Horoscope Today May 14, 2024: ಮಂಗಳವಾರದ ದಿನ ಭವಿಷ್ಯ; ಯಾರಿಗೆ ಶುಭ, ಯಾರಿಗೆ ಅಶುಭ?
2024 ಮೇ 12ರ ದಿನ ಭವಿಷ್ಯ: ಮಂಗಳವಾರದಂದು 12 ರಾಶಿಗಳ ರಾಶಿಫಲ ಹೇಗಿದೆ ಎನ್ನುವುದು ತಿಳಿದುಕೊಳ್ಳಿ. ಈ ದಿನ ಯಾರಿಗೆ ಯೋಗ, ಶುಭ ಸಂಯೋಗ, ಗ್ರಹಗಳ ಸ್ಥಾನ ಬದಲಾವಣೆಗಳಿಂದ ಮೇಷದಿಂದ ಮೀನ ರಾಶಿವರೆಗಿನ ಮಂಗಳವಾರದ ರಾಶಿ ಭವಿಷ್ಯ ಹೇಗಿರಲಿದೆ? ಶುಭಕಾಲ ಹೇಗಿದೆ? ಯಾವ ರಾಶಿಯವರಿಗೆ ಅದೃಷ್ಟ ಕಾದಿದೆ ಎಂಬಿತ್ಯಾದಿ ಮಾಹಿತಿಯನ್ನು ನಿತ್ಯ ಭವಿಷ್ಯದಿಂದ ತಿಳಿಯಿರಿ.
ರಾಶಿ ಭವಿಷ್ಯ (Horoscope Today) ಗ್ರಹಗಳು ಮತ್ತು ನಕ್ಷತ್ರಗಳ ಚಲನೆಯನ್ನು ಆಧರಿಸಿದ್ದು, ಪ್ರತಿಯೊಂದು ರಾಶಿಗಳು ತನ್ನದೇ ಆದ ಮಹತ್ವವನ್ನು ಹೊಂದಿದೆ. ಗ್ರಹಗಳು ಮತ್ತು ನಕ್ಷತ್ರಗಳ ಜೊತೆಗೆ ಪಂಚಾಂಗದ ಲೆಕ್ಕಾಚಾರಗಳನ್ನು ವಿಶ್ಲೇಷಿಸಲಾಗಿದೆ. ಹಾಗಿದ್ದರೆ, ಇಂದಿನ (ಮೇ 14) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಮಾಹಿತಿ ಇಲ್ಲಿದೆ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ಉತ್ತರಾಯಣ, ವಸಂತ ಋತು, ಮೇಷ ಮಾಸ, ಮಹಾನಕ್ಷತ್ರ: ಕೃತ್ತಿಕಾ, ಮಾಸ: ವೈಶಾಖ, ಪಕ್ಷ: ಶುಕ್ಲ, ವಾರ: ಮಂಗಳ, ತಿಥಿ: ಸಪ್ತಮೀ, ನಿತ್ಯನಕ್ಷತ್ರ: ಪುಷ್ಯ, ಯೋಗ: ಶೂಲ, ಕರಣ: ಕೌಲವ, ಸೂರ್ಯೋದಯ ಬೆಳಗ್ಗೆ 06 ಗಂಟೆ 06 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 51 ನಿಮಿಷಕ್ಕೆ, ರಾಹು ಕಾಲ 15:40 ರಿಂದ 17:16ರ ವರೆಗೆ, ಯಮಘಂಡ ಕಾಲ ಬೆಳಗ್ಗೆ 09:18 ರಿಂದ 10:53ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 12:29 ರಿಂದ 14:05ರ ವರೆಗೆ.
