ಪ್ರತಿ ಚುನಾವಣೆಯಲ್ಲಿ ಧೋರಣೆ ಬದಲಿಸುವ ಕುಮಾರಸ್ವಾಮಿ ಯಾವ ಧರ್ಮಯುದ್ಧದ ಬಗ್ಗೆ ಮಾತಾಡುತ್ತಾರೆ? ಚಲುವರಾಯಸ್ವಾಮಿ

|

Updated on: Apr 01, 2024 | 1:12 PM

ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಅವರು ತಮ್ಮ ಪಕ್ಷಕ್ಕೆ ಬಹುಮತ ಬರದಿದ್ದರೆ ಪಕ್ಷವನ್ನು ವಿಸರ್ಜಿಸುವುದಾಗಿ ಹೇಳಿದ್ದರು. ಈಗ ಬಿಜೆಪಿ ಜೊತೆ ಹೊಂದಾಣಿಕೆ ಮಾಡಿಕೊಂಡು ಧರ್ಮಯುದ್ಧದ ಮಾತಾಡುತ್ತಿದ್ದಾರೆ. ಅಸಲಿಗೆ ಕಾಂಗ್ರೆಸ್ ಧರ್ಮಯುದ್ಧ ಅಂತ ಹೇಳಬೇಕು ಎಂದು ಚಲುವರಾಯಸ್ವಾಮಿ ಹೇಳಿದರು

ಮಂಡ್ಯ: ಅಪ್ತಮಿತ್ರರಾಗಿದ್ದ ಕೃಷಿ ಸಚಿವ (agriculture minister) ಎನ್ ಚಲುವರಾಯಸ್ವಾಮಿ (N Cheluvarayaswamy) ಮತ್ತು ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್ ಡಿ ಕುಮಾರಸ್ವಾಮಿ (HD Kumaraswamy) ಈಗ ಹಾವು-ಮುಂಗುಲಿ. ಪರಸ್ಪರ ಟೀಕಿಸುವುದು ಚಲುವರಾಯಸ್ವಾಮಿ ಜೆಡಿಎಸ್ ಬಿಟ್ಟಾಗಿನಿಂದ ಜಾರಿಯಲ್ಲಿದೆ. ನಗರದಲ್ಲಿಂದು ಮಂಡ್ಯ ಟಿವಿ9 ವರದಿಗಾರನೊಂದಿಗೆ ಮಾತಾಡಿದ ಸಚಿವ, ಈ ಬಾರಿಯ ಲೋಕಸಭಾ ಚುನಾವಣೆಯನ್ನು ಕುಮಾರಸ್ವಾಮಿ ಧರ್ಮಯುದ್ಧ ಅಂತ ಹೇಳಿರುವುದನ್ನು ಅಪಹಾಸ್ಯ ಮಾಡಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದಂತೆ ನಡೆದುಕೊಂಡಿದ್ದಾರೆ ಮತ್ತು ಡಿಕೆ ಶಿವಕುಮಅರ್ ಸತ್ಯದ ಪರ ನಿಂತಿದ್ದಾರೆ. ಹೀಗಿರುವಾಗ ಧರ್ಮಯುದ್ಧ ಹೇಗಾಗುತ್ತದೆ? ಕುಮಾರಸ್ವಾಮಿ ಪ್ರತಿ ಚುನಾವಣೆಯಲ್ಲಿ ತಮ್ಮ ನಿಲುವು ಬದಲಾಯಿಸುತ್ತಾರೆ. ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಅವರು ತಮ್ಮ ಪಕ್ಷಕ್ಕೆ ಬಹುಮತ ಬರದಿದ್ದರೆ ಪಕ್ಷವನ್ನು ವಿಸರ್ಜಿಸುವುದಾಗಿ ಹೇಳಿದ್ದರು. ಈಗ ಬಿಜೆಪಿ ಜೊತೆ ಹೊಂದಾಣಿಕೆ ಮಾಡಿಕೊಂಡು ಧರ್ಮಯುದ್ಧದ ಮಾತಾಡುತ್ತಿದ್ದಾರೆ. ಅಸಲಿಗೆ ಕಾಂಗ್ರೆಸ್ ಧರ್ಮಯುದ್ಧ ಅಂತ ಹೇಳಬೇಕು ಎಂದು ಚಲುವರಾಯಸ್ವಾಮಿ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: ಹೆಚ್ ಡಿ ಕುಮಾರಸ್ವಾಮಿ ಕುಕ್ಕರ್ ಬಾಂಬ್! ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಡಿಕೆ ಸುರೇಶ್ 4 ಲಕ್ಷಕ್ಕೂ ಹೆಚ್ಚು ಕುಕ್ಕರ್ ಹಂಚಿಕೆ?   

Follow us on