ಕುಜ-ರಾಹು ಸಂಯೋಗ ರಾಶಿಫಲ: ಮೇಷ ರಾಶಿಯವರು ಆತುರದ ನಿರ್ಣಯ ತೆಗೆದುಕೊಳ್ಳುವುದು ಬೇಡ
ಕುಜ-ರಾಹು ಸಂಯೋಗ ರಾಶಿಫಲ: ಗಂಡ ಹೆಂಡತಿ ನಡುವೆ ಮನಸ್ತಾಪ ಮತ್ತು ಆಸ್ತಿ ಹಂಚಿಕೆ ಸಂಬಧಿಸಿದಂತೆ ಅಣ್ಣತಮ್ಮಂದಿರ ನಡುವೆ ಕಲಹಗಳು ಉಂಟಾಗಲಿವೆ. ತಾಳ್ಮೆ ಕಳೆದುಕೊಳ್ಳುವುದು ಬೇಡ ಮತ್ತು ಮೌನಕ್ಕೆ ಶರಣಾಗುವುದು ಹೆಚ್ಚು ಪ್ರಯೋಜನಕಾರಿ. ಸ್ವಲ್ಪ ಎಚ್ಚರಿಕೆಯಿಂದ ಇರಬೇಕು.
ಬೆಂಗಳೂರು: ಕುಜ-ರಾಹು ಸಂಯೋಗ ರಾಶಿಫಲ ಮತ್ತು ನಕ್ಷತ್ರಗಳ ಚಲನೆಯನ್ನು ಆಧರಿಸಿದ್ದು, ಪ್ರತಿಯೊಂದು ರಾಶಿ ತನ್ನದೇ ಆದ ಮಹತ್ವವನ್ನು ಹೊಂದಿದೆ. ಗ್ರಹಗಳು ಮತ್ತು ನಕ್ಷತ್ರಗಳ ಜೊತೆಗೆ ಪಂಚಾಂಗದ ಲೆಕ್ಕಾಚಾರಗಳನ್ನು ಖ್ಯಾತ ಜ್ಯೋತಿಷಿ ಡಾ ಬಸವರಾಜ ಗುರೂಜಿ ಇಲ್ಲಿ ವಿಶ್ಲೇಷಿಸಿದ್ದಾರೆ. ಮೇ 15 ರಿಂದ ಜೂನ್ 1 ರವರೆಗೆ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಮೊದಲಾದ ಮಾಹಿತಿ ಇಲ್ಲಿದೆ.
ಮೇಷ ರಾಶಿ: ಈ ರಾಶಿಯವರಿಗೆ ವಿದೇಶ ಯೋಗವಿದೆ ಮತ್ತು ಅಧಿಕ ರಕ್ತದೊತ್ತಡದ ಸಮಸ್ಯೆಯಾಗಬಹುದು. ಉದ್ಯೋಗದಲ್ಲಿ ಕೋಪತಾಪಗಳು ಎದುರಾಗಬಹುದು ಆದರೆ ಯಾವುದಕ್ಕೂ ಆವೇಶಕ್ಕೊಳಗಾಗಬಾರದು ಮತ್ತು ಖರ್ಚುಗಳನ್ನು ಕಮ್ಮಿ ಮಾಡಿಕೊಳ್ಳುವುದು ಒಳಿತು. ವ್ಯಾಪಾರದಲ್ಲಿ ಯಾವ ಕಾರಣಕ್ಕೂ ಆತುರದ ನಿರ್ಣಯಗಳು ಬೇಡ. ನ್ಯಾಯಾಲಯದಲ್ಲಿರುವ ವ್ಯಾಜ್ಯಗಳ ವಿಚಾರಣೆ ಮುಂದೂಡಲ್ಪಡುವ ಸಾದ್ಯತೆ ಇದೆ. ಗಂಡ ಹೆಂಡತಿ ನಡುವೆ ಮನಸ್ತಾಪ ಮತ್ತು ಆಸ್ತಿ ಹಂಚಿಕೆ ಸಂಬಧಿಸಿದಂತೆ ಅಣ್ಣತಮ್ಮಂದಿರ ನಡುವೆ ಕಲಹಗಳು ಉಂಟಾಗಲಿವೆ. ತಾಳ್ಮೆ ಕಳೆದುಕೊಳ್ಳುವುದು ಬೇಡ ಮತ್ತು ಮೌನಕ್ಕೆ ಶರಣಾಗುವುದು ಹೆಚ್ಚು ಪ್ರಯೋಜನಕಾರಿ. ಸ್ವಲ್ಪ ಎಚ್ಚರಿಕೆಯಿಂದ ಇರಬೇಕು. ಮಹಿಳೆಯರು ಆರೋಗ್ಯದ ಕಡೆ ಹೆಚ್ಚು ಹಮನ ನೀಡಬೇಕು, ವಾಹನ ಓಡಸುವಾಗ ಎಚ್ಚರದಿಂದಿರಬೇಕು. ತಾಮ್ರದ ಲೋಟದಲ್ಲಿ ನೀರು ಕುಡಿಯುವುದು ಒಳ್ಳೆಯದು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: Karnataka Rains: ಕರ್ನಾಟಕದ 10 ಜಿಲ್ಲೆಗಳಲ್ಲಿ ಇಂದಿನಿಂದ ಒಂದು ವಾರಗಳ ಕಾಲ ವಿಪರೀತ ಮಳೆ