ಮೇಷ ರಾಶಿ :ನಿಮಗೆ ಇಂದು ಅಪರೂಪದ ಸಂದರ್ಭಗಳು ಎದುರಾಗಬಹುದು. ಪ್ರೀತಿಯಿಂದ ಏನನ್ನೇ ಕೊಟ್ಟರೂ ಅದನ್ನು ಸ್ವೀಕರಿಸಿ. ಅದರ ಬಗ್ಗೆ ಟೀಕೆಗಳನ್ನು ಮಾಡಿ ಭಾವನೆಗೆ ಹೊಡೆತ ಕೊಡುವುದು ಬೇಡ. ಅಂತ್ಯದ ವೇಳೆಗೆ ನೀವು ಹೊಸ ಹಣದ ಮೂಲವನ್ನು ಹೊಂದಿರಬಹುದು. ನಿಮಗಾಗಿ ಅತ್ಯಂತ ಹೊಂದಾಣಿಕೆಯ ಪಾಲುದಾರ ಎಂದು ಸಾಬೀತುಪಡಿಸುವ ಯಾರಾದರೂ ಈ ನಿಮ್ಮ ಜೀವನವನ್ನು ಪ್ರವೇಶಿಸುತ್ತಾರೆ. ದಾಂಪತ್ಯದಲ್ಲಿ ಪರಸ್ಪರ ಹೊಂದಾಣಿಕೆಯಾಗಲಿದೆ. ಹಿರಿಯರಿಂದ ಆಶೀರ್ವಾದವನ್ನು ಪಡೆಯಿರಿ. ಶರೀರದಲ್ಲಿ ಅಸಮತೋಲನವು ಇರಲಿದೆ. ಎಂತಹ ನೋವನ್ನು ಸಹಿಸುವ ಸಾಮರ್ಥ್ಯ ಇದೆ ಎಂದು ದುಸ್ಸಾಹಸಕ್ಕೆ ಹೋಗುವುದು ಬೇಡ. ಇಂದು ಉಪಾಯದಿಂದ ಕೆಲಸವನ್ನು ಮಾಡುವುದು ಉತ್ತಮ. ಸ್ನೇಹಿತರ ವಿವಾಹ ಸಮಾರಂಭದಲ್ಲಿ ಖುದ್ದಾಗಿ ಭಾಗಿಯಾಗುವಿರಿ. ನಿಮ್ಮ ಅನುಪಸ್ಥಿತಿಯಲ್ಲಿ ಕಾರ್ಯಗಳು ಆಗುವುದು.
ವೃಷಭ ರಾಶಿ :ನೀವು ಇಂದು ಏಕಾಂತದಲ್ಲಿ ಸಮಯ ಕಳೆಯಲು ಇಚ್ಛಿಸುವಿರಿ. ನಿಮಗೆ ಆತ್ಮವಿಶ್ವಾಸವನ್ನು ಪಡೆಯಲು ಮತ್ತು ನಿಮ್ಮ ಆಲೋಚನೆಗಳನ್ನು ತೆರವುಗೊಳಿಸಲು ಸಹಾಯ ಮಾಡುತ್ತದೆ. ನೀವು ಸಣ್ಣ ಪ್ರವಾಸವನ್ನು ಸಹ ತೆಗೆದುಕೊಳ್ಳಬಹುದು. ಜೀವನ ಸಂಗಾತಿಯನ್ನು ಹುಡುಕುತ್ತಿರುವ. ನಕಾರಾತ್ಮಕ ಪರಿಣಾಮಗಳನ್ನು ತರುತ್ತದೆ, ಆದ್ದರಿಂದ ನೀವು ವಾರದ ಕೊನೆಯ ಭಾಗದಲ್ಲಿ ಆರೋಗ್ಯದ ವಿಷಯದಲ್ಲಿ ಹೆಚ್ಚು ಬಳಲುತ್ತೀರಿ. ಕುತೂಹಲದಿಂದ ಏನನ್ನಾದರೂ ಮಾಡಲು ಹೋಗಿ ತೊಂದರೆಗೆ ಸಿಕ್ಕಿಕೊಳ್ಳುವಿರಿ. ದಾಂಪತ್ಯದಲ್ಲಿ ಮನಸ್ತಾಪವನ್ನು ಶಾಂತಗೊಳಿಸಿಕೊಳ್ಳುವುದು ಒಳ್ಳೆಯದು. ಸಂಗಾತಿಯ ಕಾರಣದಿಂದ ನಿಮಗೆ ಬೇಸರವಾಗುವುದು. ಕೆಲವರು ನಿಮ್ಮ ದಾರಿ ತಪ್ಪಿಸಬಹುದು. ಮಿತ್ರರ ಸಹಾನುಭೂತಿಯು ನಿಮಗೆ ಉತ್ಸಾಹವನ್ನು ಕೊಡುವುದು. ಉತ್ತಮವಾದ ಒಂದು ಉಡುಗೊರೆ ನಿಮ್ಮ ಕೈ ಸೇರಬಹುದು.
