ಕುಮಾರಕೃಪಾ ಗೆಸ್ಟ್ ಹೌಸ್‌ಗೆ ಗಂಗಾ ಎಂದು ಮರುನಾಮಕರಣ: ಇನ್ನು ಇದುವೇ ಸಿಎಂ ಅಧಿಕೃತ ನಿವಾಸ
ಸಿಎಂ ಡಿಕೆ ಶಿವಕುಮಾರ್ ಕುಮಾರಕೃಪಾ ಕೆಕೆ ಗೆಸ್ಟ್ ಹೌಸ್‌ಗೆ ಗಂಗಾ ಎಂದು ಮರುನಾಮಕರಣ ಮಾಡಿದ್ದು, ಇದನ್ನು ತಮ್ಮ ಅಧಿಕೃತ ನಿವಾಸವನ್ನಾಗಿ ಪರಿವರ್ತಿಸಿದ್ದಾರೆ. ನವೀಕರಿಸಿದ ಕಟ್ಟಡದಲ್ಲಿ ಕೊಠಡಿಗಳಿಗೂ ನದಿಗಳ ಹೆಸರಿಡಲಾಗಿದೆ. ರಾತ್ರಿ ಪೂಜೆ ನೆರವೇರಿದ್ದು, ಇಂದು ಸೋಮವಾರ ಕುಟುಂಬದೊಂದಿಗೆ ಶಾಸ್ತ್ರೋಕ್ತವಾಗಿ ಗೃಹಪ್ರವೇಶ ನಡೆಯಲಿದೆ.
ಬೆಂಗಳೂರು, ನವೆಂಬರ್ 16: ಸಿಎಂ ಡಿಕೆ ಶಿವಕುಮಾರ್ ಅವರು ಕುಮಾರಕೃಪಾ ಗೆಸ್ಟ್ ಹೌಸ್‌ಗೆ ಗಂಗಾ ಎಂದು ಮರುನಾಮಕರಣ ಮಾಡಿ, ಅದನ್ನು ಮುಖ್ಯಮಂತ್ರಿಗಳ ಅಧಿಕೃತ ನಿವಾಸವನ್ನಾಗಿ ಪರಿವರ್ತಿಸಿದ್ದಾರೆ. ಹಳೆಯ ಕಟ್ಟಡವನ್ನು ಸಂಪೂರ್ಣವಾಗಿ ನವೀಕರಿಸಲಾಗಿದ್ದು, ನಾಮಫಲಕವನ್ನು ಸಹ ಅಳವಡಿಸಲಾಗಿದೆ. ನವೀಕೃತ ಗಂಗಾ ನಿವಾಸದಲ್ಲಿರುವ ಕೊಠಡಿಗಳಿಗೂ ನದಿಗಳ ಹೆಸರುಗಳನ್ನು ಇಡಲಾಗಿದ್ದು, ಹೇಮಾವತಿ, ಶಾಲ್ಮಲ, ತುಂಗಭದ್ರಾ ಎಂದು ಹೆಸರಿಸಲಾಗಿದೆ. ಕಾವೇರಿ ನಿವಾಸ ಮತ್ತು ಕೃಷ್ಣ ಕಚೇರಿಗಳ ಮಾದರಿಯಲ್ಲೇ ಈ ನಿವಾಸಕ್ಕೂ ನದಿ ಹೆಸರಿಡಲಾಗಿದೆ.
ಭಾನುವಾರ ರಾತ್ರಿ ಗಂಗಾ ನಿವಾಸದಲ್ಲಿ ಹೋಮ ಹವನಗಳು ನಡೆದಿದ್ದು, ಇಂದು (ನವೆಂಬರ್ 16) ಕಾರ್ತಿಕ ಮಾಸದ ಸೋಮವಾರದಂದು ಡಿಕೆ ಶಿವಕುಮಾರ್ ಕುಟುಂಬಸ್ಥರು ಹಾಗೂ ಆಪ್ತರೊಂದಿಗೆ ಶಾಸ್ತ್ರೋಕ್ತವಾಗಿ ಗೃಹಪ್ರವೇಶ ಮಾಡುತ್ತಿದ್ದಾರೆ. ಸದಾಶಿವನಗರದಲ್ಲಿದ್ದ ನಿವಾಸದಿಂದ ನಿರ್ವಹಿಸುತ್ತಿದ್ದ ಹಲವು ಸಾರ್ವಜನಿಕ ಕೆಲಸಗಳನ್ನು ಇನ್ನು ಮುಂದೆ ಗಂಗಾ ನಿವಾಸದಿಂದಲೇ ನಿರ್ವಹಿಸಲಿದ್ದಾರೆ. ಮುಖ್ಯಮಂತ್ರಿಗಳ ಭೇಟಿಗೆ ಬರುವವರಿಗೆ ವಿಶೇಷ ಭದ್ರತಾ ವ್ಯವಸ್ಥೆ ಹಾಗೂ ಪ್ರತ್ಯೇಕ ಮಾರ್ಗವನ್ನೂ ಕಲ್ಪಿಸಲಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
