ಕುಮಾರಸ್ವಾಮಿ ಧರಿಸಿದ್ದು ಬಿಜೆಪಿ ಚಿಹ್ನೆಯಿರುವ ಕೇಸರಿ ಶಲ್ಯ ಅಲ್ಲವೇ ಅಲ್ಲ, ನಮ್ಮ ತತ್ವಸಿದ್ಧಾಂತಗಳೇ ಬೇರೆ: ಜಿಟಿ ದೇವೇಗೌಡ

|

Updated on: Feb 07, 2024 | 3:04 PM

ಬಿಜೆಪಿಯ ತತ್ವ ಸಿದ್ಧಾಂತಗಳೇ ಬೇರೆ ತಮ್ಮ ಪಕ್ಷದ ತತ್ವ ಸಿದ್ಧಾಂತಗಳೇ ಬೇರೆ ಎಂದ ದೇವೇಗೌಡ ಹೇಳಿದರು. ತಮ್ಮ ಪಕ್ಷದ ಚಿಹ್ನೆ, ಬಾವುಟ, ಸಿದ್ಧಾಂತ ಮತ್ತು ದ್ಯೇಯಗಳಿಂದ ಅಲಗುವ ಸಾಧ್ಯತೆಯೇ ಇಲ್ಲ ಎಂದು ಹೇಳಿದ ಜಿಟಿ ದೇವೇಗೌಡ ಸುಖಾಸುಮ್ಮನೆ ಮತ್ತು ವಿನಾಕಾರಣ ಕುಮಾರಸ್ವಾಮಿ ಕೇಸರಿ ಶಾಲು ಧರಿಸಿದರು ಅಂತ ವಿವಾದ ಸೃಷ್ಟಿಸಲಾಗಿದೆ ಎಂದರು.

ಮೈಸೂರು: ಇತ್ತೀಚಿಗೆ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್ ಡಿ ಕುಮಾರಸ್ವಾಮಿ (HD Kumaraswamy) ಸಮಾರಂಭವೊಂದರಲ್ಲಿ ಕೇಸರಿ ಶಲ್ಯ (Saffron shawl) ಧರಿಸಿದ್ದು ಭಾರೀ ಚರ್ಚೆಗೆ ಗ್ರಾಸವಾಗಿದೆ. ಪಕ್ಷದ ಕೋರ್ ಸಮಿತಿ ಅಧ್ಯಕ್ಷರಾಗಿರುವ ಜಿಟಿ ದೇವೇಗೌಡ (GT Deve Gowda) ಇಂದು ಮೈಸೂರಲ್ಲಿ ಮಾತಾಡಿ, ಕುಮಾರಸ್ವಾಮಿ ಧರಿಸಿದ್ದು ಕೇಸರಿ ಶಾಲಲ್ಲ, ಆಂಜನೇನ ಭಕ್ತರು ಧರಿಸುವ ಕೆಂಪು ಶಲ್ಯ ಅಂತ ಹೇಳಿ ಡ್ಯಾಮೇಜ್ ಕಂಟ್ರೋಲ್ ಪ್ರಯತ್ನಕ್ಕೆ ಇಳಿದರು. ಆಂಜನೇಯನ ದೇವಸ್ಥಾನಗಳು ಇರುವ ಕಡೆ ಕೆಂಪು ಶಾಲು ಧರಿಸುತ್ತಾರೆ ಮತ್ತು ಮೇಲೆ ಗುಡಿಯ ಮೇಲೆ ಕೆಂಪು ಬಾವುಟ ಹಾರಿಸಿರುತ್ತಾರೆ. ಕುಮಾರಸ್ವಾಮಿಯರು ಹನುಮ ದೇವಸ್ಥಾನಕ್ಕೆ ಹೋದಾಗ ಅಲ್ಲಿದ್ದ ಯುವಕನೊಬ್ಬ ಅವರಿಗೆ ಹನುಮಾನ್ ಶಲ್ಯ ಹೊದಿಸಿದ್ದಾನೆ. ಕುಮಾರಸ್ವಾಮಿ ಹೆಗಲ ಮೇಲಿದ್ದಿದ್ದು ಬಿಜೆಪಿಯ ಕಮಲ ಚಿಹ್ನೆ ಇರುವ ಕೇಸರಿ ಶಾಲು ಅಲ್ಲವೇ ಅಲ್ಲ, ಅವರು ಅದನ್ನು ಧರಿಸುವುದು ಸಾಧ್ಯವೇ ಇಲ್ಲ ಎಂದು ಜಿಟಿಡಿ ಹೇಳಿದರು. ಬಿಜೆಪಿಯ ತತ್ವ ಸಿದ್ಧಾಂತಗಳೇ ಬೇರೆ ತಮ್ಮ ಪಕ್ಷದ ತತ್ವ ಸಿದ್ಧಾಂತಗಳೇ ಬೇರೆ ಎಂದ ದೇವೇಗೌಡ ಹೇಳಿದರು. ತಮ್ಮ ಪಕ್ಷದ ಚಿಹ್ನೆ, ಬಾವುಟ, ಸಿದ್ಧಾಂತ ಮತ್ತು ದ್ಯೇಯಗಳಿಂದ ಅಲಗುವ ಸಾಧ್ಯತೆಯೇ ಇಲ್ಲ ಎಂದು ಹೇಳಿದ ಜಿಟಿ ದೇವೇಗೌಡ ಸುಖಾಸುಮ್ಮನೆ ಮತ್ತು ವಿನಾಕಾರಣ ಕುಮಾರಸ್ವಾಮಿ ಕೇಸರಿ ಶಾಲು ಧರಿಸಿದರು ಅಂತ ವಿವಾದ ಸೃಷ್ಟಿಸಲಾಗಿದೆ ಎಂದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us on