ಮಿಥುನ ರಾಶಿ :ನೀವು ಎಲ್ಲದಕ್ಕೂ ಆದ್ಯತೆಗಳು ಮತ್ತು ವೇಳಾಪಟ್ಟಿಗಳನ್ನು ಹೊಂದಿಸಿಕೊಂಡು ಕಾರ್ಯವನ್ನು ಮಾಡಿ. ನೀವು ಮತ್ತು ನಿಮ್ಮ ಸಂಗಾತಿ ಉತ್ತಮ ಸಮಯವನ್ನು ಹೊಂದಿರುತ್ತೀರಿ. ವಿಶೇಷವಾಗಿ ನಿಮ್ಮ ಅಹಂಕಾರವನ್ನು ಬದಿಗಿಟ್ಟು ತಪ್ಪುಗಳಿಗೆ ಜವಾಬ್ದಾರರಾಗಿರುತ್ತೀರಿ. ನಿಮ್ಮ ನ್ಯೂನತೆಗಳನ್ನು ಒಪ್ಪಿಕೊಳ್ಳುವುದು ನಿಮ್ಮ ಗೌರವವನ್ನು ಹೆಚ್ಚಿಸುತ್ತದೆ. ನಿಮ್ಮ ಜೀವನ ಸಂಗಾತಿಯನ್ನು ಹುಡುಕಲು ಇಂದು ಅತ್ಯುತ್ತಮ ದಿನವಾಗಲಿದೆ. ಎಲ್ಲವೂ ಗೊತ್ತಿದ್ದರೂ ಏನೂ ಗೊತ್ತಿಲ್ಲದಂತೆ ಇರುವಿರಿ. ಸರ್ಕಾರಿ ಕೆಲಸವನ್ನು ಮಾಡಿಸಿಕೊಳ್ಳುವುದು ನಿಧಾನವಾಗಲಿದೆ. ನಿಮಗೆ ಸಿಕ್ಕ ಜವಾಬ್ದಾರಿಯಿಂದ ಬೀಗುವಿರಿ. ಹೊಸ ಪರಿಚಯವು ಅತಿಯಾಗಿ ಆಪ್ತವಾಗಬಹುದು. ಯಾರ ಜೊತೆಗೂ ನೇರವಾದ ಮಾತುಗಳನ್ನು ಆಡದೇ ಕುಹಕವಾಡುವಿರಿ. ಇನ್ನೊಬ್ಬರ ಗೌಪ್ಯತೆಯನ್ನು ಬಿಚ್ಚಿಡುವುದು ಸಂತೋಷದ ವಿಚಾರವಾಗುವುದು. ಹಿತಶತ್ರುಗಳು ನಿಮಗೆ ಗೊತ್ತಾಗದಂತೆ ಕೆಲಸವನ್ನು ಮಾಡುವರು.
ಕರ್ಕ ರಾಶಿ :ಇಂದು ಮನೆಯಲ್ಲಿ ಬಹಳ ಕೆಲಸಗಳಿದ್ದು, ಅವುಗಳನ್ನು ಪೂರ್ಣಗೊಳಿಸಲು ನಿರತರಾಗುವಿರಿ. ಅದು ನಿಮ್ಮನ್ನು ನಿಮ್ಮ ಕುಟುಂಬಕ್ಕೆ ಹತ್ತಿರ ತರುತ್ತದೆ. ನಿಮ್ಮ ಸಹೋದ್ಯೋಗಿಗಳು ಸಹ ನಿಮಗೆ ಒಳ್ಳೆಯ ಸುದ್ದಿಯನ್ನು ನೀಡುತ್ತಾರೆ. ನಿಮ್ಮ ನಡವಳಿಕೆಯ ಬಗ್ಗೆ ನೀವು ಭಯಭೀತರಾಗಬಹುದು. ಉದ್ಯೋಗ ನಷ್ಟದ ಭೀತಿಯು ಇರಬಹುದು. ಎಂದೋ ಪಡೆದ ಸಾಲದ ಮರುಪಾವತಿಯನ್ನು ಮಾಡಬೇಕಾಗಿಬರಬಹುದು. ನಿಮ್ಮನ್ನು ನಿಂದಿಸುವವರಿಗೆ ಉತ್ತರವನ್ನು ಕೊಡುವ ಯೋಚನೆಯಲ್ಲಿಯೇ ಇರುವಿರಿ. ಭೂಮಿಯ ಖರೀದಿಯನ್ನು ಏಕಮುಖವಾಗಿ ಮಾಡುವುದು ಬೇಡ. ಬರಬೇಕಾದ ಧನಾಗಮನದ ನಿರೀಕ್ಷೆಯಲ್ಲಿ ಇಂದು ಇರುವಿರಿ. ಭಾವುಕರಾಗುವ ಸಂದರ್ಭವು ಬರಬಹುದು. ನಿರಂತರ ಕಾರ್ಯದಿಂದ ವಿಶ್ರಾಂತಿಯನ್ನು ಪಡೆಯುವಿರಿ. ಕೆಲಸದ ಸಮಯವು ವ್ಯತ್ಯಾಸವಾಗಿದ್ದು ನಿಮಗೆ ಹೊಂದಿಕೊಳ್ಳುವುದು ಕಷ್ಟವಾದೀತು. ಕಛೇರಿಯಲ್ಲಿ ನಿಮ್ಮ ಮೇಲೆ ಸಹಾನುಭೂತಿ ಇರಬಹುದು.
