ ಪಟ್ಟ ಪಡೆದರು. ಇದಾದ 17 ವರ್ಷಗಳ ಬಳಿಕ ಮತ್ತೆ ಭಾರತದಿಂದ ವಿಶ್ವ ಸುಂದರಿ ಪಟ್ಟ ಪಡೆದಿದ್ದು ಮಾನುಷಿ ಚಿಲ್ಲರ್. ಈಗ ಅವರು ಬಾಲಿವುಡ್ನಲ್ಲಿ ಮಿಂಚುತ್ತಿದ್ದಾರೆ. ಅವರಿಗೆ ಇಂದು (ಮೇ 14) ಜನ್ಮದಿನ. ಅವರಿಗೆ ಫ್ಯಾನ್ಸ್ ಶುಭಾಶಯ ಕೋರುತ್ತಿದ್ದಾರೆ. ಸದ್ಯ ಮಾನುಷಿ ಅವರು ಬಾಲಿವುಡ್ನಲ್ಲಿ ಬ್ಯುಸಿ ಆಗಿದ್ದಾರೆ. ಅವರು ಹೊಸ ಹೊಸ ಸಿನಿಮಾ ಒಪ್ಪಿಕೊಂಡು ನಟಿಸುತ್ತಿದ್ದಾರೆ. ಇದರ ಜೊತೆಗೆ ಅವರು ಇನ್ನೂ ಶಿಕ್ಷಣ ಪಡೆಯುತ್ತಿದ್ದಾರೆ. ಅವರ ಕುರಿತ ಅಪರೂಪದ ವಿಚಾರ ಇಲ್ಲಿದೆ.
ಸಣ್ಣ ವಯಸ್ಸು
ಮಾನುಷಿ ಚಿಲ್ಲರ್ ಜನಿಸಿದ್ದು 1997ರ ಮೇ 14ರಂದು. ಮಾನುಷಿ ಅವರ ಕುಟುಂಬದಲ್ಲಿ ಎಲ್ಲರೂ ಶಿಕ್ಷಿತರು. ಅವರ ತಂದೆ ಮಿತ್ರ ಬಸು ಚಿಲ್ಲರ್ ಅವರು ವಿಜ್ಞಾನಿ. ಅವರ ತಾಯಿ ನೀಲಂ ಚಿಲ್ಲರ್ ಅವರು ವೈದ್ಯೆ. ಮಾನುಷಿ ಅವರು ಆರಂಭಿಕ ವಿದ್ಯಾಭ್ಯಾಸವನ್ನು ದೆಹಲಿಯಲ್ಲಿ ಮಾಡಿದರು. ಅವರು ಸೋನಿಪತ್ನಲ್ಲಿ ಎಂಬಿಬಿಎಸ್ ಓದುತ್ತಿದ್ದಾರೆ! ಹೌದು, ಸೋನಿಪತ್ನ ಭಗತ್ ಫೂಲ್ ಸಿಂಗ್ ಮೆಡಿಕಲ್ ಕಾಲೇಜ್ನಲ್ಲಿ ಅವರು ಎಂಬಿಬಿಎಸ್ ಶಿಕ್ಷಣ ಪಡೆಯುತ್ತಿದ್ದಾರೆ. ವಿಶ್ವ ಸುಂದರಿ ಆಗಬೇಕು ಎನ್ನುವ ಕಾರಣಕ್ಕೆ ಶಿಕ್ಷಣವನ್ನು ಕೆಲವರ್ಷ ನಿಲ್ಲಿಸಿದ್ದರು. ಅವರಿಗೆ ಹೃದಯ ತಜ್ಞೆ ಆಗಬೇಕು ಎನ್ನುವ ಆಸೆ ಇದೆ.
