ಅಮಿತ್ ಶಾರನ್ನು ಅವಮಾನಿಸುವ ಉದ್ದೇಶದಿಂದ ಯತೀಂದ್ರ ಕಾಮೆಂಟ್ ಮಾಡಿಲ್ಲ: ಸಿದ್ದರಾಮಯ್ಯ
ಅಪರೇಶನ್ ಹಸ್ತದ ಬಗ್ಗೆ ಮಾರ್ಮಿಕವಾಗಿ ಮಾತಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಪಕ್ಷದ ತತ್ವ-ಸಿದ್ಧಾಂತ ಮತ್ತು ನಾಯಕತ್ವವನ್ನು ಒಪ್ಪಿಕೊಂಡು ಬರುವ ಬೇರೆ ಪಕ್ಷಗಳ ನಾಯಕರಿಗೆ ಸ್ವಾಗತವಿದೆ ಎಂದು ಹೇಳಿದರು.
ಮೈಸೂರು: ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah), ತಮ್ಮ ಮಗ ಯತೀಂದ್ರ ಸಿದ್ದರಾಮಯ್ಯ (Yathindra Siddaramaiah) ಅವರು ಅಮಿತ್ ಶಾ (Amit Shah) ಅವರ ಬಗ್ಗೆ ಸಿಬಿಐ ಕೋರ್ಟಿಗೆ ಸಲ್ಲಿಸಿರುವ ವರದಿಯನ್ನು ಆಧಾರವಾಗಿಟ್ಟುಕೊಂಡು ಕಾಮೆಂಟ್ ಮಾಡಿದ್ದಾರೆಯೇ ಹೊರತು ಅವರನ್ನು ಅವಮಾನಿಸಿಬೇಕೆಂಬ ಉದ್ದೇಶದಿಂದ ಯಾವುದನ್ನೂ ಹೇಳಿಲ್ಲ ಎಂದರು. ರಾಜ್ಯದ ಹಿರಿಯ ರಾಜಕಾರಣಿ ಮತ್ತು ಹಾಲಿ ಸಂಸದ ವಿ ಶ್ರೀನಿವಾಸ್ ಪ್ರಸಾದ್ ರನ್ನು ತಾವು ಭೇಟಿಯಾಗಿಲ್ಲ, ಆದರೆ ಸಚಿವರಾದ ಹೆಚ್ ಸಿ ಮಹದೇವಪ್ಪ ಮತ್ತು ಕೆ ವೆಂಕಟೇಶ್ ಭೇಟಿಯಾಗಿರುವರೆಂದು ಹೇಳಿದ ಸಿದ್ದರಾಮಯ್ಯ, ಅವರು ಏನು ಭರವಸೆ ನೀಡಿದ್ದಾರೆನ್ನುವುದನ್ನು ಅವರಿಬ್ಬರಿಗೆ ಕೇಳಬೇಕು, ಫೋನಲ್ಲೂ ತಾನು ಅವರೊಂದಿಗೆ ಮಾತಾಡಿಲ್ಲ ಎಂದರು. ಅಪರೇಶನ್ ಹಸ್ತದ ಬಗ್ಗೆ ಮಾರ್ಮಿಕವಾಗಿ ಮಾತಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಪಕ್ಷದ ತತ್ವ-ಸಿದ್ಧಾಂತ ಮತ್ತು ನಾಯಕತ್ವವನ್ನು ಒಪ್ಪಿಕೊಂಡು ಬರುವ ಬೇರೆ ಪಕ್ಷಗಳ ನಾಯಕರಿಗೆ ಸ್ವಾಗತವಿದೆ ಎಂದು ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಅಮಿತ್ ಶಾ ಬಗ್ಗೆ ಅವಹೇಳನಕಾರಿ ಹೇಳಿಕೆ: ಯತೀಂದ್ರ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ದೂರು