ಸಿಂಹ ರಾಶಿ :ಇಂದು ನಿಮಗೆ ಪ್ರಮುಖ ಕೆಲಸವನ್ನು ನಿಭಾಯಿಸುವ ಜವಾಬ್ದಾರಿಯನ್ನು ಕೊಡಬಹುದು. ಇಂತಹ ವಿಷಯಗಳನ್ನು ನಿಭಾಯಿಸುವಲ್ಲಿ ನೀವು ನಿಜವಾಗಿಯೂ ಪ್ರವೀಣರಾಗಿರುತ್ತೀರಿ. ನಿಮ್ಮ ಸಂಗಾತಿಯು ನಿಮ್ಮ ಕೆಲವು ಅಭ್ಯಾಸಗಳನ್ನು ಬದಲಾಯಿಸಲು ಪ್ರಯತ್ನಿಸುತ್ತಾರೆ. ನೀವಾಡುವ ಸುಳ್ಳೇ ಕಾಕತಾಳೀಯದಂತೆ ಸತ್ಯವಾಗಬಹುದು. ಇದು ನಿಮಗೆ ಸ್ವಲ್ಪ ಕಿರಿಕಿರಿಯನ್ನೂ ಉಂಟುಮಾಡುತ್ತದೆ. ಆದರೆ ಅವರ ಸಲಹೆಯನ್ನು ಅನುಸರಿಸುವುದು ನಿಮಗೆ ಬಹಳಷ್ಟು ಪ್ರಯೋಜನವನ್ನು ನೀಡುತ್ತದೆ. ಪ್ರಯತ್ನಿಸುವ ಕಾರ್ಯವು ಯಶಸ್ಸಿನ ಕಡೆಗೆ ಸಾಗುತ್ತಿದೆಯೇ ಎನ್ನುವುದು ಗಮನಿಸಿ. ಅಮೇಧ್ಯವಾದ ಆಹಾರವನ್ನು ಸೇವಿಸುವ ಸಂದರ್ಭವು ಬರಬಹುದು. ರಕ್ಷಣೆಯ ಜವಾಬ್ದಾರಿ ಇದ್ದವರಿಗೆ ಒತ್ತಡವಿರುವುದು. ಮಕ್ಕಳಲ್ಲಿ ಪ್ರೀತಿಯನ್ನು ತೋರುವಿರಿ. ಸುಳ್ಳು ಮಾತಿನಿಂದಾಗಿ ನಂಬಿಕೆಯನ್ನು ಕಳೆದುಕೊಳ್ಳಬಹುದು. ಅಪರಿಚಿತರಿಗೆ ಮಾಡಿದ ಸಹಾಯವನ್ನು ದುರುಪಯೋಗ ಮಾಡಿಕೊಳ್ಳುವಿರಿ.