ಮಾನುಷಿ ಚಿಲ್ಲರ್ ಮಾಡೆಲ್ ಕೂಡ ಹೌದು. ‘ಮಿಸ್ ಫೆಮಿನಾ ಹರಿಯಾಣ 2017’ ಹಾಗೂ ‘ಫೆಮಿನಾ ಮಿಸ್ ಇಂಡಿಯಾ 2017 ಕಿರೀಟವನ್ನು ಅವರು ಮುಡಿಗೇರಿಸಿಕೊಂಡಿದ್ದಾರೆ. ಅವರು ವಿಶ್ವ ಸುಂದರಿ ಕೂಡ ಹೌದು. ಮಾನುಷಿ ಚಿಲ್ಲರ್ ಅವರು ಕುಚಿಪುಡಿ ತರಬೇತಿ ಪಡೆದಿದ್ದಾರೆ. ಅವರು ರಾಜಾ ಹಾಗೂ ರಾಧಾ ರೆಡ್ಡಿ ಬಳಿ ತರಬೇತಿ ಪಡೆದಿದ್ದಾರೆ.
ಮಾನುಷಿ ಚಿಲ್ಲರ್ ಅವರು ಕೂದಲು ಹಾಗೂ ಚರ್ಮದ ಬಗ್ಗೆ ವಿಶೇಷ ಕಾಳಜಿ ವಹಿಸುತ್ತಾರೆ. ಇದಕ್ಕಾಗಿ ಅವರು ಕೆಲವು ಟ್ರೀಟ್ಮೆಂಟ್ ಒಳಗಾಗಿದ್ದಾರೆ ಎನ್ನುವ ಮಾತೂ ಇದೆ. ಮಾನುಷಿ ಚಿಲ್ಲರ್ ಅವರು ಸಾಮಾಜಿಕ ಕೆಲಸಗಳ ಮೂಲಕವೂ ಗುರುತಿಸಿಕೊಂಡಿದ್ದಾರೆ. ಅವರು ಋತುಚಕ್ರದ ಬಗ್ಗೆ ಜಾಗೃತಿ ಮೂಡಿಸೋ ಕೆಲಸ ಮಾಡಿದ್ದಾರೆ. ಇದಕ್ಕಾಗಿ 20 ಗ್ರಾಮಗಳಿಗೆ ಭೇಟಿ ನೀಡಿದ್ದಾರೆ.
ಇದನ್ನೂ ಓದಿ: ಶ್ರೇಯಸ್ ತಲ್ಪಡೆಗೆ ಹೃದಯಾಘಾತ ಆದ ಬಳಿಕ ಅಕ್ಷಯ್ ಕುಮಾರ್ ನಡೆದುಕೊಂಡ ರೀತಿ ಹೇಗಿತ್ತು?
2022ರಲ್ಲಿ ರಿಲೀಸ್ ಆದ ಅಕ್ಷಯ್ ಕುಮಾರ್ ನಟನೆಯ ‘ಸಾಮ್ರಾಟ್ ಪೃಥ್ವಿರಾಜ್’ ಸಿನಿಮಾದಲ್ಲಿ ಮಾನುಷಿ ಚಿಲ್ಲರ್ ನಟಿಸಿದರು. ಇದು ಅವರ ಮೊದಲ ಸಿನಿಮಾ. ಈ ಚಿತ್ರದಲ್ಲಿ ಸನ್ಯೋಗಿತಾ ಪಾತ್ರ ಮಾಡಿದ್ದರು. ಈ ಚಿತ್ರವನ್ನು ಜನರು ಇಷ್ಟಪಟ್ಟಿಲ್ಲ. ‘ದಿ ಗ್ರೇಟ್ ಇಂಡಿಯನ್ ಫ್ಯಾಮಿಲಿ’, ‘ಆಪರೇಷನ್ ವ್ಯಾಲೆಂಟೈನ್’, ಬಡೇ ಮಿಯಾ ಚೋಟೆ ಮಿಯಾ’ ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ. ಈ ಯಾವ ಸಿನಿಮಾ ಕೂಡ ದೊಡ್ಡ ಮಟ್ಟದಲ್ಲಿ ಗಳಿಕೆ ಮಾಡಿಲ್ಲ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.