Tallest idol of god in Kerala: ಆಂಧ್ರಪ್ರದೇಶದಲ್ಲಿ ಕೆತ್ತಿರುವ 35-ಅಡಿ ಎತ್ತರದ ಹನುಮಾನ್ ವಿಗ್ರಹ ಏಪ್ರಿಲ್ 27ರಂದು ಕೇರಳದ ತ್ರಿಶ್ಶೂರಲ್ಲಿ ಪ್ರತಿಷ್ಠಾಪನೆ
ಆಂಧ್ರಪ್ರದೇಶದ ಖ್ಯಾತ ಶಿಲ್ಪಿ ವಿ ಸುಬ್ರಮಣಿಯಂ ಆಚಾರ್ಲು ಹನುಮಾನ್ ವಿಗ್ರಹವನ್ನು ವಿನ್ಯಾಸಗೊಳಿಸಿದ್ದಾರೆ ಮತ್ತು 40 ಕಲಾವಿದರು 4 ತಿಂಗಳು ಕಾಲ ಕೆತ್ತನೆಯಲ್ಲಿ ತೊಡಗಿ ಅದನ್ನು ಫೂರ್ತಿಗೊಳಿಸಿದ್ದಾರೆ.
ತ್ರಿಸ್ಸೂರ್ (ಕೇರಳ): ಏಕಶಿಲೆಯಲ್ಲಿ ಕೆತ್ತಲಾಗಿರುವ 35-ಅಡಿ ಎತ್ತರದ ಹನುಮಾನ್ ವಿಗ್ರಹವನ್ನು (Hanuman idol) ಕೇರಳದ ತ್ರಿಶ್ಶೂರಲ್ಲಿರುವ (Thrissur) ಶ್ರೀ ಸೀತಾರಾಮ ಸ್ವಾಮಿ ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಲಿದ್ದು ಇದು ರಾಜ್ಯದಲ್ಲೇ ಅತಿ ಎತ್ತರದ ದೇವರ ವಿಗ್ರಹ (the tallest idol of god) ಎಂದು ಹೇಳಲಾಗುತ್ತಿದೆ. ಆಂಧ್ರಪ್ರದೇಶದಲ್ಲಿ ಕೆತ್ತಲಾಗಿರುವ ವಿಗ್ರಹವನ್ನು ಟ್ರಕ್ಕೊಂದರಲ್ಲಿ ತ್ರಿಸ್ಸೂರ್ ಗೆ ತಂದಾಗ ಸಾವಿರಾರು ಜನ ಭಕ್ತಿಭಾವದಿಂದ ಅದನ್ನು ಸ್ವಾಗತಿಸಿದರು. ವಿಗ್ರಹವನ್ನು 20 ಅಡಿ ಎತ್ತರದ ಕಟ್ಟೆಯ ಮೇಲೆ ಪ್ರತಿಷ್ಠಾಪಿಸಲು ದೇವಸ್ಥಾನದ ಆಡಳಿತ ಮಂಡಳಿ ನಿರ್ಧರಿಸಿದ್ದ್ದು ವಿಗ್ರಹದ ಒಟ್ಟು ಎತ್ತರ 55 ಅಡಿ ಆಗಲಿದೆ. ವಿಗ್ರಹ ಸೊಬಗನ್ನು ಮತ್ತಷ್ಟು ಹೆಚ್ಚಿಸಲು ಲೇಸರ್ ಲೈಟಿಂಗ್ ವ್ಯವಸ್ಥೆ ಮಾಡಲಾಗುವುದಂತೆ.
‘ಪುಷ್ಪಗಿರಿಯ ಪೂನ್ಕುನ್ನಮ್ ಶ್ರೀ ಸೀತಾರಾಮ ಸ್ವಾಮಿ ದೇವಸ್ಥಾನದಲ್ಲಿ ಏಪ್ರಿಲ್ 27 ರಂದು ಮಹಾ ಕುಂಭಮೇಳ ಅಯೋಜಿಸಲಾಗುವುದು, ಮೇಳದ ಭಾಗವಾಗಿ ದೇವಸ್ಥಾನದ ಮುಂಭಾಗ 55-ಅಡಿಯ ಹನುಮಾನ್ ವಿಗ್ರಹವನ್ನು ಪ್ರತಿಷ್ಠಾಪಿಸಲಾಗುವುದು. ಎತ್ತರದ ಹನುಮಾನ್ ವಿಗ್ರಹವನ್ನು ಪ್ರತಿಷ್ಠಾಪಿಸುವುದು ಭಕ್ತರ ಹೆಬ್ಬಯಕೆಯಾಗಿತ್ತು. ಭಕ್ತಾದಿಗಳ ನೆರವಿನಿಂದ ವಿಗ್ರಹ ಪ್ರತಿಷ್ಠಾಪಿಸುವುದು ನಮಗೆ ಸಾಧ್ಯವಾಗುತ್ತಿದೆ,’ ಎಂದು ಸಾರ್ವಜನಿಕ ಸಂಪರ್ಕ ಸಮಿತಿಯ ಸಂಚಾಲಕ ಬಿ ಮೂರ್ತಿ ಹೇಳುತ್ತಾರೆ.
ಇದನ್ನೂ ಓದಿ: ಪೊಲೀಸ್ ಅಧಿಕಾರಿ, ಸಿಬ್ಬಂದಿಗೆ ಚುನಾವಣಾ ಭತ್ಯೆ ಪರಿಷ್ಕರಿಸಿ ರಾಜ್ಯ ಸರ್ಕಾರ ಆದೇಶ
ಆಂಧ್ರಪ್ರದೇಶದ ಖ್ಯಾತ ಶಿಲ್ಪಿ ವಿ ಸುಬ್ರಮಣಿಯಂ ಆಚಾರ್ಲು ಹನುಮಾನ್ ವಿಗ್ರಹವನ್ನು ವಿನ್ಯಾಸಗೊಳಿಸಿದ್ದಾರೆ ಮತ್ತು 40 ಕಲಾವಿದರು 4 ತಿಂಗಳು ಕಾಲ ಕೆತ್ತನೆಯಲ್ಲಿ ತೊಡಗಿ ಅದನ್ನು ಫೂರ್ತಿಗೊಳಿಸಿದ್ದಾರೆ. ವಿಗ್ರಹ ತಯಾರಾದ ಬಳಿಕ ಅದನ್ನು ನಂದ್ಯಾಲದಲ್ಲಿರುವ ಅಲ್ಲಗಡಗೆ ಸಾಗಿಸಿ ಅಲ್ಲಿಂದ ತ್ರಿಶ್ಶೂರ್ಗೆ ತರಲಾಗಿದೆ. ದೇವಸ್ಥಾನ ಟ್ರಸ್ಟ್ ಈ ವಿಗ್ರಹಕ್ಕಾಗಿ ರೂ. 2 ಕೋಟಿಗೂ ಹೆಚ್ಚು ಖರ್ಚು ಮಾಡಿದೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