ಕನ್ಯಾ ರಾಶಿ :ಇಂದು ತುಂಬಾ ದಿನದಿಂದ ಮಾಡುತ್ತಿದ್ದ ಕಾರ್ಯ ಯೋಜನೆಗಳನ್ನು ಪೂರ್ಣಮಾಡುವಿರಿ. ಆರ್ಥಿಕತೆಯಲ್ಲಿ ಸ್ಪಷ್ಟತೆ ಅವಶ್ಯವಾಗಿ ಬೇಕು. ನಿಮ್ಮ ಪ್ರಯತ್ನದ ಫಲವಾಗಿ ಇತರರು ನಿಮ್ಮನ್ನು ಗೌರವಿಸುತ್ತಾರೆ. ಅಸ್ಥಿರ ಮನಸ್ಸು ನಿಮ್ಮ ಸಂಬಂಧಗಳ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಇದರಿಂದ ನಿಮ್ಮ ಪ್ರೇಮ ಸಂಬಂಧಕ್ಕೆ ಸ್ವಲ್ಪ ತೊಂದರೆಯಾಗಲಿದೆ. ಇನ್ನೊಬ್ಬರ ಹೊಟ್ಟೆ ಕಿಚ್ಚಿನಿಂದ ನಿಮ್ಮ ಕಾರ್ಯದಲ್ಲಿ ವ್ಯತ್ಯಾಸವಾಗಬಹುದು. ಅಗತ್ಯವಿರುವುದರಿಂದ ನೀವು ಅವರಿಗೆ ಹೆಚ್ಚು ಭರವಸೆ ನೀಡಬೇಕು. ಸಹೋದ್ಯೋಗಿಗೆ ಸಹಾಯ ಮಾಡುವ ಸ್ಥಿತಿಯು ನಿಮಗೆ ಬರಬಹುದು. ಆಗಬೇಕಾದ ಕಾರ್ಯಗಳು ಒತ್ತಡ ಇಲ್ಲದೇ ಆಗುವುದು. ಯಾರ ಬಲವಂತಕ್ಕೂ ಮಣಿಯುವುದಿಲ್ಲ. ಮುಳ್ಳನ್ನು ಮುಳ್ಳಿನಿಂದ ತೆಗೆಯಬೇಕು ಎನ್ನುವುದು ನಿಜವಾದರೂ, ಅದಕ್ಕೂ ವಿಧಾನವಿದೆ ಎನ್ನುವುದನ್ನು ನೆನಪಿಟ್ಟುಕೊಳ್ಳಬೇಕು. ಇಂದಿನ ಸಮಯವನ್ನು ವ್ಯರ್ಥಮಾಡಿಕೊಂಡು ಬೇಸರಿಸುವಿರಿ.
ತುಲಾ ರಾಶಿ :ಇಂದು ನೀವು ನಿರೀಕ್ಷಿಸಿದ್ದು ನಿಮಗೆ ಸಿಗಲಿದೆ. ನಿಮಗೆ ಆಶ್ಚರ್ಯಗಳಿಂದ ಕೂಡಿದ ಕೆಲವು ಸಂಗತಿಗಳು ಗೊತ್ತಾಗಬಹುದು. ನಿಮ್ಮನ್ನು ಭೇಟಿ ಮಾಡಲು ಆಪ್ತರು ಬರಬಹುದು. ಕೆಲಸದ ಕ್ಷೇತ್ರದಲ್ಲಿ ನೀವಂದುಕೊಂಡಂತೆ ಆಗಲಿದೆ. ಗುಡ್ಡ ಬೆಟ್ಟಗಳನ್ಬು ಏರುವ ಸಾಹಸವನ್ನು ಮಾಡಲಿದ್ದೀರಿ. ಕೃಷಿಕರು ಉತ್ತಮ ಲಾಭವನ್ನು ಪಡೆಯಲಿದ್ದಾರೆ. ಯಾರ ಮೇಲು ಆಪಾದನೆಯನ್ನು ಮಾಡಬೇಡಿ. ಮನಸ್ಸಿನ ಸ್ಥಿರತೆಯನ್ನು ಕಾಪಾಡಿಕೊಳ್ಳಲು ಇಂದು ಕಷ್ಟವಾದೀತು. ಪೋಷಕರ ಸೇವೆಗೆ ಸಿಕ್ಕ ಅವಕಾಶವನ್ನು ಬಳಸಿಕೊಳ್ಳಿ. ಕೆಲವು ವ್ಯಕ್ತಿಗಳಿಂದ ನೀವು ದೂರವಿರಲು ಇಚ್ಛಿಸುವಿರಿ. ನಿಮ್ಮ ಅಸಹಕಾರದಿಂದ ಮಕ್ಕಳಿಗೆ ಬೇಸರವಾದೀತು. ಅಯಾಚಿತ ಭಾಗ್ಯದಿಂದ ಖುಷಿಯಾಗಲಿದೆ. ಕೆಲವರ ಮಾತು ನಿಮ್ಮನ್ನು ಕಾಡಬಹುದು. ಯೋಜಿತ ಕಾರ್ಯಗಳು ಸಮಯಕ್ಕೆ ಸರಿಯಾಗಿ ಮುಗಿಯಲಿದ್ದು ನೆಮ್ಮದಿ ಇರುವುದು. ವ್ಯಾಪಾರದಲ್ಲಿ ಜನರ ಆಕರ್ಷಣೆಯನ್ನು ಮಾಡುವ ಕಲೆ ಸಿದ್ಧಿಸುವುದು.
