Karnataka Assembly Polls; ಕುಮಾರಸ್ವಾಮಿ ಸದಾ ನನ್ನ ಒಳಿತನ್ನೇ ಬಯಸುತ್ತಾರೆ, ಮುಂದೆ ಅದು ಜನರಿಗೆ ಗೊತ್ತಾಗಲಿದೆ: ಪ್ರೀತಂ ಜೆ ಗೌಡ, ಬಿಜೆಪಿ ಶಾಸಕ
ಒಂದು ಪಕ್ಷ ಸ್ವರೂಪ್ ಬದಲು ಭವಾನಿ ರೇವಣ್ಣಗೆ ಟಿಕೆಟ್ ನೀಡಿದ್ದರೆ ಪ್ರಿತಂ ಗೌಡಗೆ ಗೆಲ್ಲುವುದು ಕಷ್ಟವಾಗುತ್ತಿತ್ತು. ಅದನ್ನು ಕುಮಾರಸ್ವಾಮಿಯೇ ತಪ್ಪಿಸಿದರು ಅನ್ನೋದು ಅವರ ಮಾತಿನ ತಾತ್ಪರ್ಯವೇ?
ಹಾಸನ: ಜೆಡಿಎಸ್ ಪಕ್ಷ ಹಾಸನ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಸ್ವರೂಪ್ ಪ್ರಕಾಶ್ ಗೆ (Swaroop Prakash) ಟಿಕೆಟ್ ನೀಡಿರುವುದನ್ನು ಬಿಜೆಪಿ ಅಭ್ಯರ್ಥಿ ಪ್ರೀತಂ ಜೆ ಗೌಡ (Preetham Gowda) ಸ್ವಾಗತಿಸಿದ್ದಾರೆ. ತಮ್ಮ ಸ್ಪರ್ಧೆ ಏನಿದ್ದರೂ ಜೆಡಿಎಸ್ ಜೊತೆ ಎಂದು ಹೇಳುವ ಅವರು ಈಗಾಗಲೇ ಹೆಚ್ ಡಿ ಕುಮಾರಸ್ವಾಮಿ (HD Kumaraswamy) ಮತ್ತು ಹೆಚ್ ಡಿ ರೇವಣ್ಣ ಮಧ್ಯೆ ಹುಟ್ಟಿಕೊಂಡಿರುವ ವೈಮನಸ್ಸಿಗೆ ತುಪ್ಪ ಸುರಿಯುವ ಪ್ರಯತ್ನ ಮಾಡುತ್ತಾರೆ. ಟಿವಿ9 ಕನ್ನಡ ವಾಹಿನಿಯ ಹಾಸನ ವರದಿಗಾರನೊಂದಿಗೆ ನಡೆಸಿರುವ ಮಾತುಕತೆಯಲ್ಲಿ ಅವರು, ಕುಮಾರಸ್ವಾಮಿ ಹಾಸನ ವಿಧಾನಸಭಾ ಕ್ಷೇತ್ರವನ್ನು ಸವಾಲಾಗಿ ಸ್ವೀಕರಿಸಿ ಖುದ್ದು ತಾನೇ ಪ್ರಚಾರ ನಡೆಸುವುದಾಗಿ ಹೇಳಿರುವ ಬಗ್ಗೆ ಪ್ರತಿಕ್ರಿಯಿಸಿ, ಕುಮಾರಣ್ಣ ಯಾವತ್ತಿಗೂ ತನ್ನ ಹಿತೈಷಿ, ಅವರು ಸದಾ ತನ್ನ ಒಳಿತನ್ನೇ ಬಯಸುತ್ತಾರೆ, ಇದೆಲ್ಲ ಮಾಧ್ಯಮ ಮತ್ತು ಜನಗಳಿಗೆ ಮುಂದೆ ಗೊತ್ತಾಗಲಿದೆ ಎಂದು ಹೇಳುತ್ತಾರೆ. ಅವರು ಹೇಳಿದ್ದನ್ನು ಅರ್ಥಮಾಡಿಕೊಳ್ಳಲು ಕಷ್ಟವಾಗುತ್ತಿದೆ ಮಾರಾಯ್ರೇ. ಒಂದು ಪಕ್ಷ ಸ್ವರೂಪ್ ಬದಲು ಭವಾನಿ ರೇವಣ್ಣಗೆ ಟಿಕೆಟ್ ನೀಡಿದ್ದರೆ ಪ್ರಿತಂ ಗೌಡಗೆ ಗೆಲ್ಲುವುದು ಕಷ್ಟವಾಗುತ್ತಿತ್ತು. ಅದನ್ನು ಕುಮಾರಸ್ವಾಮಿಯೇ ತಪ್ಪಿಸಿದರು ಅನ್ನೋದು ಅವರ ಮಾತಿನ ತಾತ್ಪರ್ಯವೇ?
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಮತ್ತಷ್ಟು ಚುನಾವಣಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