ವೃಶ್ಚಿಕ ರಾಶಿ :ರಾಜಕೀಯ ಜನರನ್ನು ಭೇಟಿಯಾಗಿ ಆಗಬೇಕಾದ ಕಾರ್ಯವನ್ನು ಮಾಡಿಸಿಕೊಳ್ಳುವಿರಿ. ನಿಮಗೆ ಉದ್ಯೋಗಕ್ಕೆ ಬೇಕಾದ ಉಪಯುಕ್ತ ಮಾಹಿತಿಯನ್ನು ಪಡೆಯುವಿರಿ. ಈ ದಿನ ನೀವು ಎಂದಿನಂತೆ ಇರದೇ ಶಾಂತಿಯುತವಾಗಿ ನಡೆದುಕೊಳ್ಳುವಿರಿ. ತಮ್ಮ ಜೀವನದಲ್ಲಿ ಬಹಳಷ್ಟು ಸಾಧಿಸಿದ ಜನರನ್ನು ಕಂಡು ನೀವು ಅಸೂಯೆ ಪಡಬಹುದು. ನೀವು ಗುರಿಯ ಸಾಧನೆಗೆ ಬೇಕಾದ ಮಾರ್ಗವನ್ನು ಅನುಸರಿಸಿ. ಉದ್ಯೋಗದ ಸ್ಥಳದಲ್ಲಿ ಪ್ರೇಮವಾಗಬಹುದು. ಏಕಾಗ್ರವಾಗಿ ನಿಮ್ಮ ಕಾರ್ಯಗಳು ಮುಂದುವರಿಯಲಿ. ಅನಿರೀಕ್ಷತ ಅನಾರೋಗ್ಯದಿಂದ ಹಣವು ಖರ್ಚಾಗಬಹುದು. ನಿಮ್ಮ ಉದ್ವೇಗದ ಮನಸ್ಸನ್ನು ಇತರರಿಗೆ ತೋರಿಸುವಿರಿ. ಮೇಲಧಿಕಾರಿಗಳು ನಿಮ್ಮ ಕಾರ್ಯಕ್ಕೆ ತೊಂದರೆ ಕೊಡಬಹುದು. ಮಕ್ಕಳಿಗೆ ಜವಾಬ್ದಾರಿಯನ್ನು ಕೊಡಲು ಹಿಂಜರಿಯುವಿರಿ. ಕಷ್ಟವಾದರೂ ಸಾಲದ ಮರುಪಾವತಿಯನ್ನು ಮಾಡವಿರಿ. ನಿಮಗೆ ಇಷ್ಟವಾಗದ ಸಂಗತಿಯು ಹತ್ತಿರ ಬಂದಾಗ ಅದನ್ನು ದೂರವಿಡಲು ಪ್ರಯತ್ನಿಸಿ.
ಧನು ರಾಶಿ :ಇಂದು ನೀವು ಬಹಳ ಕಾಲದ ಅನಂತರ ಕುಟುಂಬದ ಜನರ ಜೊತೆ ಹೆಚ್ಚು ಬೆರೆಯುವಿರಿ. ಮನೆಯಲ್ಲಿಯೇ ಇದ್ದು ಮನೆಯಲ್ಲಿಯೇ ಆನಂದವನ್ನು ಪಡೆಯುವಿರಿ. ನಿಮ್ಮ ಹಣದ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳುವಿರಿ. ಸ್ನೇಹಿತರು ನಿಮಗೆ ಸಹಾಯ ಮಾಡಲಿದ್ದಾರೆ. ಕೆಲವು ಮಾತುಗಳಿಂದ ನೀವು ಚಂಚಲರಾಗುತ್ತೀರಿ. ಮಾತನಾಡಲು ಯಾರಿಲ್ಲದೇ ನಿಮ್ಮ ಸ್ನೇಹಿತರೊಂದಿಗೆ ಸಮಯ ಕಳೆಯಿರಿ. ನಿಮ್ಮನ್ನು ಸಂತೋಷದಿಂದ ಇಟ್ಟುಕೊಳ್ಳಲು ಬೇಕಾದ ಮಾರ್ಗವನ್ನು ಕಂಡುಕೊಳ್ಳಿ. ನಿಮ್ಮ ಪೋಷಕರ ಸಲಹೆಯನ್ನು ಅನುಸರಿಸಿ, ನಿಮ್ಮ ಸಂಬಂಧವನ್ನು ಉತ್ತಮವಾಗಿಸಿಕೊಳ್ಳಿ. ನಿಮ್ಮ ಮಾತುಗಳಿಂದ ಸ್ವಭಾವವು ಸ್ಪಷ್ಟವಾಗುವುದು. ಪುಣ್ಯಸ್ಥಳಗಳನ್ನು ಕುಟುಂಬ ಜೊತೆ ದರ್ಶನ ಪಡೆಯುವಿರಿ. ಅತಿಯಾದ ದೇಹದಂಡನೆಯಿಂದ ನಿಮಗೆ ಆಯಾಸವಾಗಲಿದೆ. ಕೊಟ್ಟ ಹಣವನ್ನು ನೀವು ಪುನಃ ಕೇಳುವುದರಿಂದ ಕಲಹವಾಗಬಹುದು ನಿಮ್ಮಿಂದ ಸಹಾಯವನ್ನು ಪಡೆದ ಹಿರಿಯರು ಆಶೀರ್ವದಿಸುವರು. ಇದರಿಂದ ಸಂತೋಷವಾಗಲಿದೆ.
ಮಕರ ರಾಶಿ :ನೀವು ಹೊಸತನ್ನು ಏನನ್ನಾದರೂ ಕಲಿಯಲು ಸಿದ್ಧರಾಗುವಿರಿ. ನಿಮ್ಮ ಕಡೆಯಿಂದ ಸ್ವಲ್ಪ ಕೆಲಸದಿಂದ ನೀವು ಗಣನೀಯ ಪ್ರಮಾಣದ ಹಣ ಪಡೆಯಬಹುದು. ನೀವು ಯುವಕರ ಜೊತೆ ಸಮಯ ಕಳೆಯುವಿರಿ. ನಿಮಗೆ ವಹಿಸಿದಷ್ಟು ಕೆಲಸವನ್ನು ಏಕಾಗ್ರತೆಯಿಂದ ಮಾಡಿ. ನೀವು ಸಾಲವನ್ನು ಪಡೆಯಲು ಆರ್ಥಿಕಸಂಸ್ಥೆಗಳಿಂದ ಆಹ್ವಾನ ಬರಬಹುದು. ದಾಂಪತ್ಯದಲ್ಲಿ ಮನಸ್ತಾಪಗಳು ಎದ್ದು ಶಾಂತವಾಗುವುದು. ಉಚಿತವಾದುದನ್ನು ಮಾತ್ರ ಪಡೆಯಿರಿ. ನಿಮ್ಮ ಆರೋಗ್ಯವು ಇಂದು ಚೆನ್ನಾಗಿರಲಿದೆ. ಹೆಣ್ಣು ಮಕ್ಕಳಿಂದ ನಿಮಗೆ ಯಶಸ್ಸು ಪ್ರಾಪ್ತಿ. ಕಛೇರಿಯ ವ್ಯವಹಾರದಲ್ಲಿ ನಿಮಗೆ ಒತ್ತಡವು ಬರಬಹುದು. ಹಳೆಯ ಸ್ನೇಹಿತೆಯ ಸಖ್ಯವಾಗಬಹುದು. ಮಕ್ಕಳ ಭವಿಷ್ಯವನ್ನು ಗಮನದಲ್ಲಿ ಇಟ್ಟುಕೊಂಡು ವ್ಯವಹರಿಸುವುದು ಉತ್ತಮ. ನಿಮ್ಮ ಮೇಲಿನ ಪ್ರೀತಿಯು ಅಧಿಕವಾಗುವುದು.
ಕುಂಭ ರಾಶಿ :ಇಂದು ಪೋಷಕರಿಂದ ನಿಮ್ಮ ಕಾರ್ಯಕ್ಕೆ ಬೆಂಬಲ ಸಿಗಲಿದೆ. ಕಾರ್ಯದ ಸ್ಥಳದಲ್ಲಿ ಒಳ್ಳೆಯ ಸುದ್ದಿಗಳು ಬರಲಿವೆ. ಇಂದು ಭೂಮಿಗೆ ಸಂಬಂಧಿಸಿದಂತೆ ಲಾಭ ಪಡೆಯುವಿರಿ. ವಿದ್ಯಾರ್ಥಿಗಳು ಸಾಧನೆಗಳನ್ನು ಮಾಡಲು ಇಚ್ಛಿಸುವರು. ಸಂಗಾತಿಯ ಜೊತೆ ನೀವು ಪ್ರವಾಸಕ್ಕೆ ತೆರಳಲು ಯೋಚಿಸುವಿರಿ. ದೂರದ ಸ್ಥಳಗಳಿಗೆ ಹೋಗುವು ಬೇಡ. ನಿಮ್ಮ ಪ್ರೀತಿಯನ್ನು ಯಾರೊಂದಿಗೂ ಹಂಚಿಕೊಂಡು ಸಮಾಧಾನವಾಗುವುದು. ನಿಮ್ಮ ಕೆಲಸಕ್ಕೆ ಪ್ರಶಂಸೆ ಸಿಗಲಿದೆ. ಸಹೋದರರ ಜೊತೆ ಪಾಲುದಾರಿಕೆಯಿಂದ ಉತ್ತಮಲಾಭವಿದೆ. ಅಪರೂಪದ ಬಂಧುಗಳ ಸಮಾಗಮವಾಗಲಿದ್ದು, ಸಂತೋಷವಾಗಲಿದೆ. ದೇವಾಲಯಕ್ಕೆ ಹೋಗಿ ನೆಮ್ಮದಿಯನ್ನು ಪಡೆದುಕೊಳ್ಳುವಿರಿ. ನೀವು ಎಣಿಸಿದಂತೆ ಆಗಿದ್ದು, ನಿಮಗೂ ಅಚ್ಚರಿಯಾದೀತು. ವಿದ್ಯಾಭ್ಯಾಸ ಮಹತ್ತ್ವದ ಅರಿವಾಗಬಹುದು. ಸಂಗಾತಿಯ ಅನಪೇಕ್ಷಿತ ಆಸೆಗಳನ್ನು ದೂರ ಮಾಡುವಿರಿ. ನಿಮ್ಮ ಮಾತುಗಳು ಕಠೋರವಾಗಿ ಇರುವುದು. ಏನನ್ನೋ ಸಾಧಿಸಲು ಹೋಗಿ ಮತ್ತೇನನ್ನೋ ಮಾಡಿಕೊಳ್ಳುವಿರಿ.
ಮೀನ ರಾಶಿ :ಇಂದು ನೀವು ಸ್ನೇಹಿತರ ಹೆಚ್ಚು ಸಮಯವನ್ನು ಕಳೆಯುವಿರಿ. ಯಾವುದೇ ಮಹತ್ವದ ಹಣಕಾಸಿನ ವಹಿವಾಟುಗಳಿಗೆ ಸಹಿ ಹಾಕುವ ಸಾಧ್ಯತೆ ಇದೆ. ನೀವು ಸಣ್ಣ ವಿಷಯಗಳ ಬಗ್ಗೆಯೂ ಗಾಢವಾಗಿ ಇಂದು ಚಿಂತಿಸುವಿರಿ. ಅಂತಹವುಗಳನ್ನು ಮರೆತು ಮುನ್ನಡೆಯಿರಿ. ಮನಸ್ಸು ಯಾವ ಸಂದರ್ಭದಲ್ಲಿಯೂ ಉದ್ವೇಗಕ್ಕೆ ಒಳಗಾಗುತ್ತದೆ ಎಂದು ನೋಡಿಕೊಳ್ಳಿ. ದೊಡ್ಡ ನಿರ್ಧಾರಗಳನ್ನು ನೀವೊಬ್ಬರೇ ತೆಗೆದುಕೊಂಡು ತಪ್ಪು ಮಾಡುವಿರಿ. ವ್ಯವಹಾರದಲ್ಲಿ ಪ್ರಾಮಾಣಿಕತೆಯನ್ನು ಉಳಿಸಿಕೊಳ್ಳಿ. ಸಂತೋಷಕ್ಕೆ ಅಡ್ಡಿಯಾಗುವ ಕಾರ್ಯವನ್ನು ಮಾಡಿಕೊಂಡು ಪಶ್ಚಾತ್ತಾಪ ಪಡುವಿರಿ. ಅಜಾಗರೂಕತೆಯಿಂದ ನಿಮ್ಮ ವಸ್ತುವು ಇನ್ನೊಬ್ಬರ ಪಾಲಾಗಬಹುದು. ಕಳೆದುಹೋದ ವಿಚಾರವನ್ನು ಮತ್ತೆ ಮತ್ತೆ ನೆನಪಿಸಿಕೊಂಡು ದುಃಖಿಸುವಿರಿ. ದೈವಭಕ್ತಿಯಲ್ಲಿ ಅಪರಿಚಿತ ಕರೆಗಳು ನಿಮ್ಮನ್ನು ಪೀಡಿಸಬಹುದು. ಇನ್ನೊಬ್ಬರ ಜವಾಬ್ದಾರಿಯನ್ನು ನೀವು ಕಸಿದುಕೊಳ್ಳುವ ಆಲೋಚನೆ ಮಾಡುವಿರಿ. ಬೇರೆ ಕಾರ್ಯದಿಂದಾಗಿ ನಿಮ್ಮ ಮುಖ್ಯ ಕಾರ್ಯವು ಹಿಂದುಳಿಯುವುದು.
-ಲೋಹಿತ ಹೆಬ್ಬಾರ್ – 8762924271 (what’s app only)